ಪಾದ್ರಿಗೆ ತಗಲಿದ ‘ಮೊಬೈಲ್ ಗೇಮ್’ ಚಟ; ಚರ್ಚ್‌ನ ಕ್ರೆಡಿಟ್ ಕಾರ್ಡ್ ಬಳಸಿ ಲಕ್ಷಾಂತರ ರೂಪಾಯಿ ಖರ್ಚು !

ವಾಷಿಂಗ್ಟನ್ (ಅಮೇರಿಕಾ) – ಈ ಘಟನೆ ಅಮೆರಿಕದ ಆಗಿದ್ದು ಫಿಲಾಡೇಲಫಿಯಾದ ಸೇಂಟ್ ಥಾಮಸ್ ಮೊರ ಚರ್ಚ್‌ನಲ್ಲಿ ಘಟಿಸಿದ್ದು ಅಲ್ಲಿಯ ಓರ್ವ ಪಾದ್ರಿಗೆ ‘ಮೊಬೈಲ ಗೇಮ್’ ಆಡುವ ಚಟವಿತ್ತು. ಇದರಿಂದ ಅವನು ಚರ್ಚ್‌ನ ಕ್ರೆಡಿಟ್ ಕಾರ್ಡ್ ಅನ್ನು ದುರುಪಯೋಗ ಮಾಡಿಕೊಂಡು ೪೦ ಸಾವಿರ ಅಮೆರಿಕನ್ ಡಾಲರ್ (೩೩ ಲಕ್ಷ ರೂಪಾಯಿಗಿಂತಲೂ ಹೆಚ್ಚಿನ ಹಣ) ಖರ್ಚು ಮಾಡಿದ್ದಾನೆ. ಹೆಚ್ಚು ಖರ್ಚು ಮಾಡಿರುವ ಸಂಶಯದ ಮೇರೆಗೆ ಚರ್ಚ್‌ನ ಆಡಳಿತದಿಂದ ಅಪರಾಧಿ ರೆವ್ಹರಂಡ ಲಾರೆನ್ಸ್ ಕೋಝಾಕ್ ಪಾದ್ರಿಯನ್ನು ಹುದ್ದೆಯಿಂದ ತೆಗೆದು ಹಾಕಿದರು. ಏಪ್ರಿಲ್ ೨೫ ರಂದು ಕೋಝಾಕ್ ಮೇಲೆ ಅಧಿಕೃತವಾಗಿ ಕಳ್ಳತನ ಮತ್ತು ಇತರ ಸಂಬಂಧಿತ ಅಪರಾಧದ ಆರೋಪ ಮಾಡಲಾಯಿತು.

‘ಫಿಲಾಡೆಲ್ಫಿಯಾ ಇಂಕ್ವಯರರ’ ಈ ಕಂಪನಿಯ ವರದಿಯಲ್ಲಿ, ಕೋಝಾಕ್ ಇವನು ‘ಕ್ಯಾಂಡಿ ಕ್ರಶ್’ ಮತ್ತು ‘ಮಾರಿಯೋ ಕಾರ್ಟ್ ಟೂರ್’ ಇವುಗಳಂತ ಮೊಬೈಲ್‌ನ ಆಟಗಳಿಗಾಗಿ ಚರ್ಚ್‌ನ ಹಣವನ್ನು ಖರ್ಚು ಮಾಡಿದ್ದು ಬೆಳಕಿಗೆ ಬಂದಿದೆ. ತನಿಖೆಯ ಸಮಯದಲ್ಲಿ, ಚರ್ಚೆಗಾಗಿ ಕೆಲಸ ಮಾಡುವ ಓರ್ವ ಲೆಕ್ಕಪರಿಶೋಧಕನು ಚರ್ಚ್‌ಗೆ ಸಂಬಂಧಿಸಿದ ‘ಕ್ರೆಡಿಟ್ ಕಾರ್ಡ್’ ಮೂಲಕ ಬೃಹತ್ ಪ್ರಮಾಣದ ವ್ಯವಹಾರ ಕಂಡುಬಂದಿತು. ಈ ಖರ್ಚು 2019 ರಲ್ಲಿ ಆರಂಭವಾಯಿತು ಮತ್ತು ಜುಲೈ ೨೦೨೨ ರಲ್ಲಿ ಕೋಝಾಕ್ ಸಿಲುಕುವವರೆಗೂ ಅದು ಮುಂದುವರೆದಿತ್ತು. ಕ್ರೆಡಿಟ್ ಕಾರ್ಡಿನ ಸಾಲದ ಒಂದು ಭಾಗ ತೀರಿಸುವುದಕ್ಕಾಗಿ ಕೋಝಾಕ್ ತನ್ನ ಹತ್ತಿರ ಇರುವ ೧೦ ಸಾವಿರ ಡಾಲರ್ ಉಪಯೋಗಿಸಿದ್ದನು.