Sri Lanka Develops Ramayana Sites: ಶ್ರೀಲಂಕಾ ಸರ್ಕಾರ ರಾಮಾಯಣ ಕಾಲದ 52 ಸ್ಥಳಗಳ ಅಭಿವೃದ್ಧಿ ಪಡಿಸಲಿದೆ !

ಕೊಲಂಬೊ (ಶ್ರೀಲಂಕಾ) – ಶ್ರೀಲಂಕಾ ಸರ್ಕಾರವು ಶ್ರೀಲಂಕಾದಲ್ಲಿ ರಾಮಾಯಣ ಕಾಲದ 52 ಸ್ಥಳಗಳನ್ನು ಅಭಿವೃದ್ಧಿಪಡಿಸಲಿದೆ. ‘ರಾಮಾಯಣ ಟ್ರೆಲ್’ ಹೆಸರಿನಿಂದ ಈ ಯೋಜನೆ ಜಾರಿಯಾಗಲಿದೆ. ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ನ್ಯಾಸಾದ ಖಜಾಂಚಿ ಸ್ವಾಮಿ ಗೋವಿಂದದೇವ ಗಿರಿ ಮಹಾರಾಜ ಮತ್ತು ಟ್ರಸ್ಟನ ಪದಾಧಿಕಾರಿಗಳು ಇತ್ತೀಚೆಗೆ ‘ರಾಮಾಯಣ ಟ್ರೆಲ್’ ಯೋಜನೆಯನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಅವರ ಜೊತೆ ಶ್ರೀಲಂಕಾ ಸಂಸತ್ತಿನ ಅಧ್ಯಕ್ಷ ಮಹಿಂದ ಯಾಪಾ ಅಬೆವರ್ಧನೆ, ಕ್ರಿಕೆಟ್ ಪಟು ಸನತ್ ಜಯಸೂರ್ಯ, ಶ್ರೀಲಂಕಾದಲ್ಲಿರುವ ಭಾರತೀಯ ಹೈಕಮಿಷನರ್ ಸಂತೋಷ್ ಝಾ ಹಾಗೂ ಶ್ರೀಲಂಕಾ ಸರ್ಕಾರದ ಹಲವು ಸಂಸದರು ಮತ್ತು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಶ್ರೀಲಂಕಾದ ಕ್ಯಾಂಡಿ ನಗರದ ಸಮೀಪದಲ್ಲಿರುವ ಗುಡ್ಡಗಾಡು ಪ್ರದೇಶದಲ್ಲಿರುವ ರಾಮಬೋಧ ಹನುಮಾನ್ ದೇವಸ್ಥಾನದಲ್ಲಿ ಸ್ವಾಮಿ ಗೋವಿಂದದೇವ ಗಿರಿ ಮಹಾರಾಜ್ ಇವರು ಹನುಮ ಜಯಂತಿಯ ದಿನದಂದು ವಿಶೇಷ ಪೂಜೆ ಸಲ್ಲಿಸಿದರು. ಈ ದೇವಾಲಯದಲ್ಲಿ 18 ಅಡಿ ಎತ್ತರದ ಹನುಮಂತನ ವಿಗ್ರಹವಿದೆ.