Indian Species Banned in HK and SG: ಹಾಂಗಕಾಂಗ್ ಮತ್ತು ಸಿಂಗಾಪುರಗಳ ದಾವೆಯನ್ನು ತಳ್ಳಿಹಾಕಿದ ಎಂ.ಡಿ.ಹೆಚ್. ಕಂಪನಿ !

ನಮ್ಮ ಮಸಾಲೆಗಳಲ್ಲಿ ಇಥಿಲಿನ್ ಆಕ್ಸೈಡಿನ ಬಳಕೆ ಮಾಡುವುದಿಲ್ಲ !

ನವ ದೆಹಲಿ – ಭಾರತೀಯ ಕಂಪನಿ ಎಂ.ಡಿ.ಹೆಚ್. ನ ೩ ಮಸಾಲೆಗಳಲ್ಲಿ ಇಥಿಲಿನ್ ಆಕ್ಸೈಡಿನ ಪ್ರಮಾಣ ನಿಯಮಗಳಿಗಿಂತಲೂ ಹೆಚ್ಚು ಕಂಡು ಬಂದಿರುವುದರಿಂದ ಹಾಂಗಕಾಂಗ್ ಮತ್ತು ಸಿಂಗಾಪುರ್ ದಲ್ಲಿ ಈ ಮಸಾಲೆಗಳ ಮೇಲೆ ನಿಷೇದ ಹೇರಿದೆ. ಇಥಿಲಿನ ಆಕ್ಸೈಡ್ ನಿಂದ ಕ್ಯಾನ್ಸರ್ ಆಗುತ್ತದೆ ಎಂದು ಹೇಳಲಾಗಿದೆ. ಈಗ ಇದರ ಬಗ್ಗೆ ಎಂ.ಡಿ.ಎಚ್. ಇಂದ ಮನವಿ ಪ್ರಸಾರ ಮಾಡಲಾಗಿದೆ. ಈ ಕಂಪನಿಯು, ತನ್ನ ಉತ್ಪಾದನೆಗಳು ಶೇಕಡ ೧೦೦ ರಷ್ಟು ಸುರಕ್ಷಿತವಾಗಿವೆ ಎಂದು ದಾವೆ ಮಾಡೊದೆ ಹಾಗೂ ಈ ಕಂಪನಿಯು ಹಾಂಗಕಾಂಗ್ ಮತ್ತು ಸಿಂಗಾಪುರ್ ಇಲ್ಲಿಯ ಆಹಾರ ಮಾನಕದ ಪ್ರಕಾರ ಅದರ ಕೆಲವು ಉತ್ಪಾದನೆಯಲ್ಲಿ ಕ್ರಿಮಿನಾಶಕ ಇಥಿಲಿನ್ ಆಕ್ಸೈಡ್ ಕಂಡು ಬಂದಿರುವ ದಾವೆ ತಿರಸ್ಕರಿಸಿದೆ.

ಮನವಿಯಲ್ಲಿ ಎಂ.ಡಿ.ಎಚ್. ಕಂಪನಿಯು, ನಮಗೆ ಹಾಂಗಕಾಂಗ್ ಮತ್ತು ಸಿಂಗಾಪುರ್ ಆಹಾರ ಸುರಕ್ಷಾ ಮಾನಕದಿಂದ ಯಾವುದೇ ಪತ್ರ ದೊರೆತಿಲ್ಲ. ನಮ್ಮ ಕೆಲವು ಉತ್ಪಾದನೆಯಲ್ಲಿ ಕ್ಯಾನ್ಸರ್ ಆಗುವಂತಹ ಪದಾರ್ಥ ಇಥಿಲಿನ್ ಆಕ್ಸೈಡ್ ನ ಸಮಾವೇಶ ಇರುವು ದಾವೆ ಸತ್ಯಕ್ಕೆ ದೂರವಾಗಿದೆ ಮತ್ತು ಅವರ ಬಳಿ ಯಾವುದೇ ದೃಢವಾದ ಸಾಕ್ಷಿ ಇಲ್ಲ. ಭಾರತೀಯ ಆಹಾರ ಮಾನಕ ಮಂಡಳಿಗೆ ಈ ಪ್ರಕರಣದ ಕುರಿತಾದ ಹಾಂಗಕಾಂಗ್ ಮತ್ತು ಸಿಂಗಾಪುರ ಅಧಿಕಾರಿಗಳಿಂದ ಯಾವುದೇ ಪರೀಕ್ಷೆಯ ವರದಿ ದೊರೆತಿಲ್ಲ. ನಾವು ಅವರ ಗ್ರಾಹಕರಿಗೆ ಎಲ್ಲಾ ಉತ್ಪಾದನೆಯ ಸುರಕ್ಷತೆಯ ಬಗ್ಗೆ ಮತ್ತು ಗುಣಮಟ್ಟದ ಬಗ್ಗೆ ವಿಶ್ವಾಸ ನೀಡುತ್ತೇವೆ. ಮಸಾಲೆಯ ಸಂಗ್ರಹ, ಪ್ರಕ್ರಿಯೆ ಮತ್ತು ಪ್ಯಾಕಿಂಗ್ ಇಂತಹ ಯಾವುದೇ ಹಂತದಲ್ಲಿ ಇಥಿಲಿನ್ ಆಕ್ಸಾಯ್ಡ್ ಬಳಕೆ ಆಗುವುದಿಲ್ಲ. ದೇಶಾಂತರ್ಗತ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಆರೋಗ್ಯ ಮತ್ತು ಸುರಕ್ಷ ಮಾನಕ ಕಂಪನಿಗಳಿಂದ ಪಾಲನೆ ಮಾಡಲಾಗುತ್ತಿದೆ ಎಂದು ಹೇಳಿದೆ.

ಎಂ.ಡಿ.ಹೆಚ್. ನ ಮದ್ರಾಸ್ ಕರಿ ಪೌಡರ್, ಸಾಂಬಾರ್ ಮಸಾಲೆ, ಮಿಶ್ರ ಮಸಾಲ ಪೌಡರ್ ಮತ್ತು ಕರಿ ಮಸಾಲಾ ಪೌಡರ್ ಈ 4 ಮಸಾಲೆಗಳ ಮೇಲೆ ಹಾಂಗಕಾಂಗ್ ನಲ್ಲಿ ನಿಷೇಧ ಹೇರಲಾಗಿದೆ.