ಪ್ರಧಾನಮಂತ್ರಿ ಮೋದಿಗೆ ಪ್ರತ್ಯುತ್ತರ ನೀಡಿದ ಅಸುದ್ದುದ್ದೀನ್ ಓವೈಸಿ !
ಭಾಗ್ಯನಗರ (ತೆಲಂಗಾಣ) – ದೇಶದ ಮುಸಲ್ಮಾನರು ಎಲ್ಲಕ್ಕಿಂತ ಹೆಚ್ಚು ಗರ್ಭ ನಿರೋಧಕವನ್ನು ಬಳಸುತ್ತಾರೆ, ಆದ್ದರಿಂದ ಅವರ ಜನಸಂಖ್ಯೆಯಲ್ಲಿ ಇಳಿಕೆ ಆಗಿದೆ, ಎಂದು ಎಂ.ಐ.ಎಂ. ನ ಅಧ್ಯಕ್ಷ ಹಾಗೂ ಭಾಗ್ಯನಗರದ ಅಭ್ಯರ್ಥಿ ಅಸುದ್ದುದ್ದೀನ್ ಓವೈಸಿ ಪ್ರಧಾನಮಂತ್ರಿ ಮೋದಿ ಅವರಿಗೆ ಪ್ರತ್ಯುತ್ತರ ನೀಡಿದರು. ಕೆಲವು ದಿನಗಳ ಹಿಂದೆ ಪ್ರಧಾನಿ ಮೋದಿ ಅವರು ರಾಜಸ್ಥಾನದಲ್ಲಿನ ಒಂದು ಸಭೆಯಲ್ಲಿ ಮಾತನಾಡಿ, ದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಜನರ ಹಣವನ್ನು ಹೆಚ್ಚು ಮಕ್ಕಳಿರುವವರಿಗೆ (ಮುಸಲ್ಮಾನರಿಗೆ) ಹಂಚಿಬಿಡುವರು ಎಂದು ಟೀಕಿಸಿದ್ದರು. ಈ ಹೇಳಿಕೆಗೆ ಓವೈಸಿ ಈ ರೀತಿ ಪ್ರತ್ಯುತ್ತರ ನೀಡಿದ್ದಾರೆ.
‘Mu$|!m$ use the most contraceptives in the country’
– Asaduddin Owaisi’s reply to Prime Minister Modi.
👉 This is an example of shamelessly lying and being unapologetic about it.
Hindus should be aware that, according to the Government statistics, In 1950, Mu$|!m$ accounted… pic.twitter.com/I3tZ1awKru
— Sanatan Prabhat (@SanatanPrabhat) April 29, 2024
ಓವೈಸಿ ಮಾತು ಮುಂದುವರೆಸಿ,
೧. ಪ್ರಧಾನಮಂತ್ರಿ ಮೋದಿ ಸುಳ್ಳು ಹೇಳುತ್ತಿದ್ದು ಅವರು ದೇಶದಲ್ಲಿನ ಮುಸಲ್ಮಾನರು ಮತ್ತು ದಲಿತರ ವಿರುದ್ಧ ದ್ವೇಷ ಹಬ್ಬಿಸುವ ಕೆಲಸ ಮಾಡುತ್ತಿದ್ದಾರೆ, ಇದೇ ‘ಮೋದಿ ಗ್ಯಾರಂಟಿ’ ಆಗಿದೆ.
೨. ಮುಸಲ್ಮಾನರು ಎಲ್ಲಕ್ಕಿಂತ ಹೆಚ್ಚು ಮಕ್ಕಳಿಗೆ ಜನ್ಮ ನೀಡುತ್ತಾರೆ ಎಂದು ಪ್ರಧಾನಿ ಹೇಳುತ್ತಾರೆ ಆದರೆ ನರೇಂದ್ರ ಮೋದಿ ಅವರಿಗೆ ೬ ಸಹೋದರರು ಹಾಗೂ ಅಮಿತ್ ಶಾ ಅವರಿಗೆ ೬ ಸಹೋದರಿಯರಿದ್ದಾರೆ. ಆದರೂ ಕೂಡ ಅವರು ಮುಸಲ್ಮಾನರ ಮಕ್ಕಳ ಬಗ್ಗೆ ಮಾತನಾಡುತ್ತಾರೆ.
೩. ಮೋದಿ ಸರಕಾರದ ಅಂಕಿ ಅಂಶಗಳ ಪ್ರಕಾರ ದೇಶದ ಮುಸಲ್ಮಾನರ ಪ್ರಜನನದ ಪ್ರಮಾಣ ಎಲ್ಲಕ್ಕಿಂತ ಕಡಿಮೆ ಇದೆ. ದಿನದಿಂದ ದಿನಕ್ಕೆ ಮುಸಲ್ಮಾನರ ಜನಸಂಖ್ಯೆ ಕೂಡ ಕಡಿಮೆ ಆಗುತ್ತಿದೆ.
೪. ಮಹತ್ವದ ವಿಷಯವೆಂದರೆ ದೇಶದಲ್ಲಿ ಎಲ್ಲಕ್ಕಿಂತ ಹೆಚ್ಚು ಗರ್ಭನಿರೋಧಕವನ್ನು ಯಾರು ಬಳಸುತ್ತಾರೆ? ಮುಸಲ್ಮಾನರು ಬಳಸುತ್ತಾರೆ. ಇದು ನಾನು ಹೇಳುತ್ತಿಲ್ಲ, ಇದು ಮೋದಿ ಸರಕಾರದ ಅಂಕಿ ಅಂಶ ಹೇಳುತ್ತದೆ; ಆದರೂ ಕೂಡ ಮುಸಲ್ಮಾನರು ಹೆಚ್ಚು ಮಕ್ಕಳನ್ನು ಹೇರುತ್ತಾರೆ ಎಂದು ಮೋದಿ ಹೇಳುತ್ತಾರೆ. ಇದಕ್ಕೆ ಕಾರಣ ಭಾಜಪ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದವರು ಹಿಂದುಗಳ ಮನಸ್ಸಿನಲ್ಲಿ ಭಯ ನಿರ್ಮಾಣ ಮಾಡುತ್ತಿದ್ದಾರೆ. ಮುಂದೊಂದು ಕಾಲದಲ್ಲಿ ದೇಶದ ಮುಸಲ್ಮಾನರ ಸಂಖ್ಯೆ ಹಿಂದುಗಳಿಗಿಂತಲೂ ಹೆಚ್ಚಾಗುವುದು, ಎಂದು ಹಿಂದುಗಳಿಗೆ ಭಯಪಡಿಸುತ್ತಿದ್ದಾರೆ; ಆದರೆ ಹಾಗೆ ಯಾವತ್ತೂ ಆಗುವುದಿಲ್ಲ ಎಂದು ಓವೈಸಿ ಕಿಡಿ ಕಾರಿದರು.
ಸಂಪಾದಕೀಯ ನಿಲುವು‘ನಂಬುವಂತೆ ಸುಳ್ಳು ಹೇಳಬೇಕು’ ಈ ವೃತ್ತಿಯ ಓವೈಸಿ ! ೧೯೫೦ ರಲ್ಲಿ ದೇಶದಲ್ಲಿ ಶೇಕಡ ೯ ರಷ್ಟು ಇದ್ದ ಮುಸಲ್ಮಾನರು ಇಂದು ಶೇಕಡ ೧೪ ಕ್ಕಿಂತಲೂ ಹೆಚ್ಚು ಅಂದರೆ ೨೦ ಕೋಟಿ ಆಗಿದ್ದಾರೆ, ಹಾಗೂ ಹಿಂದುಗಳು ಶೇಕಡ ೮೪ ರಿಂದ ಶೇಖಡ ೭೮ ಕ್ಕೆ ಇಳಿಕೆಯಾಗಿದ್ದಾರೆ. ಇದು ಸರಕಾರಿ ಅಂಕಿ ಅಂಶವಾಗಿದ್ದು ಹಿಂದುಗಳು ನೆನಪಿಟ್ಟುಕೊಳ್ಳಬೇಕು ! |