‘ಇಸ್ರೋ’ದ ಹೊಸ ಅಧ್ಯಯನದಿಂದ ಬಂದಿರುವ ಮಾಹಿತಿ
ಬೆಂಗಳೂರು – ಚಂದ್ರನ ಮೇಲೆ ನಿರೀಕ್ಷೆಗಿಂತಲೂ ಹೆಚ್ಚು ಹಿಮ ಇದೆ. ಹಿಂದೆ ಮಾಡಿರುವ ಗಣನೆಗಿಂತಲೂ ೫ ರಿಂದ ೮ ಪಟ್ಟು ಹೆಚ್ಚು ಹಿಮ ಇದೆ; ಆದರೆ ಅದು ಚಂದ್ರನ ಕೆಳಗೆ ಇರುವುದು, ಮೇಲ್ಮೈ ಅಗೆದು ಅದನ್ನು ಹೊರಗೆ ತೆಗೆಯಬೇಕಾಗುತ್ತದೆ. ಹಿಮದ ಮೂಲಕ ನೀರು ಪಡೆಯಬಹುದು, ಇದರ ಉಪಯೋಗ ಚಂದ್ರನ ಮೇಲೆ ವಸಾಹತು ನಿರ್ಮಾಣ ಮಾಡುವುದಕ್ಕಾಗಿ ಮಾಡಬಹುದು, ಎಂದು ‘ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ’ ಎಂದರೆ ಇಸ್ರೋ ಈ ಮಾಹಿತಿ ನೀಡಿದೆ.
1. ಹಿಮದ ಸಂಗ್ರಹ ಚಂದ್ರನ ಎರಡು ಧ್ರುವಗಳ ಮೇಲೆ ಇದೆ. ಆದ್ದರಿಂದ ಮೇಲ್ಮೈ ಅಗೆದು ಹಿಮ ತೆಗೆಯಲು ಸಾಧ್ಯ, ಆದ್ದರಿಂದ ಭವಿಷ್ಯದಲ್ಲಿ ಮನುಷ್ಯ ಚಂದ್ರನ ಮೇಲೆ ದೀರ್ಘ ಕಾಲದವರೆಗೆ ವಾಸಿಸಬಹುದು. ಜಗತ್ತಿನಲ್ಲಿನ ಅನೇಕ ಬಾಹ್ಯಾಕಾಶ ಸಂಸ್ಥೆಗಳಿಗೆ ಇದರ ಲಾಭವಾಗುವುದು.
೨. ಇಸ್ರೋದ ಪ್ರಕಾರ ಚಂದ್ರನ ಉತ್ತರ ಧ್ರುವದ ಮೇಲೆ ದಕ್ಷಿಣ ಧ್ರುವಕ್ಕಿಂತಲೂ ಹೆಚ್ಚು ಹಿಮ ಇದೆ. ಚಂದ್ರನ ಧ್ರುವದ ಮೇಲೆ ಈ ಹಿಮ ಎಲ್ಲಿಂದ ಬಂದಿತು? ಈ ಪ್ರಶ್ನೆಯ ಬಗ್ಗೆ ಇಸ್ರೋ, ಇದು ಇಮ್ಬ್ರಿಯನ್ ಕಾಲದಲ್ಲಿನ ವಿಷಯವಾಗಿದೆ. ಆಗ ಚಂದ್ರ ನಿರ್ಮಾಣವಾಗುತ್ತಿತ್ತು. ಜ್ವಾಲಾಮುಖಿಯ ಕ್ರಿಯೆಯಿಂದ ಹೊರ ಬಂದಿರುವ ವಾಯು ನಿಧಾನವಾಗಿ ಪೃಷ್ಠಭಾಗದ ಕೆಳಗೆ ಲಕ್ಷಾಂತರ ವರ್ಷಗಳಿಂದ ಹಿಮದ ರೂಪದಲ್ಲಿ ಸಂಗ್ರಹವಾಗಿದೆ ಎಂದು ಹೇಳಿದೆ.