ಬ್ರಿಟನ್‌ ಸಂಸತ್ತಿನ ಮಾನವ ಹಕ್ಕುಗಳ ಮಂಡಳಿಯು ಪಾಕಿಸ್ತಾನಕ್ಕೆ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯದ ಮಾಹಿತಿ ಕೇಳಿದೆ !

ಲಂಡನ್ (ಇಂಗ್ಲೆಂಡ್) – ಪಾಕಿಸ್ತಾನಿ ಅಲ್ಪಸಂಖ್ಯಾತರಿಗಾಗಿ ಹೋರಾಡುವ ಬ್ರಿಟಿಷ್ ಸಂಸತ್ತಿನಲ್ಲಿ ‘ಆಲ್ ಪಾರ್ಟಿ ಪಾರ್ಲಿಮೆಂಟರಿ ಗ್ರೂಪ್ ಫಾರ್ ಪಾಕಿಸ್ತಾನಿ ಪಾರ್ಲಿಮೆಂಟರಿ ಗ್ರೂಪ್’ ಎಂಬ ಸಂಘಟನೆಯು ಪಾಕಿಸ್ತಾನವನ್ನು ಆಧರಿಸಿ ಸಂಶೋಧನೆ ನಡೆಸುತ್ತಿದೆ. ಇದಕ್ಕಾಗಿ, ಈ ಸಂಸ್ಥೆಯು ‘ಗುಲಾಮರನ್ನು ಮಾಡುವ ಮೂಲಕ ಬಲವಂತದ ಕೆಲಸ ಮತ್ತು ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ಅದರ ಪರಿಣಾಮ’ ವಿಷಯದ ಕುರಿತು ಸಂಶೋಧನೆಯನ್ನು ಪ್ರಾರಂಭಿಸಿದೆ. ಈ ಮೂಲಕ ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯವನ್ನು ಬಹಿರಂಗ ಪಡಿಸುವುದಿದೆ ಎಂದು ಈ ಸಂಘಟನೆಯ ಹೇಳಿಕೆಯಾಗಿದೆ.

ಇದಕ್ಕಾಗಿ, ಈ ಸಂಸಘಟನೆಯು ಪಾಕಿಸ್ತಾನಿ ಹಿಂದೂಗಳಿಗಾಗಿ ಕೆಲಸ ಮಾಡುವ ಜನರನ್ನು ಏಪ್ರಿಲ್ 29 ರವರೆಗಿನ ಅಂಕಿಅಂಶಗಳು, ಮಾಹಿತಿ ಅಥವಾ ಅಪರಾಧಗಳ ದಾಖಲೆಗಳನ್ನು ನೀಡುವಂತೆ ಕೇಳಿದೆ. ಮೇಲಿನ ಮಾಹಿತಿಯನ್ನು info@insightuk.org ಗೆ ಇಮೇಲ್ ಮಾಡಲು ಸಂಘಟನೆಯ ಪರವಾಗಿ ವಿನಂತಿಸಲಾಗಿದೆ. ಪಾಕಿಸ್ತಾನದಲ್ಲಿ ಹಿಂದೂಗಳಿಗಾಗಿ ಕೆಲಸ ಮಾಡುತ್ತಿರುವ ಶ್ರೀ. ಮಹೇಶ್ ವಾಸು ಅವರು ‘ಸನಾತನ ಪ್ರಭಾತ’ಕ್ಕೆ ಈ ಮಾಹಿತಿ ನೀಡಿದ್ದಾರೆ.