ಪಾಕಿಸ್ತಾನದ ಮೊದಲ ’ಮುಖ್ಯಮಂತ್ರಿ ಅಲ್ಪಸಂಖ್ಯಾತ ಕಾರ್ಡ್’ ಯೋಜನೆ ಜಾರಿ
ಪಂಜಾಬ್ (ಪಾಕಿಸ್ತಾನ) – ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಮುಖ್ಯಮಂತ್ರಿ ಮರಿಯಮ ನವಾಜ್ ಅವರು ಪಾಕಿಸ್ತಾನದ ಮೊದಲ ’ಮುಖ್ಯಮಂತ್ರಿ ಅಲ್ಪಸಂಖ್ಯಾತ ಕಾರ್ಡ್’ ಯೋಜನೆಯನ್ನು ಪ್ರಾರಂಭಿಸಿದ್ದಾರೆ. ಈ ಯೋಜನೆಯಡಿಯಲ್ಲಿ, ಪಂಜಾಬ್‌ನ ಮರಿಯಮ್ ನವಾಜ್ ಸರಕಾರವು ಪ್ರಾಂತ್ಯದ ೫೦ ಸಾವಿರ ಅಲ್ಪಸಂಖ್ಯಾತ ಕುಟುಂಬಗಳಿಗೆ ಪ್ರತಿ ತ್ರೈಮಾಸಿಕಕ್ಕೆ ೧೦ ಸಾವಿರದ ೫೦೦ ರೂಪಾಯಿ (ಸುಮಾರು ೩ ಸಾವಿರದ ೨೦೦ ರೂಪಾಯಿ) ಒದಗಿಸುತ್ತದೆ. ಹಬ್ಬದ ಸಮಯದಲ್ಲಿ ಈ ಮೊತ್ತವನ್ನು ೧೫ ಸಾವಿರ ರೂಪಾಯಿಗಳಿಗೆ ಹೆಚ್ಚಿಸಲಾಗುವುದು ಎಂದು ನವಾಜ್ ಹೇಳಿದರು.
ಅಲ್ಪಸಂಖ್ಯಾತ ಸಮುದಾಯಗಳನ್ನು ರಕ್ಷಿಸುವುದು ಮತ್ತು ಅವರ ಜೀವನವನ್ನು ಸುಧಾರಿಸುವುದು ನಮ್ಮ ಜವಾಬ್ದಾರಿ ಎಂದು ನವಾಜ್ ಹೇಳಿದರು. ಅಲ್ಪಸಂಖ್ಯಾತ ಸಮುದಾಯದ ಜೀವ ಮತ್ತು ಆಸ್ತಿಗೆ ಅಪಾಯವನ್ನುಂಟು ಮಾಡುವವರನ್ನು ತಡೆಯಲು ನಾವು ಎಲ್ಲಾ ಶಕ್ತಿಗಳಿಂದ ತಡೆಯುವೆವು ಎಂದು ಭರವಸೆ ನೀಡಿದರು. (ಯಾವುದೇ ಮಗು ಕೂಡ ಮರಿಯಾಮ್ ನವಾಜ್ ಅವರ ಇಂತಹ ಹೇಳಿಕೆಗಳನ್ನು ನಂಬುತ್ತದೆಯೇ ? – ಸಂಪಾದಕರು)
ಪಂಜಾಬ್‌ನ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ರಮೇಶ್ ಸಿಂಗ್ ಅರೋರಾ ಅವರು ಮಾತನಾಡಿ, ಅಲ್ಪಸಂಖ್ಯಾತರ ವ್ಯವಹಾರಗಳನ್ನು ವೈಯಕ್ತಿಕವಾಗಿ ಮೇಲ್ವಿಚಾರಣೆ ಮಾಡುತ್ತಾರೆ ಎಂದು ಹೇಳಿದರು.
ಸಂಪಾದಕೀಯ ನಿಲುವುಒಂದೆಡೆ, ಮಕರ ಸಂಕ್ರಾಂತಿಯಂದು ಗಾಳಿಪಟ ಹಾರಿಸುವ ಹಿಂದೂ ಸಂಪ್ರದಾಯದ ವಿರುದ್ಧ ಕಾನೂನು ಜಾರಿಗೆ ತಂದು, ಅದನ್ನು ಇಸ್ಲಾಮಿಕ್ ವಿರೋಧಿ ಎಂದು ಕರೆದು, ಮತ್ತೊಂದೆಡೆ, ಈ ರೀತಿ ಆರ್ಥಿಕ ನೆರವು ನೀಡುವಂತೆ ನಟಿಸುತ್ತಿದ್ದರು ! ಭ್ರಷ್ಟಾಚಾರದಲ್ಲಿ ಮುಳುಗಿರುವ ಪಾಕಿಸ್ತಾನವು ಈ ಹಣದಲ್ಲಿ ಎಷ್ಟು ಹಿಂದೂಗಳಿಗೆ ನೀಡುವರು ಎಂಬುದು ಪ್ರಶ್ನೆಯಾಗಿಯೇ ಉಳಿದಿದೆ ! |