ಪುಣೆಯಲ್ಲಿ ಸನಾತನ ಸಂಸ್ಥೆಯ ರಜತ ಮಹೋತ್ಸವ ನಿಮಿತ್ತ ಅತ್ಯಂತ ಉತ್ಸಾಹದಿಂದ ಸನಾತನ ಗೌರವ ಉತ್ಸವ ನೆರವೇರಿತು

9 ಸಾವಿರ ಹಿಂದೂಗಳ ಉಪಸ್ಥಿತಿ

ದಿಂಡಿಯಲ್ಲಿ ಭಾಗವಹಿಸಿದ ಗಣ್ಯರು ಹಾಗೂ ಹಿಂದುತ್ನಿಷ್ಠರು

ಪುಣೆ : ಸನಾತನ ಧರ್ಮದ ಪ್ರಸಾರಕ್ಕಾಗಿ ಸಮರ್ಪಿತರಾಗಿರುವ ಸನಾತನ ಸಂಸ್ಥೆಯು ಸ್ಥಾಪನೆಯಾಗಿ 25 ವರ್ಷಗಳು ಪೂರ್ಣಗೊಂಡಿವೆ. ಇದರ ನಿಮಿತ್ತ ಪುಣೆಯಲ್ಲಿ ಎಪ್ರಿಲ್ 21 ರಂದು ‘ಸನಾತನ ಗೌರವ ’ಉತ್ಸವವನ್ನು ಆಯೋಜಿಸಲಾಗಿತ್ತು. ಈ ಉತ್ಸವದಲ್ಲಿ 9,000 ಕ್ಕೂ ಹೆಚ್ಚು ಹಿಂದೂಗಳ ಉಪಸ್ಥಿತಿಯಿತ್ತು. ಈ ಸಂಧರ್ಭದಲ್ಲಿ ವಿಶ್ವ ಹಿಂದೂ ಪರಿಷತ್ತಿನ ಡಾ. ಸಂದೀಪ ಪಾಟೀಲರು ಎಲ್ಲರಿಗೂ ಹಾರ್ದಿಕ ಶುಭಾಷಯಗಳನ್ನು ಕೋರಿದರು.

ಶಂಖನಾದ ಮಾಡುತ್ತಿರುವ ಶ್ರೀ. ವಿಜಯ್ ಚೌಧರಿ

ಧ್ವಜಪೂಜೆಯನ್ನು ಮಾಡುತ್ತಿರುವ ಎಡಗಡೆಯಿಂದ ಶ್ರೀ. ರಾಜೇಂದ್ರ ಬಲಗಡೆ, ಶ್ರೀ. ಸುನೀಲ್ ರಾಸನೆ

ಶ್ರೀಫಲವನ್ನು ಒಡೆಯುತ್ತಿರುವಾಗ ಶ್ರೀ. ಶೇಖರ ಮುಂದಡಾ

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಪಲ್ಲಕ್ಕಿ

ತುಳಜಾ ಭವಾನಿ ಮಾತಾ ಪಲ್ಲಕ್ಕಿ

ಛತ್ರಪತಿ ಶಿವಾಜಿ ಮಹಾರಾಜರ ಪಲ್ಲಕ್ಕಿ

ಸನಾತನ ಸಂಸ್ಥೆ ಚದುರಿ ಹೋಗಿರುವ ಹಿಂದೂಗಳನ್ನು ಹಿಂದೂಗಳೆಂದು ಒಗ್ಗೂಡಿಸುತ್ತಿದೆ ! – ವಿವೇಕ ಸಿನ್ನರಕರ್

ಶ್ರೀ. ವಿವೇಕ ಸಿನ್ನರಕರ್

ಸನಾತನ ಸಂಸ್ಥೆ ಮತ್ತು ವೈದಿಕ ಧರ್ಮ ಬೇರೆಬೇರೆಯಾಗಿರದೆ ಎರಡೂ ಒಂದೇ ಆಗಿದೆ. ಬ್ರಿಟಿಷರು ನಮ್ಮ ಮೇಲೆ ದಾಳಿ ನಡೆಸಿ ಜಾತಿ ಜಾತಿ ನಡುವೆ ವೈಷ್ಯಮ್ಯ ಮೂಡಿಸಿದರು. ಇದರಿಂದ ನಾವೂ ಒಟ್ಟಾಗಿರಲಿಲ್ಲ; ಆದರೆ ನಾವು ಸಂಘಟಿತರಾದರೆ ಶತ್ರುಗಳಿಗೆ ಸರಿಯಾದ ಗುಣಪಾಠವಾಗುವುದು(?) ಇಂತಹ ಸ್ಥಿತಿಯಲ್ಲಿ ಸನಾತನ ಸಂಸ್ಥೆ ಚದುರಿರುವ ಹಿಂದೂಗಳನ್ನು ಹಿಂದೂಗಳೆಂದು ಒಗ್ಗೂಡಿಸುವ ಕೆಲಸ ಮಾಡುತ್ತಿದೆ. ಭಾರತೀಯತ್ವ ಮತ್ತು ಹಿಂದುತ್ವ ಇವೆರಡೂ ಪ್ರತ್ಯೇಕವಾಗಿರದೇ ಎರಡೂ ಒಂದೇ ಆಗಿದೆ. ಆದುದರಿಂದ ನಾವು ಭಾರತಮಾತಾ, ಗೋಮಾತಾ, ಗಂಗಾಮಾತಾ ಇವರೆಲ್ಲರನ್ನು ಗೌರವಿಸಬೇಕು ಎಂದು ಸಾಂಸ್ಕೃತಿಕ ಸುದ್ದಿವಾಹಿನಿಯ ಸಂಪಾದಕರಾದ ಶ್ರೀ. ವಿವೇಕ್ ಸಿನ್ನರಕರ್ ಹೇಳಿದರು.


ಸನಾತನ ಧರ್ಮವನ್ನು ವಿರೋಧಿಸುವ ಸಂಚು ನಡೆಯುತ್ತಿದೆ ! – ಸದ್ಗುರು ಸ್ವಾತಿ ಖಾಡ್ಯೆ

ಸದ್ಗುರು ಸ್ವಾತಿ ಖಾಡ್ಯೆ

ಸನಾತನ ಧರ್ಮವನ್ನು ವಿರೋಧಿಸುವ ದೊಡ್ಡ ಸಂಚು ಈಗ ನಡೆಯುತ್ತಿದೆ. ನಿಜವಾಗಿ ನೋಡಿದರೆ, ಸನಾತನ ಧರ್ಮ ಮತ್ತು ಹಿಂದೂ ಧರ್ಮ ಪ್ರತ್ಯೇಕವಲ್ಲ. ನಮಗೆಲ್ಲರಿಗೂ ಆದರ್ಶವಾದ ರಾಮರಾಜ್ಯವನ್ನು ಕೇವಲ ಭಾರತದಲ್ಲಿ ಮಾತ್ರವಲ್ಲ, ಬದಲಾಗಿ ವಿಶ್ವಾದ್ಯಂತ ತರಬೇಕಾಗಿದೆ. ಇದಕ್ಕಾಗಿ ನಾವು ಪ್ರಯತ್ನಶೀಲರಾಗಿರೋಣ.


ಪ್ರತಿಯೊಬ್ಬರೂ ಜೀವನದ ಧರ್ಮವನ್ನು ಆಚರಿಸಬೇಕಾಗಿದೆ ! – ಚೇತನ್ ರಾಜಹಂಸ

ಶ್ರೀ. ಚೇತನ್ ರಾಜಹಂಸ

ಹಿಂದೂಗಳು ಸಾವಿರಾರು ಸಂಖ್ಯೆಯಲ್ಲಿ ರಸ್ತೆಗಿಳಿದರೂ, ಎಂದಿಗೂ ಸಮಾಜಘಾತಕ ಕೃತ್ಯವನ್ನು ಮಾಡುವುದಿಲ್ಲ. ಹಿಂದೂಗಳ ಸಂಘಟನೆಯು ಧರ್ಮದ್ವೇಷಿಗಳ ಮನಸ್ಸಿನಲ್ಲಿ ಹೆದರಿಕೆಯನ್ನು ತುಂಬುವಂತಹದ್ದಾಗಿರಬೇಕು. ಈ ರಾಷ್ಟ್ರ ರಾಮರಾಜ್ಯವಾಗಿ ಪರಿವರ್ತನೆಗೊಳ್ಳಬೇಕು.

ಜ್ಞಾನೇಶ್ವರ ಮಾವುಲಿಯ ಪಸಾಯದಾನವೂ ವಿಶ್ವ ಕಲ್ಯಾಣಕ್ಕಾಗಿ ಇತ್ತು. ಪ್ರತಿಯೊಬ್ಬರೂ ಜೀವನದಲ್ಲಿ ಧರ್ಮವನ್ನು ಅಳವಡಿಸಿಕೊಳ್ಳಬೇಕು ಮತ್ತು ಈ ಕಾರ್ಯವನ್ನು ಸನಾತನ ಸಂಸ್ಥೆ ಅನೇಕ ವರ್ಷಗಳಿಂದ ಮಾಡುತ್ತಿದೆ. ಸಂಸ್ಥೆಯ ವೈಚಾರಿಕ ಮತ್ತು ಧಾರ್ಮಿಕ ಪ್ರಸಾರ ಕಾರ್ಯ ಅವಿರತವಾಗಿ ನಡೆಯುತ್ತಿದೆ. ಜಪ

ಜಗದ್ಗುರು ಶ್ರೀ ಮನ್ವಧ್ವಾರ್ಚ ಮೂಲಮಹಾಸಂಸ್ಥಾನಮ್ `ನಂಜನಗೂಡು ಶ್ರೀ ವರದೇಂದ್ರ ಶ್ರೀ ರಾಘವೇಂದ್ರ ಸ್ವಾಮಿ ಮಠದ ವತಿಯಿಂದ ಉತ್ಸವಕ್ಕೆ ದೊರೆತ ಭಾವಸ್ಪರ್ಶಿ ಸ್ವಾಗತ

1. ಸದ್ಗುರು ಸ್ವಾತಿ ಖಾಡ್ಯೆ, 2. ಪೂ. (ಸೌ.) ಮನಿಷಾ ಪಾಠಕ ಇವರ ಸನ್ಮಾನ ಹಾಗೂ 3. ಶ್ರೀ. ಚೇತನ ರಾಜಹಂಸ ಇವರ ಸತ್ಕಾರ ಮಾಡಿದನಂತರ ರಾಘವೇಂದ್ರ ಮಢದ ಎದುರು ಮಠದ ವ್ಯವಸ್ಥಾಪಕರಾದ 4. ಶ್ರೀ. ದತ್ತಾತ್ರೇಯ ಜೋಶಿ ಗುರುಜೀ

ಜಗದ್ಗುರು ಶ್ರೀಮನ್ ಮಧ್ವಾಚಾರ್ಯ ಮೂಲಮಹಾಸಂಸ್ಥಾಮ್` ನಂಜನಗೂಡು ಶ್ರೀ ವರದೇಂದ್ರ ಶ್ರೀ ರಾಘವೇಂದ್ರ ಸ್ವಾಮಿ’ ಮಠದ ವತಿಯಿಂದ `ಸನಾತನ್ ಗೌರವ್’ ಉತ್ಸವಕ್ಕೆ ಅತ್ಯಂತ ಭಾವಸ್ಪರ್ಶಿ ಸ್ವಾಗತ ದೊರೆಯಿತು. ಉತ್ಸವ ಮಠವನ್ನು ತಲುಪಿದ ಬಳಿಕ ಧರ್ಮಧ್ವಜದ ಪೂಜೆ ಮಾಡಿ ಧರ್ಮಧ್ವಜಕ್ಕೆ ಕೇಸರಿ ವಸ್ತ್ರವನ್ನು ಅರ್ಪಿಸಲಾಯಿತು. ತದನಂತರ ಮಠದ ಪರವಾಗಿ ಶ್ರೀ ಭವಾನಿದೇವಿಯ ಪಲ್ಲಕ್ಕಿಯ ಪೂಜೆಯನ್ನು ಮಾಡಲಾಯಿತು. ಪೂ. (ಸೌ.) ಮನೀಷಾ ಪಾಠಕ್ ಮತ್ತು ಶ್ರೀ. ಚೇತನ್ ರಾಜಹಂಸ ಇವರು ಮಠಕ್ಕೆ ಹೋಗಿ ದರ್ಶನ ಪಡದರು. ಈ ಪ್ರಸಂಗದಲ್ಲಿ ಮಠದ ವತಿಯಿಂದ ಶ್ರೀ. ರಾಜಹಂಸ ಇವರಿಗೆ ವಿಶೇಷ ಕೇಸರಿ ವಸ್ತ್ರವನ್ನು ಅರ್ಪಿಸಿ ಗೌರವಿಸಲಾಯಿತು ಮತ್ತು ಪೂ. (ಸೌ.) ಮನೀಪಾ ಪಾಠಕ್ ಮತ್ತು ಸದ್ಗುರು ಸ್ವಾತಿ ಖಾಡ್ಯೆ ಇವರನ್ನೂ ಗೌರವಿಸಲಾಯಿತು. ಮಠದ ವತಿಯಿಂದ ಉತ್ಸವದಲ್ಲಿದ್ದವರಿಗೆ ಪಾನಕವನ್ನು ನೀಡಲಾಯಿತು.


ರಣರಾಗಿಣಿ ಪಥಕ

ಪ್ರಾತ್ಯಕ್ಷಿಕೆಯನ್ನು ಮಾಡುತ್ತಿರುವ ಕಿಶೋರ ವಯಸ್ಸಿನ ಮತ್ತು ಯುವ ಶಿಬಿರಾರ್ಥಿಗಳು

ಉತ್ಸವದಲ್ಲಿ ಭಾಗವಹಿಸಿದ್ದ ಗದಾ ಪಥ

ವಿವಿಧ ಸ್ಥಳದಲ್ಲಿ ಮಾಡಲಾಗಿರುವ ಪುಷ್ಪವೃಷ್ಟಿ

  • ‘ಪಾಯತಾಣ’ ಅಂಗಡಿಯ ಎದುರು ಮೊಯಿ, ಭೋಸರಿಯಿಂದ ಬಂದಿರುವ ಧರ್ಮಪ್ರೇಮಿಗಳು ಪುಷ್ಪವೃಷ್ಟಿ ಮಾಡಿದರು.

  • ‘ಕೀರ್ತಿ ಸಾಡಿ ಸೆಂಟರ್ ನಲ್ಲಿ ಪಾರಗಾವ ಸಾಲೂಮಾಲೂ ಇಲ್ಲಿ ಧರ್ಮಪ್ರೇಮಿಗಳು ಮತ್ತು ನ್ಯಾಯವಾದಿ ಮಂಗೇಶ ಜೋಷಿ ಹಾಗೂ ನ್ಯಾಯವಾದಿ ಈಶಾನಿ ಜೋಷಿ ಇವರು ಪುಷ್ಪವೃಷ್ಟಿ ಮಾಡಿದರು.
  • ಲಕ್ಷ್ಮಿ ರಸ್ತೆಯಲ್ಲಿ `ಪು.ನಾ. ಗಾಡಗೀಳ ಜ್ಯುವೆಲರ್ಸ್’ ನ ಕಾರ್ಯನಿರ್ವಾಹಕಿ ಜ್ಯೋತಿ ಬೆಲಾಪೂರ್ ಇವರು ಪುಷ್ಪವೃಷ್ಟಿ ಮಾಡಿದರು.
  • ಲಕ್ಷ್ಮೀ ರಸ್ತೆಯಲ್ಲಿ `ಜನತಾ ಖಾದಿ ಭಂಡಾರ’ ನ ಮಾಲೀಕರಾದ ಶ್ರೀನಿವಾಸ ಜನ್ನೂ ಇವರು ಪುಷ್ಪವೃಷ್ಟಿ ಮಾಡಿದರು.
  • ಲಕ್ಷ್ಮೀ ರಸ್ತೆ- ಗಣಪತಿ ಚೌಕ್ ವ್ಯಾಪತಿ ಸಂಘಟನೆಯ ಸದಸ್ಯರಾದ ಸರ್ವಶ್ರೀ ನಯನ ಠಾಕೂರ್, ಪ್ರಶಾಂತ ಟಿಕಾರ, ಪರೇಶ ದೇವಳಣಕರ, ಹಾಗೆಯೇ ವಿಶ್ವ ಹಿಂದೂ ಪರಿಷತ್ ಸಂವರ್ಧನ್ ಮಹಾರಾಷ್ಟ್ರ ಪ್ರಾಂತೀಯ ಪ್ರಮುಖ್ ಹಲಾಲ್ ನಿಯಂತ್ರಣ್ ಮಂಚ್ ಮಹಾರಾಷ್ಟ್ರ ರಾಜ್ಯ ಪ್ರಮುಖ ವಕ್ತಾರ ಡಾ. ಸಂದೀಪ ಪಾಟೀಲ ಮತ್ತು ಮಹಿಳಾ ಆಘಾಡಿ ಮುಖ್ಯಸ್ಥೆ ಹಲಾಲ್ ನಿಯಂತ್ರಣ ಮಂಚ್ ನ ಸೌ. ಸರೋಜಿನಿ ಸಂದೀಪ್ ಪಾಟೀಲ ಇವರು ಪುಷ್ಪವೃಷ್ಟಿ ಮಾಡಿದರು.
  • ‘ರಾಂಕಾ ಜ್ಯುವೆಲರ್ಸ್’ ನ ಶ್ರೀ. ಫತ್ತೇಚಂದ್ ರಾಂಕಾ ಇವರು ಉತ್ಸವವನ್ನು ಸ್ವಾಗತಿಸಿದರು ಮತ್ತು ಪುಷ್ಪವೃಷ್ಟಿ ಮಾಡಿ ಪಲ್ಲಕ್ಕಿಗೆ ಪುಷ್ಪಹಾರವನ್ನು ಅರ್ಪಿಸಿದರು.
  • ‘ಕಲಾಕ್ಷೇತ್ರಮ್ ಸಾಡಿ ಸೆಂಟರ್’ ನ ಶ್ರೀ. ಸಾಗರ್ ಪಾಸಕಂಠಿ, ಅಷ್ಟೇಕರ್ ಜ್ಯುವೆಲರ್ಸ್ ಶ್ರೀ. ಬಾಳಾಸಾಹೇಬ್ ಅಷ್ಟೇಕರ್ ಮತ್ತು ಶ್ರೀ. ವಸಂತ ಬಾಬುರಾವ್ ಅಷ್ಟೇಕರ ಜ್ಯುವೆಲ್ಲರ್ಸ್ ಇವರು ಪುಷ್ಪವೃಷ್ಟಿ ಮಾಡಿದರು.
  • ಅಲಕಾ ಟಾಕೀಸ್ ಚೌಕದಲ್ಲಿ ಹಿವರೆ ಗ್ರಾಮದ ಧರ್ಮಪ್ರೇಮಿ, ನ್ಯಾಯವಾದಿ ಮಂಗೇಶ ಜೆಜುರೀಕರ್ ಮತ್ತು ಅವರ ಸಹೋದ್ಯೋಗಿಗಳು ಹಾಗೆಯೇ ಲಾಕಟಿ ಪೂಲ್ ಇಲ್ಲಿನ ಶ್ರೀ ವಿಠ್ಠಲ- ರುಕ್ಮಿಣಿ ದೇವಸ್ಥಾನದ ಕಾರ್ಯಾಧ್ಯಕ್ಷ ಶ್ರೀ. ದಿಲೀಪ್ ಬಾಂದಲ್ ಮತ್ತು ಶ್ರೀ. ದೀಪಕ್ ಥೋರಾತ ಇವರು ಪುಷ್ಪವೃಷ್ಟಿ ಮಾಡಿದರು.

3 ವಿವಿಧ ಬಾಲ ಪಥ

ವಿವಿಧ ಗ್ರಾಮಗಳಿಂದ ಸಹಭಾಗಿಗಳಾಗಿರುವ ಪಥ

ಪ್ರಶಿಕ್ಷಣ, ರಣರಾಗಿಣಿ, ಗದಾ ಪಥ, ಹಿಂದೂ ಸಾಮ್ರಾಜ್ಯ ಪಥ

ಕೆಲವು ಪ್ರತಿಕ್ರಿಯೆ

1. ಶ್ರೀ. ರಾಹುಲ್ ಜೈಸ್ವಾಲ್ – ನನಗೆ ಸನಾತನ ಧರ್ಮದ ಬಗ್ಗೆ ಹೆಮ್ಮೆಯಿದೆ. ನಾನು ಅಯೋಧ್ಯೆ ವಾಸಿಯಾಗಿದ್ದು, ನನ್ನ ಮನೆಯವರಿಗೂ ಕೂಡ ಈ ಉತ್ಸವದ ವೀಡಿಯೋ ನಾನು ಕಳುಹಿಸುವವನಿದ್ದೇನೆ.

2. ದೀಪಾಲಿ ಬನಸೋಡೆ – ಉತ್ಸವವನ್ನು ನೋಡಿ ಅತ್ಯಧಿಕ ಆನಂದವೆನಿಸಿತು, ಬಹಳ ಶಾಂತಿ ಮತ್ತು ಪ್ರಸನ್ನವೆನಿಸಿತು ಅತ್ಯಂತ ಶಿಸ್ತಿನಿಂದ ಮತ್ತು ಶಾಂತವಾಗಿ ಈ ಉತ್ಸವ ಮುಕ್ತಾಯಗೊಂಡಿತು.

3. ಶ್ರೀ ಅನಂತ ಲಿಮಯೆ – ಸನಾತನ ಸಂಸ್ಥೆಯ ಉಪಕ್ರಮಗಳನ್ನು ಅನೇಕ ವರ್ಷಗಳಿಂದ ನೋಡುತ್ತಿದ್ದೇನೆ. ಇದರಿಂದ ದೊಡ್ಡ ಪ್ರಮಾಣದಲ್ಲಿ ಜನಜಾಗೃತಿಯಾಗುತ್ತಿದೆ. ಆದರೆ ಹಿಂದೂಗಳನ್ನು ಜಾಗರೂಕಗೊಳಿಸಲು ಇಂತಹ ಉತ್ಸವವನ್ನು ಏರ್ಪಡಿಸುವ ಆವಶ್ಯಕತೆ ನಿರ್ಮಾಣವಾಗಿರುವುದು ನೋಡಿ ಸ್ವಲ್ಪ ಬೇಸರವಾಗುತ್ತಿದೆ,

4. ಸೌ.ಸ್ವಾತಿ ಕಾಳೆ – ಉತ್ಸವದ ಉತ್ಸಾಹವನ್ನು ನೋಡಿ ಮನಸ್ಸು ತುಂಬಿ ಬಂದಿತು. ಸನಾತನ ಧರ್ಮದ ವಿಷಯದಲ್ಲಿ ಜಾಗೃತಿ ಮೂಡಿಸುವುದು ಕಾಲದ ಆವಶ್ಯಕತೆಯಾಗಿದೆ. ಉತ್ಸವದಲ್ಲಿ ಭಾಗವಹಿಸಿದ್ದ ಮಹಿಳೆಯರು, ಬಾಲಸಾಧಕರ ಪಥ, ಯುವವರ್ಗ, ಹಿರಿಯ ನಾಗರಿಕರು ಈ ರೀತಿ ಎಲ್ಲಾ ಗುಂಪುಗಳು ಮೇಳೈಸಿರುವುದು ನೋಡಿ ಮನಸ್ಸು ತುಂಬಿ ಬಂದಿತು.

5. ಶ್ರೀ. ಅನಿಲ್ ಯಾದವ್ – ಹಿಂದೂ ಸಂಸ್ಕೃತಿಯನ್ನು ರಕ್ಷಿಸಲು ಮತ್ತು ಸನಾತನ ಧರ್ಮದ ಧ್ವಜವನ್ನು ಹಾರಿಸಲು ಪ್ರಯತ್ನಿಸೋಣ.

6. ಶ್ರೀ. ಧನರಾಜ್ ಚೋಪಡಾ ಮತ್ತು ಸೌ. ಮೀನಾಕ್ಷಿ ಜಾವಳಕರ್ – ಹಿಂದೂಗಳ ಸಂಘಟನೆಯನ್ನು ಹೆಚ್ಚಿಸಬೇಕು. ಹಿಂದೂ ಧರ್ಮ ಮಹಾನ್ ಆಗಿದೆ. ಈ ವಿಷಯದಲ್ಲಿ ಎಲ್ಲರಲ್ಲಿ ಜಾಗೃತಿ ಮೂಡಿಸಬೇಕು.

ಕ್ಷಣಚಿತ್ರ: ದಿಂಡಿಯ ಮಾರ್ಗದಲ್ಲಿ ಸಮಾಜದ ಅನೇಕ ಧರ್ಮಪ್ರೇಮಿಗಳು ನಮಸ್ಕಾರ ಮಾಡುತ್ತಿದ್ದರು.

ಉಪಸ್ಥಿತರಿದ್ದ ಗಣ್ಯರು: ಸ್ವಾತಂತ್ರ್ಯವೀರ ಸಾವರ್ಕರ್ ಸ್ಮೃತಿ ಪ್ರತಿಷ್ಠಾನದ ಮಹಾಮಂತ್ರಿ ಶ್ರೀ. ವಿದ್ಯಾಧರ್ ನಾರಗೋಲಕರ್, ಮಹಾರಾಷ್ಟ್ರ ಗೋಸೇವಾ ಆಯೋಗದ ಅಧ್ಯಕ್ಷ ಶ್ರೀ. ಶೇಖರ್ ಮುಂದಡಾ, ಶ್ರೀ ಸಂಪ್ರದಾಯದ ಮಹಿಳಾ ಅಧ್ಯಕ್ಷರಾದ ಸೌ. ಸುರೇಖಾ ಗಾಯಕವಾಡ್, ಶ್ರೀ. ಗಾಯಕವಾಡ್, ಪುಣೆಯ ಪತಿತಪಾವನ ಸಂಘಟನೆಯ ಅಧ್ಯಕ್ಷ ಶ್ರೀ. ಸ್ವಪ್ನೀಲ್ ನಾಯಕ್, ಗ್ರಾಹಕ ಪೇಟೆಯ ಕಾರ್ಯನಿರ್ವಾಹಕ ನಿರ್ದೇಶಕರು ಶ್ರೀ. ಸೂರ್ಯಕಾಂತ್ ಪಾಠಕ್, ವ್ಯಾವಸಾಯಿಕ ಶ್ರೀ ವಿಶ್ರಾಮ್ ಕುಲಕರ್ಣಿ, ಥೋರನ ಕೇಬಲ್ ಚಾಲಕ ಮತ್ತು ಪ್ರಖರ ಹಿಂದುತ್ವನಿಷ್ಠ ಶ್ರೀ ಜ್ಞಾನೇಶ್ವರ ಬಾಂದಲ, ಭಾಜಪದ ಮಾಜಿ ನಗರ ಸದಸ್ಯ ಶ್ರೀ ಜಯಂತ ಭಾವೆ, ವಡಗಾಂವ ಶೇರಿಯ ಧರ್ಮಾಚಾರ್ಯ ಶ್ರೀ. ವೆಂಕಟೇಶ ಕುಲಕರ್ಣಿ, ಭಾಜಪದ ಮಹಿಳಾ ಒಕ್ಕೂಟದ ಮುಖ್ಯಸ್ಥೆ ನ್ಯಾಯವಾದಿ ಈಶಾನಿ ಜೋಶಿ, ಸೇವಾ ಮಿತ್ರ ಮಂಡಳದ ಸಂಸ್ಥಾಪಕ ಅಧ್ಯಕ್ಷ ಶ್ರೀ. ಶಿರೀಷ ಮೊಹಿತೆ, ಪುಣೆ ರೆಸ್ಟೊರೆಂಟ್ ಮತ್ತು ಕೇಟರರ್ಸ್ ಅಸೋಸಿಯೇಶನ್ ಅಧ್ಯಕ್ಷ ಶ್ರೀ.ಕಿಶೋರ್ ಸರಪೋತದಾರ

ವರುಣದೇವತೆಯ ಕೃಪೆ

ಉತ್ಸವದ ಸಮಾರೋಪದಲ್ಲಿ ಉಪಸ್ಥಿತರಿದ್ದ ಹಿಂದೂಗಳು

ಉತ್ಸವದ ಹಿಂದಿನ ದಿನ ಅಂದರೆ ಎಪ್ರಿಲ್ 20 ರ ಸಾಯಂಕಾಲ ಧಾರಾಕಾರ ಮಳೆ ಬಂದಿತ್ತು. ಇದರಿಂದ ಉತ್ಸವ ಸಾಗುವ ಮಾರ್ಗದ ಶುದ್ಧಿಯನ್ನೇ ವರುಣ ದೇವನು ಮಾಡಿದನು. ಇದರಿಂದ ವಾತಾವರಣದ ಉಷ್ಣತೆ ಕಡಿಮೆಯಾಗಿ ಉತ್ಸವದ ದಿನದಂದು ವಾತಾವರಣದಲ್ಲಿ ತಂಪು ಎನಿಸುತ್ತಿತ್ತು. ಹಾಗೆಯೇ ಉತ್ಸವದ ದಿನ ಮಳೆ ಬರದೇ ಉತ್ಸವವು ನಿರ್ವಿಘ್ನವಾಗಿ ಮುಕ್ತಾಯಗೊಂಡಿತು.