ಪ್ಲಾಸ್ಟಿಕ್ ನಿಂದ ಮಾನಸಿಕ ಆರೋಗ್ಯ ಹದಗೆಡುತ್ತದೆ ! – ಸಂಶೋಧನೆಯ ನಿಷ್ಕರ್ಷ

ನವ ದೆಹಲಿ – ‘ಎನ್ವಾಯರ್ನಮೆಂಟಲ್ ಹೆಲ್ತ್ ಫರ್ಸ್ಪೆಕ್ಟಿವ್ಹ ಜರ್ನಲ್’ನಲ್ಲಿ ಇತ್ತೀಚಿಗೆ ಪ್ರಕಾಶಿಸಿದ ಒಂದು ಅಧ್ಯಯನದ ಪ್ರಕಾರ, ಪ್ಲಾಸ್ಟಿಕಿನ ಚಿಕ್ಕ ಕಣಗಳು, ಅವುಗಳನ್ನು ಮೈಕ್ರೋ ಪ್ಲಾಸ್ಟಿಕ ಎಂದು ಕರೆಯುತ್ತಾರೆ, ಅವುಗಳು ಮಾನಸಿಕ ಆರೋಗ್ಯಕ್ಕೆ ಬಹಳಷ್ಟು ಹಾನಿ ಉಂಟು ಮಾಡುತ್ತವೆ.

೧. ನ್ಯೂ ಮೆಕ್ಸಿಕೋ ವಿದ್ಯಾಪೀಠದಲ್ಲಿನ ಸಂಶೋಧಕರು ಅವರ ಪ್ರಸಿದ್ಧಿ ಪತ್ರದಲ್ಲಿ, ಪ್ಲಾಸ್ಟಿಕಿನ ಚಿಕ್ಕ ಕಣಗಳು ದೇಹದಲ್ಲಿನ ಯಕೃತ, ಮೂತ್ರಪಿಂಡ ಮತ್ತು ಮೆದುಳು ಇಂತಹ ಮಹತ್ವದ ಅವಯವಗಳ ವರೆಗೆ ತಲುಪಿ ಅವುಗಳಿಗೆ ಹಾನಿ ಉಂಟು ಮಾಡುತ್ತವೆ. ಇದರಿಂದ ದೀರ್ಘಕಾಲದ ಗಂಭೀರ ಪರಿಣಾಮ ಆಗಬಹುದು ಎಂದು ಹೇಳಿದ್ದಾರೆ.

೨. ಕಾನಪುರದ ನ್ಯೂರೋಫಿಜೀಷಿಯನ್ (ಮೆದುಳು ಮತ್ತು ಪಚನ ಕ್ರಿಯೆಯ ಡಾಕ್ಟರ್) ಡಾ. ಅನಿಮೇಶ್ ಗುಪ್ತ ಇವರ ಪ್ರಕಾರ, ಪ್ಲಾಸ್ಟಿಕ್ ಮೊಟ್ಟ ಮೊದಲು ಚರ್ಮ, ಶ್ವಾಸ ಮತ್ತು ಅನ್ನದ ಮೂಲಕ ದೇಹದಲ್ಲಿ ಪ್ರವೇಶಿಸುತ್ತದೆ. ನಂತರ ಅದು ರಕ್ತದಲ್ಲಿ ಸೇರಿ ನಿಧಾನವಾಗಿ ಎಲ್ಲಾ ಅವಯವಗಳಲ್ಲಿ ಸಂಗ್ರಹವಾಗುತ್ತದೆ. ಅವಯವಗಳಲ್ಲಿ ಸಂಗ್ರಹವಾದ ಪ್ಲಾಸ್ಟಿಕ್ ನ ಕಣಗಳು ಅತ್ಯಂತ ಚಿಕ್ಕದಾಗಿ ಇರುತ್ತವೆ. ಅದರ ಆಕಾರ ೨೦ ಮೈಕ್ರೋಮೀಟರ್ ಗಿಂತಲೂ ಕಡಿಮೆ ಇರುತ್ತದೆ. ಅದರ ನಂತರ ಅವೆಲ್ಲವೂ ಅಡೆತಡೆಗಳನ್ನು ದಾಟಿ ಯಕೃತ, ಮೂತ್ರಪಿಂಡ ಮತ್ತು ಮೆದುಳಿನವರೆಗೆ ತಲುಪುತ್ತವೆ. ಈ ಕಣಗಳಿಂದ ಮೆದುಳಿನ ಮೇಲೆ ನಕರಾತ್ಮಕ ಪರಿಣಾಮವಾಗುತ್ತದೆ. ಆದ್ದರಿಂದ ‘ಪಾರ್ಕಿನ್ಸನ್ಸ ‘ನಂತಹ (ಮೆದುಳಿಗೆ ಸಂಬಂಧಿಸಿದ ಕಾಯಿಲೆ) ಕಾಯಿಲೆಯ ಅಪಾಯ ನಿರ್ಮಾಣವಾಗಬಹುದು.

೩. ‘ದ ಲ್ಯಾಂಸೇಂಟ್’ನಲ್ಲಿ ಪ್ರಕಾಶಿತಗೊಂಡಿರುವ ಅಧ್ಯಯನದ ಪ್ರಕಾರ ಮೈಕ್ರೋ ಪ್ಲಾಸ್ಟಿಕಿನಿಂದ ಕರುಳಿನ ಆರೋಗ್ಯ ಕೂಡ ಹದಗೆಡಬಹುದು.

೪. ‘ಜರ್ನಲ್ ಆಫ್ ನ್ಯಾನೋ ಬಯೋಟೆಕ್ನಾಲಜಿ’ಯಲ್ಲಿ ಪ್ರಕಾಶಿತಗೊಂಡಿರುವ ಅಧ್ಯಯನದ ಪ್ರಕಾರ, ಇತ್ತೀಚಿನ ವರ್ಷಗಳಲ್ಲಿ, ಪ್ಲಾಸ್ಟಿರಿಂನ್ ಮೈಕ್ರೋ ಪ್ಲಾಸ್ಟಿಕ್ಸ್ ಇದು ಮೂತ್ರ ಪಿಂಡಗಳಲ್ಲಿ ಉರಿಯಾಗುವುದಕ್ಕೆ ಮುಖ್ಯ ಕಾರಣವಾಗಿದೆ ಮತ್ತು ಅದು ಆಕ್ಸಿಡೆಂಟಿವ್ (ಸ್ವಸನಕ್ಕೆ ಸಂಬಂಧಿತ ಒತ್ತಡ) ಒತ್ತಡ ಕೂಡ ಹೆಚ್ಚಿಸುತ್ತದೆ. ಈ ಪರಿಸ್ಥಿತಿ ದೀರ್ಘಕಾಲದ ವರೆಗೆ ಉಳಿದರೆ ಮೂತ್ರಪಿಂಡದ ರೋಗ ಉಲ್ಬಣಿಸುವ ಅಪಾಯ ಹೆಚ್ಚುತ್ತದೆ. ಇದರಿಂದ ನಂತರ ಅವುಗಳು ನಿಷ್ಕ್ರಿಯವಾಗಬಹುದು.

೫. ‘ಸೈನ್ಸ್ ಡೈರೆಕ್ಟ್ ಜರ್ನಲ್’ನಲ್ಲಿ ಪ್ರಕಾಶಿತಗೊಂಡಿರುವ ಅಧ್ಯಯನದ ಪ್ರಕಾರ, ‘ಉಸಿರಾಟದ ಮೂಲಕ ಕರಗುವ ಪ್ಲಾಸ್ಟಿಕ್ ಕಣಗಳು ಶ್ವಾಸಕೋಶದವರೆಗೆ ತಲುಪುತ್ತವೆ. ಪ್ಲಾಸ್ಟಿಕ್ ನಲ್ಲಿರುವ ವಿಷಾಕಾರಿ ಅಂಶಗಳಿಂದ ಅಸ್ತಮಾ ಮತ್ತು ಶ್ವಾಸಕೋಶದ ಕ್ಯಾನ್ಸರನ ಅಪಾಯ ಇರುತ್ತದೆ.

೬. ‘ದ ಲ್ಯಾಂನಸೆಟ್’ನಲ್ಲಿ ಪ್ರಕಾಶಿತಗೊಂಡಿರುವ ಅಧ್ಯಯನದ ಪ್ರಕಾರ, ಪ್ಲಾಸ್ಟಿಕ್ ಇದು ನ್ಯೂರೋಟಾಕ್ಸಿಕ ಆಗಿದೆ. ಇದರ ಅರ್ಥ ಅದು ನರಗಳ ಕಾರ್ಯದ ಮೇಲೆ ಪರಿಣಾಮ ಬೀರಬಹುದು ಮತ್ತು ಅದನ್ನು ನಾಶ ಕೂಡ ಮಾಡಬಹುದು. ಇದರಿಂದ ಕ್ಯಾನ್ಸರನ ಅಪಾಯ ಕೂಡ ಹೆಚ್ಚುತ್ತದೆ.

೭. ವಿಶ್ವಸಂಸ್ಥೆಯ ಅಭಿಪ್ರಾಯದ ಪ್ರಕಾರ, ಪ್ರತಿ ವರ್ಷ ಜಗತ್ತಿನಾದ್ಯಂತ ೪೩ ಕೋಟಿ ಮೆಟ್ರಿಕಟನ್ ಪ್ಲಾಸ್ಟಿಕ್ ಅನ್ನು ಮನುಷ್ಯ ನಿರ್ಮಿಸುತ್ತಾನೆ. ಇದರಲ್ಲಿ ಮೂರನೆಯ ಎರಡು ಭಾಗ ಪ್ಲಾಸ್ಟಿಕ್ ಬೇಗನೆ ತ್ಯಾಜ್ಯವಾಗಿ ನಿರ್ಮಾಣವಾಗುತ್ತದೆ, ಆದರೆ ಅದು ನಾಶವಾಗುವುದಿಲ್ಲ.

೮. ಪ್ಲಾಸ್ಟಿಕಿನ ಎಲ್ಲಕ್ಕಿಂತ ದೊಡ್ಡ ನಷ್ಟ ಎಂದರೆ ಅದು ನಾಶವಾಗುವುದಿಲ್ಲ. ಅದು ಸಾವಿರ ವರ್ಷ ನಿಸರ್ಗದಲ್ಲಿ ಇದ್ದು ವಾತಾವರಣಕ್ಕೆ ಹಾನಿ ಉಂಟು ಮಾಡುತ್ತದೆ. ಪ್ಲಾಸ್ಟಿಕ್ ಮಣ್ಣಿನಲ್ಲಿ ಸೇರುತ್ತದೆ ಮತ್ತು ಬೆಳೆಗಳಿಗೆ ಮತ್ತು ಮರಗಳಿಗೆ ಹಾನಿ ಉಂಟು ಮಾಡುತ್ತದೆ. ನೀರಿನಲ್ಲಿ ಸೇರಿದಾಗ ಮೀನುಗಳು ಮತ್ತು ಜಲಚರ ಪ್ರಾಣಿಗಳ ಆರೋಗ್ಯ ಹಾಳಾಗುತ್ತದೆ.

೯. ೨೦೬೦ ವರೆಗೆ ಪ್ಲಾಸ್ಟಿಕ್ ನ ಉತ್ಪಾದನೆ ೩ ಪಟ್ಟು ಹೆಚ್ಚಾಗಬಹುದು ಮತ್ತು ಅದರ ಜೊತೆಗೆ ಪ್ಲಾಸ್ಟಿಕ್ ನ ತ್ಯಾಜ್ಯ ಕೂಡ ಹೆಚ್ಚಾಗುವುದು.

ಸಂಪಾದಕೀಯ ನಿಲುವು

ಪ್ಲಾಸ್ಟಿಕ್ ನಿಂದ ಆರೋಗ್ಯಕ್ಕೆ ಎಲ್ಲಾ ರೀತಿಯ ಹಾನಿ ಆಗುತ್ತದೆ, ಇದು ಸ್ಪಷ್ಟವಾಗಿದ್ದರೆ ಈಗ ಅದರ ಮೇಲೆ ಅಂತರಾಷ್ಟ್ರೀಯ ಮಟ್ಟದಲ್ಲಿ ನಿಷೇದ ಹೇರುವುದು ಅವಶ್ಯಕವಾಗಿದೆ, ಇದಕ್ಕಾಗಿ ಭಾರತವೇ ನೇತೃತ್ವ ವಹಿಸಬೇಕು !