ಖಲಿಸ್ತಾನಿ ಭಯೋತ್ಪಾದಕ ಗೋಲ್ಡಿ ಬ್ರಾರ್ ಜೀವಂತ ! – ಅಮೆರಿಕದ ಪೊಲೀಸರಿಂದ ಮಾಹಿತಿ

ಗೋಲ್ಡಿ ಬ್ರಾರ್ (ಎಡಬದಿಗೆ), ಹತ್ಯೆ ಆಗಿರುವ ವ್ಯಕ್ತಿ ಝೇವಿಯರ್ ಗಲಾಡನಿ (ಬಲಬದಿಗೆ)

ವಾಷಿಂಗ್ಟನ್ (ಅಮೇರಿಕಾ) – ಖಲಿಸ್ತಾನಿ ಭಯೋತ್ಪಾದಕ ಮತ್ತು ಪಂಜಾಬಿ ಗಾಯಕ ಸಿಧ್ದು ಮೂಸೆವಾಲಾ ಹತ್ಯೆಯ ಪ್ರಕರಣದ ಪ್ರಮುಖ ಆರೋಪಿ ಸತಿವಂದರ್ ಸಿಂಗ್ ಅಲಿಯಾಸ್ ಗೋಲ್ಡಿ ಬ್ರಾರ್ ಹತನಾಗಿದ್ದಾನೆ ಎಂಬ ವರದಿಗಳು ಸುಳ್ಳಾಗಿವೆ ಎಂದು ಅಮೇರಿಕಾದ ಪೊಲೀಸರು ತಿಳಿಸಿದ್ದಾರೆ.

ಫ್ರೆಸ್ನೊ ಪೊಲೀಸ್ ಇಲಾಖೆ ಲೆಫ್ಟಿನೆಂಟ್ ವಿಲಿಯಂ ಜೆ. ಡೂಲೀ ಹೇಳಿಕೆ ಪ್ರಕಾರ, ಮೇ 1 ರಂದು ಫ್ರೆಸ್ನೋ ಪ್ರದೇಶದಲ್ಲಿ ಗೋಲಿಬಾರ್ ಸಂಭವಿಸಿತ್ತು. ಆ ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದರು. ಅವರಲ್ಲಿ ಒಬ್ಬ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದನು. ಆ ವ್ಯಕ್ತಿ ಗೋಲ್ಡಿ ಬ್ರಾರ್ ಅಲ್ಲ. ಸ್ವಾನ್ನಪ್ಪಿದ ಆ ವ್ಯಕ್ತಿಯ ಹೆಸರು ಝೇವಿಯರ್ ಗಲಾಡನಿ (37 ವರ್ಷ). ಗೋಲ್ಡಿ ಬ್ರಾರ್ ಬಗ್ಗೆ ಪ್ರಪಂಚದಾದ್ಯಂತ ಅನೇಕರು ನಮ್ಮನ್ನು ವಿಚಾರಿಸುತ್ತಿದ್ದಾರೆ. ಅವನ ಸಾವಿನ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಡಿತ್ತು. ಇದು ಎಲ್ಲಿಂದ ಮತ್ತು ಯಾರು ಪ್ರಾರಂಭಿಸಿದರು? ಎಂಬುದು ನಮಗೆ ಗೊತ್ತಿಲ್ಲ ಎಂದು ವಿಲಿಯಂ ತಿಳಿಸಿದ್ದಾರೆ.