Human trafficking in Madrassas : ಮದರಸಾಗಳಲ್ಲಿ ವಿದ್ಯೆ ಹೆಸರಿನಲ್ಲಿ ಮಾನವ ಕಳ್ಳ ಸಾಗಾಣಿಕೆ ಶಡ್ಯಂತ್ರ ಬಹಿರಂಗ !

  • ಅಯ್ಯೋದ್ಯೆಯಿಂದ ಸಹರಾನಪುರಕ್ಕೆ ಹೋಗುವ ೯೯ ಮಕ್ಕಳ ಬಿಡುಗಡೆ !

  • ಉತ್ತರಪ್ರದೇಶ ರಾಜ್ಯ ಬಾಲ ಸಂರಕ್ಷಣಾ ಆಯೋಗದ ಕಾರ್ಯಾಚರಣೆ !

  • ೫ ಮೌಲ್ವಿ (ಇಸ್ಲಾಮಿನ ಧಾರ್ಮಿಕ ನಾಯಕರು) ವಶಕ್ಕೆ !

ಲಕ್ಷ್ಮಣಪುರಿ (ಉತ್ತರಪ್ರದೇಶ) – ಮಾನವ ಕಳ್ಳ ಸಾಗಾಣಿಕೆ ಅನುಮಾನದ ಮೇಲೆ ಉತ್ತರ ಪ್ರದೇಶ ರಾಜ್ಯ ಬಾಲ ರಕ್ಷಣಾ ಆಯೋಗದಿಂದ ದೊಡ್ಡ ಕಾರ್ಯ ಆಚರಣೆ ನಡೆದಿದ್ದು, ಏಪ್ರಿಲ್ ೨೬ ರಂದು ಅಯ್ಯೋಧ್ಯೆಯಿಂದ ೯೯ ಅಪ್ರಾಪ್ತ ಹುಡುಗರ ಬಿಡುಗಡೆ ಮಾಡಿದೆ. ಈ ಕಾರ್ಯಾಚರಣೆಯ ಮೊದಲು ಅನೇಕ ಹುಡುಗರನ್ನು ಸಹರಾನಪುರಕ್ಕೆ ಕಳುಹಿಸಿರುವುದು ಕೂಡ ಬೆಳಕಿಗೆ ಬಂದಿದೆ. ಮದರಸಾಗಳಲ್ಲಿ ವಿದ್ಯೆಯ ಹೆಸರಿನಲ್ಲಿ ಮಕ್ಕಳನ್ನು ಕಾರ್ಮಿಕರಂತೆ ಕೆಲಸ ಮಾಡಿಸುತ್ತಿದ್ದರು ಮತ್ತು ಥಳಿಸುತ್ತಿದ್ದರು. ಪೊಲೀಸರು ೫ ಮೌಲ್ವಿಗಳನ್ನು ವಶಕ್ಕೆ ಪಡೆದಿದ್ದಾರೆ. ಇದರಲ್ಲಿ ಸಹರಾನಪುರದ ದರೂಲ್ ಉಲಮ್ ರಫಾಕಿಯಾ ಮದರಸಾದ ಸಂಚಾಲಕ ತೌಸೀಫ್ ಮತ್ತು ದಾರ ಅರ್ಕಮ್ ನ ಸನ್ ರಿಜವಾನ್ ಅವರನ್ನು ಕೂಡ ಬಂಧಿಸಲಾಗಿದೆ. ಆಯೋಗದ ಸದಸ್ಯ ಡಾ. ಶುಚಿತಾ ಚತುರ್ವೇದಿ ಅವರ ಪ್ರಕಾರ, ಬಿಹಾರದಲ್ಲಿನ ಅರರಿಯಾ ಜಿಲ್ಲೆಯಲ್ಲಿನ ತರಹ ಗ್ರಾಮದ ನಿವಾಸಿ ಸಾಬೇನೂರ್ ಎಂಬವನು ಈ ಮಕ್ಕಳನ್ನು ಬೇರೆ ಬೇರೆ ಮದರಸಾಗಳಿಗೆ ಕಳುಹಿಸುತ್ತಾನೆ. ಸಹರಾಂಪುರ ಅಷ್ಟೇ ಅಲ್ಲದೆ, ದೆಹಲಿ, ಮುಂಬಯಿ, ಭಾಗ್ಯನಗರ(ಹೈದ್ರಾಬಾದ್), ಛತ್ರಪತಿ ಸಂಭಾಜಿ ನಗರ, ಬೆಂಗಳೂರು ಮತ್ತು ಆಜಮಗಡ ದಲ್ಲಿನ ಮದರಸಾಗಳಿಗೆ ಕೂಡ ಮಕ್ಕಳನ್ನು ಕಳುಹಿಸಲಾಗುತ್ತದೆ ಮತ್ತು ಇದಕ್ಕಾಗಿ ಅವನಿಗೆ ದೊಡ್ಡ ಪ್ರಮಾಣದಲ್ಲಿ ಹಣ ನೀಡಲಾಗುತ್ತದೆ. ಇನ್ನೂ ಆಘಾತಕಾರಿ ಅಂಶವೆಂದರೆ ಮದರಸಾದ ಸಂಚಾಲಕ ಒಂದು ಪ್ರತಿಜ್ಞಾಪತ್ರ ತಯಾರಿಸಿ ಅದರ ಮೇಲೆ ಮಕ್ಕಳ ಸಹಿ ಪಡೆಯುತ್ತಾನೆ. ಅದರ ಬಗ್ಗೆ ಪೋಷಕರಿಗೆ ಯಾವುದೇ ಮಾಹಿತಿ ಇರುವುದಿಲ್ಲ. ಪ್ರತಿಜ್ಞಾಪತ್ರದಲ್ಲಿ, ‘ಎಲ್ಲಾ ಹೊಣೆಗಾರಿಕೆಯು ಮಗುವಿನ ಮೇಲೆ ಮಾತ್ರ ಇರುತ್ತದೆ’ ಎಂದು ಬರೆದಿರುತ್ತಾರೆ. ಆದ್ದರಿಂದ ಕಾರ್ಮಿಕರೆಂದು ಕೆಲಸ ಮಾಡುವಾಗ ಮಕ್ಕಳು ಸಾವನ್ನಪ್ಪಿದರು ಕೂಡ ಅದರ ಹೊಣೆಯನ್ನು ಸಂಚಾಲಕನ ಮೇಲೆ ಹೇರಲಾಗುವುದಿಲ್ಲ.

ಸಂಪಾದಕೀಯ ನಿಲುವು

ಮದರಸಾಗಳು ಭಯೋತ್ಪಾದನೆ, ಬಲಾತ್ಕಾರ, ಸಲಿಂಗಕಾಮದ ಸಂಬಂಧ ಮುಂತಾದ ಅಕ್ರಮ ಕೃತ್ಯಗಳ ಕೇಂದ್ರವಾಗಿದೆ. ಆದ್ದರಿಂದ ಪಾಕಿಸ್ತಾನಿ ಮೂಲದ ಮತ್ತು ಪ್ರಸ್ತುತ ಲಂಡನ್ ನಲ್ಲಿ ವಾಸ್ತವ್ಯವಾಗಿರುವ ಮಾನವ ಅಧಿಕಾರ ಕಾರ್ಯಕರ್ತ ಆರಿಫ್ ಅಜಾಕೀಯ ಅವರು ಭಾರತವು ಮದರಸಾಗಳ ಮೇಲೆ ನಿಷೇಧ ಹೇರಬೇಕು ಎಂದಿದ್ದರು. ಈ ಅಭಿಪ್ರಾಯದ ಬಗ್ಗೆ ಭಾರತ ಸರಕಾರ ಯೋಚಿಸುವ ಸಮಯ ಬಂದಿದೆ, ಎಂದು ಯಾರಿಗಾದರೂ ಅನಿಸಬಹುದು .