ದೆಹಲಿಯಲ್ಲಿ ಪ್ರಭು ಶ್ರೀರಾಮನ ಚಿತ್ರ ಇರುವ ಪ್ಲೇಟಿನಲ್ಲಿ ಮಟನ್ ಬಿರಿಯಾನಿ ಮಾರಾಟ !

ಮೇಲೆ ಪ್ರಕಟಿಸಿದ ಚಿತ್ರ ಯಾರ ಧಾರ್ಮಿಕ ಭಾವನೆಗಳಿಗೆ ನೋವನ್ನುಂಟು ಮಾಡಿರುವುದಾಗಿರದೆ, ನೈಜ ಸ್ಥಿತಿ ತಿಳಿಸುವುದಾಗಿದೆ

ನವ ದೆಹಲಿ – ಉತ್ತರ ದೆಹಲಿಯ ಜಹಾಂಗೀರಪುರಿಯಲ್ಲಿ ಓರ್ವ ಬಿರಿಯಾನಿ ಮಾರಾಟಗಾರ ಪ್ರಭು ಶ್ರೀರಾಮನ ಚಿತ್ರ ಇರುವ ‘ಡಿಸ್ಪೋಜೆಬಲ್’ (ಉಪಯೋಗಿಸಿ ಬಿಸಾಡುವ) ಪ್ಲೇಟ್ಸ್ ನಲ್ಲಿ ಜನರಿಗೆ ಮಟನ್ ಬಿರಿಯಾನಿ ಮಾರುತ್ತಿರುವುದು ಕಂಡು ಗೊಂದಲ ಸೃಷ್ಟಿಯಾಯಿತು. ಸ್ಥಳೀಯ ಭಜರಂಗದಳದ ಕಾರ್ಯಕರ್ತರ ಅರಿವಿಗೆ ಬಂದ ನಂತರ ಈ ಘಟನೆ ಬೆಳಕಿಗೆ ಬಂದಿದೆ. ಈ ಕಾರ್ಯಕರ್ತರು ಮಾರಾಟಗಾರನ ಬಳಿ ವಿಚಾರಿಸಿದಾಗ, ಜನರಿಗೆ ಈ ‘ಪ್ಲೇಟ್’ನಲ್ಲಿ ಮಟನ್ ಬಿರಿಯಾನಿ ನೀಡುತ್ತಿದ್ದರು. ಈ ಪ್ಲೇಟ್ಸ್ ನಂತರ ಕಸದ ಬುಟ್ಟಿಗೆ ಎಸೆಯುತ್ತಿದ್ದರು ಗಮನಕ್ಕೆ ಬಂದಿತು. ಅದರ ನಂತರ ಹಿಂದುತ್ವನಿಷ್ಠರು ಶ್ರೀರಾಮನ ವಿಡಂಬನೆ ಮಾಡುವ ಮಾರಾಟಗಾರನ ವಿರುದ್ಧ ಪೊಲೀಸರಿಗೆ ದೂರು ನೀಡಿದರು. ಪೊಲೀಸರು ಘಟನಾಸ್ಥಳಕ್ಕೆ ಬಂದು ಮಾರಾಟಗಾರನನ್ನು ವಶಕ್ಕೆ ಪಡೆದು ಅವನ ಹತ್ತಿರ ಇರುವ ಭಗವಾನ್ ಶ್ರೀರಾಮನ ಚಿತ್ರ ಇರುವ ಪ್ಲೇಟ್ ವಶಕ್ಕೆ ಪಡೆದರು.

ಸಂಪಾದಕೀಯ ನಿಲುವು

ಹಿಂದೂ ಬಹುಸಂಖ್ಯಾತ ಭಾರತದ ರಾಜಧಾನಿಯಲ್ಲಿ ಈ ರೀತಿ ಹಿಂದೂಗಳ ಆರಾಧ್ಯ ದೇವತೆಯ ವಿಡಂಬನೆ ನಡೆಯುವುದು, ಇದು ಹಿಂದುಗಳಿಗೆ ಲಜ್ಜಾಸ್ಪದ !