|
ಲಕ್ಷ್ಮಣಪುರಿ (ಉತ್ತರ ಪ್ರದೇಶ) – ರಾಜ್ಯದಲ್ಲಿ ಮುರಾದಾಬಾದ್ ಜಿಲ್ಲೆಯ ಗಾಲಶಹೀದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಮುರಾದಾಬಾದ್‌ನ ಮೊಹಮ್ಮದ್ ಫುಜೈಲ್ ನು ಮುಂಬಯಿಯ ಓರ್ವ ಹಿಂದೂ ಯುವತಿಯನ್ನು ‘ಪಬಜೀ’ ಈ ಆನ್‌ಲೈನ್ ಆಟದ ಮೂಲಕ ಪ್ರೀತಿಯ ಬಲೆಗೆ ಸೆಳೆದಿದ್ದಾನೆ. ಫುಜೈಲ್ ಮುಂಬಯಿನಲ್ಲಿ ಕೆಲವು ದಿನ ಇರುತ್ತಿದ್ದನು. ಮುಂದೆ ಯುವತಿ ತನ್ನ ತಾಯಿಯ ಮಾತನ್ನು ಕೇಳದೆ ಆತನೊಂದಿಗೆ ಓಡಿ ಹೋಗಿದ್ದಾಳೆ. ಅವನು ಆಕೆಯನ್ನು ಮತಾಂತರಿಸಿ ವಿವಾಹವಾವಾಗಿ ‘ಫಾತಿಮಾ’ ಎಂದು ಹೆಸರಿಟ್ಟನು. ಈ ಸಂಬಂಧ ಹುಡುಗಿಯ ತಾಯಿಗೆ ಕೋಪವಿತ್ತು. ಒಂದು ದಿನ ಆಕಸ್ಮಿಕವಾಗಿ ಸಂತ್ರಸ್ತೆ ತಾಯಿಯನ್ನು ಸಂಪರ್ಕಿಸಿ, ಫುಜೈಲ್ ತನ್ನನ್ನು ಹೊಡೆಯುತ್ತಿರುತ್ತಾನೆ ಎಂದು ಹೇಳಿದಳು.
ಕೆಲವು ದಿನಗಳ ನಂತರ, ಫುಜೈಲ್ ಸಂತ್ರಸ್ತೆಯ ತಾಯಿಯನ್ನು ಸಂಪರ್ಕಿಸಿ, ಸಂತ್ರಸ್ತೆಯು ಆತ್ಮಹತ್ಯೆಗೆ ಪ್ರಯತ್ನಿಸಿದ್ದರಿಂದ ಅವಳನ್ನು ಆಸ್ಪತ್ರೆಗೆ ದಾಖಲಿಸಿದ್ದೇನೆ ಎಂದು ಹೇಳಿದನು. ಸಂತ್ರಸ್ತೆಯ ತಾಯಿ ಮುರಾದಾಬಾದ್ ತಲುಪಿ ಫುಝೈಲ್ ವಿರುದ್ಧ ಪೊಲೀಸರಿಗೆ ದೂರನ್ನು ದಾಖಲಿಸಿದ್ದಾಳೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಂತ್ರಸ್ತೆಯ ಸ್ಥಿತಿ ಚಿಂತಾಜನಕವಾಗಿದೆ. ಆಕೆಗೆ ಮೊದಲೇ ಮದುವೆಯಾಗಿದ್ದು, ವಿಚ್ಛೇದನ ಪಡೆದಿದ್ದಾಳೆ ಎಂದು ಹೇಳಲಾಗಿದೆ.
ಸಂಪಾದಕೀಯ ನಿಲುವುಹಿಂದೂಗಳ ಹೆಣ್ಣುಮಕ್ಕಳು ಮತ್ತು ಮಹಿಳೆಯರು ತಮ್ಮದೇ ದೇಶದಲ್ಲಿ ಅಸುರಕ್ಷಿತ ಜೀವನ ನಡೆಸುತ್ತಿದ್ದಾರೆ ಎಂಬ ಅಂಶ ನಿರಂತರವಾಗಿ ಇಂತಹ ಘಟನೆಗಳ ಮೂಲಕ ಬೆಳಕಿಗೆ ಬರುತ್ತಿದೆ. ಇದು 100 ಕೋಟಿ ಹಿಂದೂಗಳಿಗೆ ಲಜ್ಜಾಸ್ಪದ ! |