ಮಮತಾ ಬ್ಯಾನರ್ಜಿ ಇವರ ಮೇಲೆ ಕ್ರಮ ಕೈಗೊಳ್ಳಲು ನ್ಯಾಯವಾದಿಗಳಿಂದ ಕೊಲಕಾತಾ ಉಚ್ಚ ನ್ಯಾಯಾಲಯದಲ್ಲಿ ಬೇಡಿಕೆ
ಕೋಲಕಾತಾ (ಬಂಗಾಲ) – ಕೋಲಕಾತಾ ಉಚ್ಚ ನ್ಯಾಯಾಲಯವು ರಾಜ್ಯ ಸರಕಾರದ ೨೦೧೬ ರಲ್ಲಿನ ಶಿಕ್ಷಕ ನೇಮಕಾತಿ ಪ್ರಕ್ರಿಯೆ ರದ್ದುಪಡಿಸಿರುವ ನಿರ್ಣಯ ಇತ್ತೀಚೆಗೆ ನೀಡಿತ್ತು. ಇದಕ್ಕೆ ಮಮತಾ ಬ್ಯಾನರ್ಜಿ ಇವರು ಇದನ್ನು ಕಾನೂನುಬಾಹಿರ ಎಂದು ಹೇಳಿದ್ದರು. ಮಮತಾ ಬ್ಯಾನರ್ಜಿ ಇವರು, ಅವರು (ಸಿಬಿಐ) ನ್ಯಾಯಾಲಯವನ್ನು ಖರೀದಿಸಿದ್ದಾರೆ. ನಾನು ಸರ್ವೋಚ್ಚ ನ್ಯಾಯಾಲಯದ ಬಗ್ಗೆ ಮಾತನಾಡುತ್ತಿಲ್ಲ. ‘ಸಿಬಿಐ’ ಜೊತೆಗೆ ಗಡಿ ಸುರಕ್ಷಾ ತಂಡ ಕೂಡ ನ್ಯಾಯಾಲಯ ಖರೀದಿಸಿದೆ. ನಾನು ನ್ಯಾಯಾಧೀಶರ ಸಂದರ್ಭದಲ್ಲಿ ಏನನ್ನು ಮಾತನಾಡುವುದಿಲ್ಲ ಎಂದು ಹೇಳಿದರು.
ನ್ಯಾಯವಾದಿ ವಿಕಾಸ್ ರಂಜನ್ ಭಟ್ಟಾಚಾರ್ಯ ಇವರು ಕೊಲಕಾತ್ತಾ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಟಿ.ಎಸ್. ಶಿವಗನಂ ಇವರ ಅಧ್ಯಕ್ಷತೆಯಲ್ಲಿನ ವಿಭಾಗೀಯ ಪೀಠಕ್ಕೆ ರಾಜ್ಯದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇವರಿಂದ ನ್ಯಾಯಾಲಯದ ಅವಮಾನದ ಕಡೆಗೆ ಗಮನಸೆಳೆದರು. ಅವರು ಈ ಪ್ರಕರಣದಲ್ಲಿ ಕ್ರಮ ಕೈಗೊಳ್ಳುವ ಆದೇಶ ನೀಡಲು ಆಗ್ರಹಿಸಿದ್ದಾರೆ. ಭಾಜಪದ ನ್ಯಾಯವಾದಿ ಕೌಸ್ಥಬ ಬಾಗಚಿ ಇವರು ಕೂಡ ಮುಖ್ಯ ನ್ಯಾಯಾಧೀಶ ಶಿವಗನಂ ಇವರಿಗೆ ಪತ್ರ ಬರೆದು ಮುಖ್ಯಮಂತ್ರಿ ವಿರುದ್ಧ ನ್ಯಾಯಾಲಯವನ್ನು ಅವಮಾನಿಸಿರುವುದರ ಕುರಿತು ಮೊಕದ್ದಮೆ ನಡೆಸಲು ವಿನಂತಿಸಿದ್ದಾರೆ.