ಪ್ರಧಾನಮಂತ್ರಿ ಮೋದಿ ಅವರಿಗೆ 6 ವರ್ಷಗಳ ಕಾಲ ಚುನಾವಣೆಗೆ ಸ್ಪರ್ಧಿಸದಂತೆ ನಿಷೇಧಿಸಬೇಕು ಎಂಬ ಬೇಡಿಕೆಯ ಅರ್ಜಿಯನ್ನು ದೆಹಲಿ ಉಚ್ಚನ್ಯಾಯಾಲಯದಿಂದ ತಿರಸ್ಕೃತ

ಧರ್ಮದ ಆಧಾರದಲ್ಲಿ ಮತಗಳನ್ನು ಕೋರಿರುವ ಆರೋಪ !

ನವದೆಹಲಿ – ದೆಹಲು ಉಚ್ಚನ್ಯಾಯಾಲಯವು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ 6 ವರ್ಷಗಳ ಕಾಲ ಚುನಾವಣೆಗೆ ಸ್ಪರ್ಧಿಸದಂತೆ ನಿಷೇಧಿಸಲು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಉಚ್ಚನ್ಯಾಯಾಲಯ ತಿರಸ್ಕರಿಸಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನೀತಿ ಸಂಹಿತೆ ಉಲ್ಲಂಘಿಸಿರುವ ಆರೋಪವನ್ನು ಅರ್ಜಿದಾರರಾದ ನ್ಯಾಯವಾದಿ ಆನಂದ ಜೊಂದಾಳೆ ಮಾಡಿದ್ದರು. ಅರ್ಜಿಯನ್ನು ವಜಾಗೊಳಿಸಿದ ನ್ಯಾಯಾಲಯ, ‘ಹಲವು ಕಾರಣಗಳಿಂದ ಅರ್ಜಿ ಸಂಪೂರ್ಣವಾಗಿ ತಪ್ಪಾಗಿದೆ’ ಎಂದು ಹೇಳಿದೆ.

1. ನ್ಯಾಯಾಲಯವು ಚುನಾವಣಾ ಆಯೋಗಕ್ಕೆ ಯಾವುದೇ ದೂರಿನ ಬಗ್ಗೆ ವಿಶೇಷವಾಗಿ ಪರಿಗಣಿಸುವಂತೆ ನಿರ್ದೇಶನ ನೀಡುವುದು ಸೂಕ್ತವಲ್ಲ. ಜೊಂಧಳೆಯವರ ದೂರಿನ ಮೇರೆಗೆ ಚುನಾವಣಾ ಆಯೋಗ ಕಾನೂನು ಪ್ರಕಾರ ಕ್ರಮ ಕೈಗೊಳ್ಳುವುದು. ನಾವು ಅರ್ಜಿಯನ್ನು ವಜಾಗೊಳಿಸುತ್ತೇವೆ ಎಂದು ಹೇಳಿದ್ದಾರೆ.

2. ಜೊಂಧಳೆಯವರು ದೂರಿನಲ್ಲಿ, ಪ್ರಧಾನಮಂತ್ರಿಗಳು ಏಪ್ರಿಲ್ 9 ರಂದು ಉತ್ತರ ಪ್ರದೇಶದ ಪಿಲಿಭಿತ್‌ನಲ್ಲಿ ಮಾಡಿದ ಭಾಷಣದಲ್ಲಿ ಹಿಂದೂ ದೇವತೆಗಳು, ಸಿಖ್ ದೇವತೆಗಳು ಮತ್ತು ಅವರ ಆರಾಧನಾ ಸ್ಥಳಗಳ ಹೆಸರಿನಲ್ಲಿ ಮತವನ್ನು ಕೋರಿದ್ದರು. ಮೋದಿಯವರು ಭಾಷಣ ಮಾಡುತ್ತಾ, `ರಾಮಮಂದಿರವನ್ನು ನಿರ್ಮಾಣ ಮಾಡಿದೆವು, ಕರತಾರಪೂರ ಸಾಹಿಬ ಕಾರಿಡಾರ(ಸುಸಜ್ಜಿತ ರಸ್ತೆ) ಅಭಿವೃದ್ಧಿಪಡಿಸಿದೆವು. ಗುರುದ್ವಾರಗಳಲ್ಲಿ ಲಂಗರ್ ಗಳಲ್ಲಿ(ಭಂಡಾರ)ದಲ್ಲಿ ಉಪಯೋಗಿಸಲಾಗುವ ವಸ್ತು ಮತ್ತು ಸೇವಾ ತೆರಿಗೆಯನ್ನು ತೆಗೆದುಹಾಕಲಾಗಿದೆ. ಹಾಗೆಯೇ ಅಫಘಾನಿಸ್ತಾನದಿಂದ ಗುರು ಗ್ರಂಥಸಾಹಿಬದ ಪ್ರತಿಯನ್ನು ಮರಳಿ ತಂದಿದ್ದೇವೆ ಎಂದು ಹೇಳಿದ್ದರು. ನೀತಿಸಂಹಿತೆಯನುಸಾರ ಯಾವುದೇ ಪಕ್ಷ ಅಥವಾ ಅಭ್ಯರ್ಥಿ 2 ಜಾತಿ ಅಥವಾ ಸಮಾಜದಲ್ಲಿ ದ್ವೇಷವನ್ನು ನಿರ್ಮಾಣ ಮಾಡುವ ಯಾವುದೇ ಕೃತಿಯನ್ನು ಕೆಲಸವನ್ನು ಮಾಡುವಂತಿಲ್ಲ.