ಪಿಥಮಪುರ (ಮಧ್ಯಪ್ರದೇಶ) ಇಲ್ಲಿಯ ಘಟನೆ
ಭೋಪಾಲ (ಮಧ್ಯಪ್ರದೇಶ) – ಲವ್ ಜಿಹಾದಿನ ಷಡ್ಯಂತ್ರಕ್ಕೆ ಬಲಿಯಾಗುವ ಘಟನೆಯಲ್ಲಿ ಈಗ ಮತ್ತೊಮ್ಮೆ ಹೆಚ್ಚಳವಾಗಿರುವುದು ಕಂಡು ಬರುತ್ತಿವೆ. ಕರ್ನಾಟಕದಲ್ಲಿನ ಹುಬ್ಬಳ್ಳಿಯ ನೇಹಾ ಹಿರೇಮಠರ ಹತ್ಯೆ ಇರಲಿ ಅಥವಾ ದೆಹಲಿಯಲ್ಲಿನ ಸರಿತಾ ಶರ್ಮ ಈ ಸಂತ್ರಸ್ತೆಯ ತಾಯಿಯ ಹತ್ಯೆಯಾಗಿರಲಿ, ಈಗ ಇದೇ ರೀತಿಯ ಘಟನೆ ಮಧ್ಯ ಪ್ರದೇಶದಲ್ಲಿನ ಧಾರ ಜಿಲ್ಲೆಯಲ್ಲಿರುವ ಪಿಥಮಪುರ ಇಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ. ನಗರದಲ್ಲಿನ ಹೋಟೆಲ್ `ವಾಟಿಕ’ ಇಲ್ಲಿ ಒಂದು ಕೋಣೆಯಲ್ಲಿ 24 ವರ್ಷದ ಹಿಂದೂ ಯುವತಿಯ ಶವ ಕಂಡು ಬಂದಿದೆ. ಜುನೈದ ಖಾನ ಹೆಸರಿನ ಯುವಕನೊಂದಿಗೆ ಆಕೆ ಈ ಹೋಟಲಿಗೆ ಬಂದಿದ್ದಳು, ಎಂದು ಪೊಲೀಸರಿಗೆ ಪ್ರಾಥಮಿಕ ಮಾಹಿತಿ ದೊರೆತಿದೆ. ಪೊಲೀಸರು ಜುನೈದ್ ಖಾನ ವಿರುದ್ಧ ಬಲಾತ್ಕಾರ ಮತ್ತು ಆತ್ಮಹತ್ಯೆಗೆ ಪ್ರೇರೇಪಿಸಿರುವ ದೂರನ್ನು ದಾಖಲಿಸಿ ಅವನನ್ನು ಬಂಧಿಸಿದ್ದಾರೆ . ಯುವತಿಯ ಶವದ ಮರಣೋತ್ತರ ಪರೀಕ್ಷೆಯ ವರದಿ ಸಿದ್ಧಪಡಿಸುವ ಪ್ರಕ್ರಿಯೆ ನಡೆಯುತ್ತಿದೆ. ಹಿಂದುತ್ವನಿಷ್ಠ ಸಂಘಟನೆಗಳಿಗೆ ಈ ಘಟನೆಯ ಮಾಹಿತಿ ದೊರೆಯುತ್ತಲೇ ಅವರು ಘಟನಾ ಸ್ಥಳವನ್ನು ತಲುಪಿದರು. ಹಿಂದುತ್ವ ನಿಷ್ಠರು ಜುನೈದನ ವಿರುದ್ಧ ಕೊಲೆ ಪ್ರಕರಣದ ಮೊಕದ್ದಮೆ ದಾಖಲಿಸಲು ಆಗ್ರಹಿಸಿದ್ದಾರೆ .
Hindu girl's lifeless body found in hotel room : Instigated by lover Junaid Khan to commit suicide
Incident of Pithampur (Madhya Pradesh)
A few days ago, there were also reports of a Muslim lover brutally torturing his Hindu lover in order to grab her property in Guna, Madhya… pic.twitter.com/8QYSt5uhOb
— Sanatan Prabhat (@SanatanPrabhat) April 29, 2024
ಈ ಪ್ರಕರಣದಲ್ಲಿ `ಸನಾತನ ಪ್ರಭಾತ’ದ ಪ್ರತಿನಿಧಿಯೊಂದಿಗೆ ಪಿಥಮಪುರ ನಗರ ಪೊಲೀಸ್ ಅಧೀಕ್ಷಕ ಅಮಿತ ಕುಮಾರ ಮಿಶ್ರಾ ಇವರು ಮಾತನಾಡುತ್ತಾ, ಸಂತ್ರಸ್ತೆಯು ನೇಣು ಹಾಕಿಕೊಂಡಿದ್ದಾಳೆ. ಇಬ್ಬರೂ ಕೂಡ ಇಂದೂರಿನ ಮಾಹುಗಾವದ ನಿವಾಸಿಗಳಾಗಿದ್ದು ೫ ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಹುಡುಗಿ ಆಕೆಯ ಪ್ರಿಯಕರ ಜುನೈದಗೆ ವಿವಾಹವಾಗುವಂತೆ ಒತ್ತಡ ಹೇರುತ್ತಿದ್ದಳು ; ಅವನು ಒಂದಲ್ಲ ಒಂದು ನೆಪ ಹೇಳಿ ಅದನ್ನು ಮುಂದೂಡುತ್ತಿದ್ದನು ಎಂದು ಹೇಳಿದ್ದರು.
ಮಧ್ಯಪ್ರದೇಶ ರಾಜ್ಯದಲ್ಲಿ ಲವ್ ಜಿಹಾದ ಸಂಬಂಧಿತ ಘಟನೆಗಳು ಹೆಚ್ಚಿರುವುದರ ಹಿನ್ನೆಲೆಯಲ್ಲಿ `ಸನಾತನ ಪ್ರಭಾತ’ದ ಪ್ರತಿನಿಧಿಯು ಮಧ್ಯಪ್ರದೇಶದ ಹೆಚ್ಚುವರಿ ಪೊಲೀಸ ನಿರ್ದೇಶಕರಾದ ಜಯದೀಪ ಪ್ರಸಾದ ಇವರನ್ನು ಸಂಪರ್ಕಿಸಲು ಪ್ರಯತ್ನಿಸಲಾಯಿತು. ಆದರೆ ಅವರೊಂದಿಗೆ ಮಾತನಾಡಲು ಸಾಧ್ಯವಾಗಲಿಲ್ಲ .
ಸಂಪಾದಕೀಯ ನಿಲುವುಕೆಲವು ದಿನಗಳ ಹಿಂದೆ ರಾಜ್ಯದಲ್ಲಿನ ಗುನಾ ಇಲ್ಲಿ ಕೂಡ ಓರ್ವ ಮುಸಲ್ಮಾನ ಪ್ರಿಯಕರನು ಹಿಂದೂ ಪ್ರೇಯಸಿಯ ಭೂಮಿಯನ್ನು ಕಬಳಿಸುವುದಕ್ಕಾಗಿ ಆಕೆಯ ಮೇಲೆ ಮಿತಿಮೀರಿ ಅತ್ಯಾಚಾರ ಮಾಡಿರುವ ಸುದ್ದಿಯಾಗಿತ್ತು. ಮಧ್ಯಪ್ರದೇಶ ಪೊಲೀಸರು ಇಂತಹ ಲವ್ ಜಿಹಾದಿಗಳಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ತೀವ್ರ ಆಗ್ರಹ ಮಾಡಿದರೆ ಮಾತ್ರ ಇಂತಹ ಘಟನೆಗಳು ಕಡಿಮೆಯಾಗಬಹುದು ! |