India Out Campaign Fail : ಬಾಂಗ್ಲಾದೇಶದಲ್ಲಿನ ವಿರೋಧಿ ಪಕ್ಷದ ‘ಇಂಡಿಯಾ ಔಟ್’ ಅಭಿಯಾನ ವಿಫಲ !

ಭಾರತದ ರಫ್ತಿನಲ್ಲಿ ಹಿಂದಿಗಿಂತಲೂ ಹೆಚ್ಚಳ !

ಢಾಕಾ (ಬಾಂಗ್ಲಾದೇಶ) – ಮಾಲ್ಡಿವ್ಸ್‌ನಂತೆ ಬಾಂಗ್ಲಾದೇಶದಲ್ಲಿ ‘ಇಂಡಿಯಾ ಔಟ್ ‘ಅಭಿಯಾನ ನಡೆಸಿರುವ ‘ಬಾಂಗ್ಲಾದೇಶ್ ನ್ಯಾಷನಲಿಸ್ಟ್ ಪಾರ್ಟಿ’ (ಬಿ.ಏನ್.ಪಿ.) ಈ ವಿರೋಧಿ ಪಕ್ಷದ ಪ್ರಯತ್ನ ಸಂಪೂರ್ಣವಾಗಿ ವಿಫಲವಾಗಿದೆ. ‘ಬಾಂಗ್ಲಾದೇಶದ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ’ಯ ಮಹಮ್ಮದ್ ಅಬ್ದುಲ್ ವಾಹಿದ್ ಇವರು, ‘ಇಂಡಿಯಾ ಔಟ್’ ಅಭಿಯಾನದ ಉದ್ಯೋಗದ ಮೇಲೆ ಯಾವುದೇ ಪರಿಣಾಮ ಬೀರಿಲ್ಲ ಎಂದು ಹೇಳಿದರು.

೧. ವಿಶ್ವ ಬ್ಯಾಂಕಿನ ಪ್ರಕಾರ, ೨೦೨೧ -೨೨ ರಲ್ಲಿ ಬಾಂಗ್ಲಾದೇಶದ ಒಟ್ಟು ಆಮದಿನಲ್ಲಿ ಶೇಕಡಾ ೧೨ ರಷ್ಟು ಆಮದು ಭಾರತದಿಂದ ಆಗುತ್ತಿತ್ತು. ಅದು ಈಗ ಶೇಕಡ ೧೬ ರಷ್ಟು ಹೆಚ್ಚಾಗಿದೆ.

೨. ಬಾಂಗ್ಲಾದೇಶದಲ್ಲಿನ ಭಾರತೀಯ ರಾಯಭಾರಿ ಕಚೇರಿಯ ಪ್ರಕಾರ, ಹತ್ತಿ, ನೂಲು ಮತ್ತು ಇತರ ದಿನನಿತ್ಯದ ಅವಶ್ಯಕ ವಸ್ತುಗಳಂತಹ ಔದ್ಯೋಗಿಕ ಕಚ್ಚಾವಸ್ತುಗಳು ಆಮದಿನಲ್ಲಿ 3 ವರ್ಷಗಳಲ್ಲಿ ಗಣನೀಯವಾಗಿ ಹೆಚ್ಚಳವಾಗಿದೆ.

೩. ಬಾಂಗ್ಲಾದೇಶದಲ್ಲಿನ ಚುನಾವಣೆಯ ಮೊದಲು ಭಾರತದಿಂದ ಬೇನಾಪೋಲ್ ಮತ್ತು ಪೆಟ್ರಾ ಫೋಲ್ ಬಂದರಗಳಲ್ಲಿ ೨೦೦ ರಿಂದ ೨೫೦ ಟ್ರಕಗಳು ಹೋಗುತ್ತಿದ್ದವು. ಆದರೆ ಈಗ ಪ್ರತಿ ದಿನ ೪೦೦ ರಿಂದ ೪೫೦ ಟ್ರಕ್ ವಸ್ತುಗಳು ಸಹಿತ ಒಳಗೆ ಹೋಗುತ್ತಿವೆ.

೪. ಢಾಕಾದಲ್ಲಿನ ಚಾಂದನಿ ಚೌಕ ಮತ್ತು ನ್ಯೂ ಮಾರ್ಕೆಟ್ ಇದು ಭಾರತೀಯ ಬಟ್ಟೆಗಳಿಗಾಗಿ ಪ್ರಸಿದ್ಧವಾಗಿದೆ. ಚುನಾವಣೆಯ ನಂತರ ಭಾರತೀಯ ವಸ್ತುಗಳ ಮಾರಾಟದಲ್ಲಿ ಹೆಚ್ಚಳವಾಗಿರುವುದಾಗಿ ವ್ಯಾಪಾರಿಗಳ ಅಭಿಪ್ರಾಯವಾಗಿದೆ.

ಬಾಂಗ್ಲಾದೇಶದಲ್ಲಿ ಭಾರತದಿಂದ ರಫ್ತು ಆಗುವ ವಸ್ತುಗಳು !

ಭಾರತದಿಂದ ಕಳುಹಿಸಲಾಗುವ ವಸ್ತುಗಳ ಮೇಲೆ ಬಾಂಗ್ಲಾದೇಶದಲ್ಲಿನ ಜನರು ಅವಲಂಬಿತವಾಗಿದ್ದಾರೆ. ಇದರಲ್ಲಿ ತರಕಾರಿಗಳು, ಎಣ್ಣೆ, ಸೌಂದರ್ಯ ವರ್ಧಕಗಳು, ಬಟ್ಟೆಗಳು, ಮೊಬೈಲ್ ಮತ್ತು ವಾಹನಗಳ ಸಮಾವೇಶವಿದೆ. ಬಾಂಗ್ಲಾದೇಶದಲ್ಲಿನ ಹೆಚ್ಚಿನ ಜನರು ಭಾರತದಿಂದ ಬರುವ ಆಭರಣಗಳು, ಫ್ಯಾಶನೆಬಲ್ ಉಡುಪುಗಳಂತಹ ಬೆಲೆ ಬಾಳುವ ವಸ್ತುಗಳು ಖರೀದಿಸುತ್ತಾರೆ.