Sri Tulajabhavani Devi : ಶ್ರೀ ತುಳಜಾಭವಾನಿ ದೇವಿಯ ಖಜಾನೆಯಲ್ಲಿರುವ ಚಿನ್ನ ಮತ್ತು ಬೆಳ್ಳಿಯನ್ನು ಕರಗಿಸಬೇಕೆಂಬ ಧಾರಾಶಿವ ಜಿಲ್ಲಾಧಿಕಾರಿಯ ಬೇಡಿಕೆಯನ್ನು ಮುಂಬಯಿ ಹೈಕೋರ್ಟ್ ತಿರಸ್ಕರಿಸಿತು !

ಹಿಂದೂ ಜನಜಾಗೃತಿ ಸಮಿತಿಯ ಅರ್ಜಿಯ ಕುರಿತು ನಿರ್ಧಾರ

ಸಂಭಾಜಿನಗರ – ಶ್ರೀ ತುಳಜಾಭವಾನಿ ದೇವಿಗೆ ಸೇರಿದ 207 ಕೆಜಿ ಚಿನ್ನ ಮತ್ತು 2 ಸಾವಿರದ 570 ಕೆಜಿ ಬೆಳ್ಳಿಯನ್ನು ಕರಗಿಸಲು ಅನುಮತಿ ಕೋರಿ ಧಾರಾಶಿವ ಜಿಲ್ಲಾಧಿಕಾರಿ ಸಲ್ಲಿಸಿದ್ದ ಅರ್ಜಿಯನ್ನು ಮುಂಬಯಿ ಹೈಕೋರ್ಟ್‌ನ ಸಂಭಾಜಿನಗರ ಪೀಠವು ಜನವರಿ 23 ರಂದು ತಿರಸ್ಕರಿಸಿದೆ ಎಂದು ಪ್ರಕರಣದ ವಿರುದ್ಧ ಹೋರಾಡುತ್ತಿರುವ ವಕೀಲ ಉಮೇಶ್ ಭಡಗಾವಕರ ಇವರು ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ ನ್ಯಾಯಮೂರ್ತಿ ಮಂಗೇಶ ಪಾಟೀಲ ಮತ್ತು ನ್ಯಾಯಮೂರ್ತಿ ಶೈಲೇಶ ಬ್ರಹ್ಮೆ ಅವರು ಈ ಆದೇಶವನ್ನು ನೀಡಿದ್ದಾರೆ. ಈ ನಿಟ್ಟಿನಲ್ಲಿ, ಶ್ರೀ ತುಳಜಾ ಭವಾನಿ ದೇವಾಲಯ ಸಂಸ್ಥಾನಕ್ಕೆ ‘ಈ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಅನ್ನು ಸಂಪರ್ಕಿಸಲು’ ಸೂಚಿಸಿದೆ. ದೇವಾಲಯದಲ್ಲಿರುವ ಚಿನ್ನ ಮತ್ತು ಬೆಳ್ಳಿಯನ್ನು ಕರಗಿಸುವ ನಿರ್ಧಾರವನ್ನು ವಿರೋಧಿಸಿ ಕೆಲವು ಅರ್ಚಕರು ಮತ್ತು ಹಿಂದೂ ಜನಜಾಗೃತಿ ಸಮಿತಿ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಹೂಡಿದ್ದರು. ಈ ಬಗ್ಗೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.