ಬೆಂಗಳೂರು (ಕರ್ನಾಟಕ) – ಹಣದ ವಿಚಾರವಾಗಿ ದೂರು ನೀಡಲು ಬಂದಿದ್ದ ಮಹಿಳೆಯರ ಗುಂಪೊಂದು ಮಹಿಳಾ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಮತ್ತು ಇತರ ಪೊಲೀಸರ ಮೇಲೆ ಹಲ್ಲೆ ನಡೆಸಿದ ಘಟನೆ ಇಲ್ಲಿನ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಮೂವರು ಮಹಿಳೆಯರನ್ನು ಬಂಧಿಸಲಾಗಿದೆ. ಆಯೇಶಾ ತಾಜ್, ಫೌಜಿಯಾ ಮತ್ತು ಅರ್ಬಿನ್ ತಾಜ್ ಬಂಧಿತ ಮಹಿಳೆಯರಾಗಿದ್ದಾರೆ.
ಹಣದ ವಿಚಾರವಾಗಿ ಮಹಿಳೆ ಮತ್ತು ಶೋಯೆಬ್ ಎಂಬವನ ನಡುವೆ ವಾದ ನಡೆದಿತ್ತು. ಈ ಬಗ್ಗೆ ದೂರು ನೀಡಲು ಮಹಿಳೆಯರು ನಾಸಿರ್ ಎಂಬವನ ಜೊತೆ ಠಾಣೆಗೆ ಬಂದಿದ್ದಳು; ಆದರೆ ದೂರು ದಾಖಲಿಸಿಕೊಳ್ಳದಿದ್ದರಿಂದ ಪೊಲೀಸ್ ಠಾಣೆಯಲ್ಲಿ ಗಲಾಟೆ ಮಾಡಲು ಶುರುಮಾಡಿದರು. ಇದರಿಂದ ಅಸಮಾಧಾನಗೊಂಡ ಸಬ್ ಇನ್ಸ್ ಪೆಕ್ಟರ್ ಸುರೇಖಾ, ‘ದೂರು ಕೊಡುವುದಾದರೆ ಕೊಡಿ, ಇಲ್ಲವಾದರೆ ಹೊರಟು ಹೋಗಿ’ ಎಂದಿದ್ದಾರೆ. ಆ ನಂತರ ಅವರ ನಡುವೆ ವಾಗ್ವಾದ ನಡೆದಿದ್ದು ಮಹಿಳೆಯರು ಸೇರಿ ಸುರೇಖಾ ಅವರನ್ನು ಥಳಿಸಿದ್ದಲ್ಲದೇ ಇತರ ಪೊಲೀಸರ ಮೇಲೂ ಕೈ ಮಾಡಿದ್ದಾರೆ. ಘಟನೆಯ ಬಳಿಕ ಮೂವರನ್ನು ಬಂಧಿಸಲಾಗಿದೆ. ಬಂಧಿತರು ತಮ್ಮ ಹೆಸರು ಮತ್ತು ವಿಳಾಸವನ್ನು ತಪ್ಪಾಗಿ ಹೇಳಿದ್ದರು. ಅವರ ಆಧಾರ್ ಕಾರ್ಡ್ ಪರಿಶೀಲಿಸಿದಾಗ ನಿಜವಾದ ಹೆಸರು ಬೆಳಕಿಗೆ ಬಂದಿದೆ.