ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರಿಂದ ಸಂದೇಹ ವ್ಯಕ್ತ
ಶಿಲ್ಲಾಂಗ್ (ಮೇಘಾಲಯ) – ‘ರಾಷ್ಟ್ರೀಯ ಮಕ್ಕಳ ಹಕ್ಕುಗಳ ಆಯೋಗ’ದ ಅಧ್ಯಕ್ಷ ಪ್ರಿಯಾಂಕ್ ಕಾನುನಗೋ ಇವರು ಇತ್ತೀಚೆಗೆ ಮೇಘಾಲಯಕ್ಕೆ ಭೇಟಿ ನೀಡಿದ್ದರು. ಕೆಲವು ದಿನಗಳ ಹಿಂದೆ ರಾಜ್ಯದ ನೈಋತ್ಯ ಗಾರೋ ಹಿಲ್ಸ್ ಪ್ರದೇಶದ ಅಂಪತಿ ಜಿಲ್ಲೆಯಲ್ಲಿ ಬುಡಕಟ್ಟು ಉತ್ಸವದ ಸಂದರ್ಭದಲ್ಲಿ ಅಪ್ರಾಪ್ತ ಬಾಲಕಿಯರ ಮೇಲೆ ಹಲ್ಲೆ ಮತ್ತು ಸಾಮೂಹಿಕ ಅತ್ಯಾಚಾರ ನಡೆಸಲಾಯಿತು. ಈ ಘಟನೆಗೆ ಸಂಬಂಧಿಸಿದಂತೆ ಹಲವು ದೂರುಗಳು ಬಂದಿದ್ದವು. ಈ ಪ್ರದೇಶವು ಬಾಂಗ್ಲಾದೇಶದ ಗಡಿಯಾಗಿರುವುದರಿಂದ, ಈ ವಿಷಯವನ್ನು ತನಿಖೆ ಮಾಡಲು ಕಾನುನೊಗೋ ಸ್ವತಃ ಅಲ್ಲಿಗೆ ಹೋದರು. ಈ ಸಮಯದಲ್ಲಿ ತನಿಖೆಯ ನಂತರ, ಈ ದಾಳಿಕೋರರು ರೋಹಿಂಗ್ಯಾ ನುಸುಳುಕೋರರು ಎಂದು ಸಂದೇಹವಿದೆ ಹೇಳಿದರು.
ಈ ಸಂದರ್ಭದಲ್ಲಿ ಕಾನುನೊಗೋ ಅವರು ಸಂತ್ರಸ್ತರು ಮತ್ತು ಅವರ ಕುಟುಂಬಗಳನ್ನು ಭೇಟಿ ಮಾಡಿದರು. ಎಲ್ಲಾ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಲಿದೆ ಎಂದು ಕಾನುನೊಗೋ ಭರವಸೆ ನೀಡಿದರು. ಯಾವ ಅಪರಾಧಿಯೂ ತಪ್ಪಿಸಿಕೊಳ್ಳುವುದಿಲ್ಲ. ಇಂತಹ ಘಟನೆಗಳು ಮರುಕಳಿಸದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮಟ್ಟದಲ್ಲಿ ನೀತಿಗಳನ್ನು ರೂಪಿಸಲಾಗುವುದು ಎಂದು ಹೇಳಿದರು.
मेघालय के अमपति ज़िले में महिलाओं ने बताया कि कैसे रोहिंग्या घुसपैठिए मासूम बच्चियों को घरों से ले जा कर यौन हिंसा का शिकार बना रहे हैं।
भारत के संसाधन इन घुसपैठियों को देने वाले होश में रहें,भारत की बेटियाँ रोहिंग्या घुसपैठियों की हवस का संसाधन नहीं हैं।
हर एक अत्याचारी से… pic.twitter.com/eznOAU4xYP— प्रियंक कानूनगो Priyank Kanoongo (मोदी का परिवार) (@KanoongoPriyank) April 28, 2024
ಈ ಪ್ರಕರಣದಲ್ಲಿ ಪ್ರಮುಖ ಆರೋಪಿ ಸೇರಿದಂತೆ 8 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಅಸ್ಸಾಂ ಪೊಲೀಸರೊಂದಿಗೆ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಪ್ರಮುಖ ಆರೋಪಿಯನ್ನು ಏಪ್ರಿಲ್ 27 ರಂದು ಮಂಕಚಾರ್ ನಿಂದ ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಮುಖ್ಯಸ್ಥ ವಿಕಾಸ್ ಕುಮಾರ್ ಯಾದವ್ ತಿಳಿಸಿದ್ದಾರೆ.
ಮಕ್ಕಳ ರಕ್ಷಣೆಗೆ ಸರ್ಕಾರ ಎಲ್ಲ ಕ್ರಮ ಕೈಗೊಳ್ಳಬೇಕು ! – ಪ್ರಿಯಾಂಕ್ ಕಾನುನೊಗೋಈ ಕುರಿತು ಪ್ರತಿಕ್ರಿಯೆ ತಿಳಿಯಲು ‘ಸನಾತನ ಪ್ರಭಾತ’ ಪ್ರತಿನಿಧಿ ಪ್ರಿಯಾಂಕ್ ಕಾನುನೊಗೋ ಅವರನ್ನು ಸಂಪರ್ಕಿಸಿದಾಗ ಅವರು, ಸ್ಥಳೀಯ ದೂರುದಾರರು ನೀಡಿದ ವಿಶ್ವಾಸಾರ್ಹ ಮಾಹಿತಿಯ ಆಧಾರದ ಮೇಲೆ ಘಟನೆಯ ಹಿಂದೆ ರೋಹಿಂಗ್ಯಾಗಳ ಕೈವಾಡವಿರುವ ಹೆಚ್ಚಿನ ಸಾಧ್ಯತೆಗಳಿವೆ ಎಂದು ಹೇಳಿದರು. ಕೇವಲ ‘ರಾಷ್ಟ್ರೀಯ ಪೌರತ್ವ ನೋಂದಣಿ’ ಜಾರಿ ಮಾತ್ರವಲ್ಲ, ಮಕ್ಕಳ ರಕ್ಷಣೆಗೆ ಸರಕಾರ ಎಲ್ಲ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹೇಳಿದರು. |
ಸಂಪಾದಕೀಯ ನಿಲುವುಬಾಂಗ್ಲಾದೇಶಿ ಅಥವಾ ರೋಹಿಂಗ್ಯಾ ನುಸುಳುಕೋರರು ಭಾರತದಲ್ಲಿ ಅತ್ಯಾಚಾರ, ಭಯೋತ್ಪಾದಕ ದಾಳಿಯಂತಹ ಅಪರಾಧಗಳಲ್ಲಿ ಭಾಗಿಯಾಗಿದ್ದಾರೆ ಎಂಬುದು ಹಲವು ಬಾರಿ ಬಹಿರಂಗವಾಗಿದೆ. ಆದುದರಿಂದ ಈಗ ಸರಕಾರವು ಕೂಡಲೇ ‘ಎನ್.ಆರ್.ಸಿ.’ (ರಾಷ್ಟ್ರೀಯ ನಾಗರಿಕರ ನೋಂದಣಿ) ಜಾರಿಗೊಳಿಸಬೇಕು ಮತ್ತು ನುಸುಳುಕೋರರನ್ನು ಹೊರದಬ್ಬುವ ಅಭಿಯಾನವನ್ನು ಕೈಗೆತ್ತಿಕೊಳ್ಳಬೇಕು ! |