ಸಿಖ್ ರ ಅಧಿಕಾರ ರಕ್ಷಣೆಯ ಆಶ್ವಾಸನೆ ನೀಡಿದ ಪ್ರಧಾನಿ ಟ್ರುಡೋ !
ಟೊರೆಂಟೊ – ಖಾಲಸಾ ದಿನದ ಪ್ರಯುಕ್ತ ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಸಿಖ್ ಸಮುದಾಯದವರು ಖಲಿಸ್ಥಾನದ ಸಮರ್ಥನೆಯಲ್ಲಿ ಘೋಷಣೆ ನೀಡಿದರು . ಈ ಕಾರ್ಯಕ್ರಮದಲ್ಲಿ ಕೆನಡಾದ ಪ್ರಧಾನಮಂತ್ರಿ ಜಸ್ಟಿನ್ ಟ್ರುಡೋ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸಿಖ್ ರನ್ನು ಉದ್ದೇಶಿಸಿ ಮಾತನಾಡಿದ ಟ್ರುಡೋ, ಸಿಖ್ ರ ಅಧಿಕಾರದ ರಕ್ಷಣೆ ಮಾಡುವ ಆಶ್ವಾಸನೆ ನೀಡಿದರು.
ಟ್ರುಡೋ ಮಾತು ಮುಂದುವರಿಸಿ , ಕೆನಡಾದಲ್ಲಿ ೮ ಲಕ್ಷ ಸಿಖ್ ಜನರಿದ್ದಾರೆ. ಅವರ ಅಧಿಕಾರದ ರಕ್ಷಣೆಗಾಗಿ ನಾನು ಸದಾ ಸಿದ್ಧನಿದ್ದೇನೆ . ದ್ವೇಷ ಮತ್ತು ಭೇದಭಾವ ಇದರಿಂದ ನಾನು ಯಾವಾಗಲೂ ಸಿಖ್ ಜನರ ರಕ್ಷಣೆ ಮಾಡುವೆನು. ಸಿಖ್ ಸಮುದಾಯದ ಜನರು ಭಯಪಡದೆ ಅವರ ಧರ್ಮಾಚರಣೆ ಮಾಡಬೇಕು. ಕೆನಡಾದಲ್ಲಿ ಮೂಲಭೂತ ಅಧಿಕಾರ ಮತ್ತು ಸ್ವಾತಂತ್ರ್ಯಕ್ಕೆ ಸಹಮತ ಇದೆ ಮತ್ತು ಅದಕ್ಕಾಗಿ ನಾನು ಸಿಖ್ ರ ಜೊತೆಗೆ ಇರುವೆನು ಎಂದು ಭರವಸೆ ನೀಡಿದರು.
ಭಾರತದ ಜೊತೆಗೆ ಒಪ್ಪಂದ ಮಾಡಿಕೊಳ್ಳುವ ಪ್ರಯತ್ನ ಮಾಡುವೆ ! – ಟ್ರುಡೋ
ಪ್ರಧಾನಮಂತ್ರಿ ಟ್ರುಡೋ, ಸಿಖ್ ರು ತಮ್ಮ ಕುಟುಂಬದವರನ್ನು ಮತ್ತು ಸಂಬಂಧಿಕರನ್ನು ಭೇಟಿ ಆಗಬೇಕು, ಅದಕ್ಕಾಗಿ ನಾನು ಭಾರತ ಸರಕಾರದ ಜೊತೆಗೆ ಹೊಸದಾಗಿ ಒಪ್ಪಂದ ಮಾಡಿಕೊಳ್ಳವ ಪ್ರಯತ್ನ ಮಾಡುವೆನು. ಈ ಒಪ್ಪಂದದ ಪ್ರಕಾರ ಅಮೃತಸರ ಸಹಿತ ಇತರ ನಗರಗಳಲ್ಲಿ ವಿಮಾನ ಸಾರಿಗೆ ಆರಂಭಿಸಬಹುದು ಎಂದರು.
ಭಾರತ ಮತ್ತು ಕೆನಡಾ ನಡುವಿನ ಸಂಬಂಧ ಹದಗೆಟ್ಟಿದೆ !
ಜೂನ್ ೧೮.೨೦೨೩ ರಂದು ಖಲಿಸ್ತಾನಿ ಭಯೋತ್ಪಾದಕ ಹರದೀಪ ಸಿಂಹ ನಿಜ್ಜಾರ್ ಅವನ ಹತ್ಯೆ ಬ್ರಿಟಿಷ್ ಕೊಲಂಬಿಯಾದಲ್ಲಿ ನಡೆದಿತ್ತು. ಅದರ ನಂತರ ಪ್ರಧಾನಮಂತ್ರಿ ಟ್ರುಡೋ ಈ ಹತ್ಯೆಯ ಹಿಂದೆ ಭಾರತ ಸರಕಾರದ ಕೈವಾಡ ಇರುವುದಾಗಿ ಆರೋಪಿಸಿದ್ದರು; ಆದರೆ ಭಾರತವು ಈ ಆರೋಪ ತಳ್ಳಿ ಹಾಕಿತ್ತು. ಅಂದಿನಿಂದ ಎರಡು ದೇಶಗಳಲ್ಲಿನ ಸಂಬಂಧ ಹದಗೆಟ್ಟಿದೆ.
Pro-Khalistan slogans shouted in front of Prime Minister Justin Trudeau in #Canada
PM #Trudeau assures protection of Sikhs’ rights.
I will try to make a deal with India – Trudeau
The Indian government should respond in terms understood by Trudeau, who has supporters among the… pic.twitter.com/fApZruJn4d
— Sanatan Prabhat (@SanatanPrabhat) April 29, 2024
ಸಂಪಾದಕೀಯ ನಿಲುವುಭಾರತವನ್ನು ದ್ವೇಷಿಸುವ ಖಲಿಸ್ತಾನವಾದಿಗಳು ಹಾಗೂ ಅವರನ್ನು ಸಮರ್ಥಿಸುವ ಟ್ರುಡೋ ಅವರಿಗೆ ಭಾರತ ಸರಕಾರ ತಕ್ಕ ಭಾಷೆಯಲ್ಲಿ ಉತ್ತರ ನೀಡಬೇಕು ! |