
ಪ್ರಯಾಗರಾಜ, ಜನವರಿ 24 (ಸುದ್ದಿ.) – ಮಹಾಕುಂಭಮೇಳದಲ್ಲಿ ಭಾಗವಹಿಸಿದ್ದ ಅನೇಕ ಸಂತರು ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಿಸಬೇಕೆಂದು ಸಾರ್ವಜನಿಕವಾಗಿ ಒತ್ತಾಯಿಸಿದ್ದಾರೆ. ಮಹಾಕುಂಭಮೇಳದಲ್ಲಿ ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಿಸಬೇಕೆಂಬ ಬೇಡಿಕೆ ಹೆಚ್ಚುತ್ತಿರುವ ನಡುವೆಯೇ, ಜಗದ್ಗುರು ಆದಿ ಶಂಕರಾಚಾರ್ಯರ ಮೂಲ ಪೀಠವಾದ ಶಾಂಭವಿ ಸೇನಾ ಪೀಠವು ಭವಿಷ್ಯದ ಹಿಂದೂ ರಾಷ್ಟ್ರದ ಸಂವಿಧಾನಿಕ ಕರಡುಅನ್ನು ಘೋಷಿಸಿದೆ. ಜನವರಿ 24 ರಂದು, ಶಾಂಭವಿ ಸೇನಾ ಪೀಠಾಧೀಶ್ವರ ಮತ್ತು ಸಶಸ್ತ್ರ ಕಾಲಿ ಸೇನೆಯ ಅಧ್ಯಕ್ಷ ಸ್ವಾಮಿ ಆನಂದ ಸ್ವರೂಪ ಮಹಾರಾಜರು ಪತ್ರಿಕಾಗೋಷ್ಠಿ ನಡೆಸಿ ಇದನ್ನು ಘೋಷಿಸಿದರು.
Shambhavi Peethadheeshwar and President of the Kali Sena, Swami Anand Swaroop Maharaj @kalisenachief announces a draft version of the Constitution of the Hindu Rashtra at the #MahaKumbh2025
After 1976, the Constitution was amended, and the word ‘secular’ was added to… pic.twitter.com/zoBH9teoQ3
— Sanatan Prabhat (@SanatanPrabhat) January 24, 2025
ಪತ್ರಿಕಾ ಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡುತ್ತಾ ಸ್ವಾಮಿ ಆನಂದ ಸ್ವರೂಪ ಮಹಾರಾಜರು,
1. ಭಾರತದ ಏಕತೆ ಮತ್ತು ಅಖಂಡತೆಗಾಗಿ, ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಿಸುವುದು ಆವಶ್ಯಕವಾಗಿದೆ. ಈ ಕರಡನ್ನು ಧರ್ಮಾಚಾರ್ಯರು, ವಿದ್ವಾಂಸರು, ನ್ಯಾಯಾಧೀಶರು ಮತ್ತು ವಕೀಲರ ಮೂಲಕ ಸಿದ್ಧಪಡಿಸಲಾಗಿದೆ.
2. ಹಿಂದೂ ರಾಷ್ಟ್ರದಲ್ಲಿ ಧರ್ಮಶಾಸ್ತ್ರವನ್ನು ಅನುಸರಿಸಿ ಆಡಳಿತ ವ್ಯವಸ್ಥೆ ಇರಲಿದೆ. ಯಾರಿಗೆ ಯಾವ ಅಧಿಕಾರಗಳು ಇರಲಿವೆ? ಇದರ ಬಗ್ಗೆ ವಿವರವಾದ ಮಾಹಿತಿಯನ್ನು ಈ ಕರಡಿನಲ್ಲಿ ಬರೆಯಲಾಗಿದೆ.
3. 1976 ರ ನಂತರ, ಸಂವಿಧಾನಕ್ಕೆ ತಿದ್ದುಪಡಿ ತಂದು ‘ಜಾತ್ಯತೀತ’ ಎಂಬ ಪದವನ್ನು ಸೇರಿಸಿ, ಭಾರತದ ಸಂಸ್ಕೃತಿಯ ಮೇಲೆ ದಾಳಿ ನಡೆಸಲಾಯಿತು. ಬಹುಸಂಖ್ಯಾತ ಹಿಂದೂಗಳಾಗಿರುವ ಭಾರತದಲ್ಲಿ ಹಿಂದೂ ಧರ್ಮವನ್ನು ನಿರ್ಮೂಲನೆ ಮಾಡಲು ಈ ಷಡ್ಯಂತ್ರವನ್ನು ರೂಪಿಸಲಾಗಿತ್ತು.
4. ವಿಭಜನೆಯ ಸಮಯದಲ್ಲಿ ಮುಸ್ಲಿಮರಿಗಾಗಿ ಪಾಕಿಸ್ತಾನ ನಿರ್ಮಾಣವಾದಾಗಲೇ ಹಿಂದೂಗಳಿಗಾಗಿ ಹಿಂದೂ ರಾಷ್ಟ್ರವನ್ನು ಘೋಷಿಸುವುದು ಅಗತ್ಯವಾಗಿತ್ತು.
ಫೆಬ್ರವರಿ 1 ರಂದು ಸಂತರ ಸಮಾವೇಶ ಆಯೋಜನೆ !
ಸಂತರ ಸಮಾವೇಶವನ್ನು ಫೆಬ್ರವರಿ 1 ರಂದು ಆಯೋಜಿಸಲಾಗಿದೆ. ಈ ಸಮ್ಮೇಳನದಲ್ಲಿ ‘ಹಿಂದೂ ರಾಷ್ಟ್ರದ ಆಡಳಿತ ವ್ಯವಸ್ಥೆ ಹೇಗಿರಬೇಕು?’, ‘ಹಿಂದೂ ರಾಷ್ಟ್ರದ ಧರ್ಮಗುರು, ಸಂತರು-ಮಹಂತರ ಮನಃಸ್ಥಿತಿ ಹೇಗಿರಬೇಕು ?’ ಮತ್ತು ‘ಸಧ್ಯದ ಅಖಾಡಗಳಲ್ಲಿನ ಅರಾಜಕತೆಯನ್ನು ನೋಡಿದರೆ ಎಲ್ಲಾ ಅಖಾಡಗಳನ್ನು ಪುನರ್ ಸಂಘಟಿಸುವುದು ಅಗತ್ಯವಾಗಿದೆ.’ ಎಂಬ ವಿಷಯಗಳನ್ನು ಚರ್ಚಿಸಲಾಗುತ್ತದೆ.
ವೃತ್ತಗಳಲ್ಲಿ ನಿಂತು ಹಿಂದೂ ರಾಷ್ಟ್ರಕ್ಕಾಗಿ ಹಸ್ತಾಕ್ಷರ ಅಭಿಯಾನ !
ಕುಂಭಮೇಳದಲ್ಲಿ ಜನವರಿ 25 ರಿಂದ 108 ಸ್ಥಳಗಳಲ್ಲಿ ನಿಂತು ಭಕ್ತರಿಗೆ ಹಿಂದೂ ರಾಷ್ಟ್ರದ ಆವಶ್ಯಕತೆ ಏಕೆ ? ಎನ್ನುವ ಬಗ್ಗೆ ಮಾಹಿತಿ ನೀಡಿ ಹಿಂದೂ ರಾಷ್ಟ್ರ ಸ್ಥಾಪನೆಗೆ ಒತ್ತಾಯಿಸುವ ಮನವಿಗೆ ಹಸ್ತಾಕ್ಷರ ಸಂಗ್ರಹಿಸಲಾಗುವುದು.