ವಕ್ಫ್ ಬೋರ್ಡ್‌ಅನ್ನು ರದ್ದುಗೊಳಿಸಲು ಭಾರತದಾದ್ಯಂತ ಗೋಹತ್ಯೆಯನ್ನು ನಿಷೇಧಿಸಲು ಆಗ್ರಹ !

ಶ್ರೀ. ಸಚಿನ್ ಕೌಲಕರ, ವಿಶೇಷ ವರದಿಗಾರ, ಪ್ರಯಾಗರಾಜ್
ಪ್ರಯಾಗರಾಜ್ – ಶ್ರೀ ಕೃಷ್ಣನ ಜನ್ಮಭೂಮಿಯ ಮುಕ್ತಿಗಾಗಿ ಜಾಗೃತಿ ಅಭಿಯಾನಗಳನ್ನು ಹಮ್ಮಿಕೊಂಡು ಹಿಂದೂಗಳಲ್ಲಿ ಚೇತನವನ್ನು ಜಾಗೃತಗೊಳಿಸಲು ದೇಶದ ರಸ್ತೆಗಳಲ್ಲಿರುವ ಮಸೀದಿಗಳು, ಕಬ್ರಗಳು ಮತ್ತು ಮದರಸಾಗಳ ಅತಿಕ್ರಮಣಗಳನ್ನು ಸರಕಾರ ತಕ್ಷಣ ತೆಗೆದುಹಾಕಬೇಕು, ಭಾರತದಾದ್ಯಂತ ಗೋಹತ್ಯೆಯನ್ನು ನಿಷೇಧಿಸಬೇಕು ಮತ್ತು ಅದಕ್ಕೆ ‘ರಾಷ್ಟ್ರಮಾತೆ’ ಎಂಬ ಸ್ಥಾನಮಾನ ನೀಡಬೇಕು ಮತ್ತು ಇಸ್ಲಾಮಿಕ್ ವಕ್ಫ್ ಬೋರ್ಡ್‌ಅನ್ನು ಸಂಪೂರ್ಣವಾಗಿ ರದ್ದುಗೊಳಿಸಬೇಕು ಎಂದು ಇತ್ತೀಚೆಗೆ ಮುಕ್ತಾಯಗೊಂಡ ‘ಧರ್ಮ ಸಂಸತ್ತಿನಲ್ಲಿ ಗರ್ಜಿಸಲಾಯಿತು.
ಜನವರಿ 23 ರಂದು, ಶ್ರೀ ಕೃಷ್ಣ ಜನ್ಮಭೂಮಿ ಸಂಘರ್ಷ ಟ್ರಸ್ಟ್ ನ ವತಿಯಿಂದ ಬೆಳಿಗ್ಗೆ 10 ಗಂಟೆಗೆ ಸೆಕ್ಟರ್ 19 ರ ಶಂಕರಾಚಾರ್ಯ ಮಾರ್ಗದಲ್ಲಿರುವ ಶ್ರೀ ಬಾಬಾನಗರ ಅಖಾಡದಲ್ಲಿ ‘ವಿರಾಟ್ ಧರ್ಮ ಸಂಸದ್’ ನೆರವೇರಿತು. ಈ ಸಂದರ್ಭದಲ್ಲಿ, ವ್ಯಾಸಪೀಠದಲ್ಲಿ ಮಹಾಮಂಡಲೇಶ್ವರ ಯತಿ ನರಸಿಂಹಾನಂದ ಸರಸ್ವತಿ ಮಹಾರಾಜ್, ಶ್ರೀ ಕೃಷ್ಣ ಜನ್ಮಭೂಮಿ ದೇವಾಲಯದ ಪ್ರಧಾನ ಅರ್ಚಕ ಪಂಡಿತ್ ದಿನೇಶ ಶರ್ಮಾ (ಫಲಾಹಾರಿ), ಸಂಸತ್ತಿನ ಆಚಾರ್ಯ ರಮಾಕಾಂತ ಗೋಸ್ವಾಮಿ, ರಾಷ್ಟ್ರೀಯ ಪ್ರಧಾನ ಸಂರಕ್ಷಕ ಶ್ರೀ. ವೇದಪ್ರಕಾಶ ಕಟಿಯಾರ್, ಮಹಂತ ಮಹೋಹಿನಿ ಶರಣ ಮಹಾರಾಜ್ ಮತ್ತು ಇತರ ಸಂತರು ಮತ್ತು ಮಹಂತರು ಉಪಸ್ಥಿತರಿದ್ದರು.
ಮಹಾಮಂಡಲೇಶ್ವರ ಯತಿ ನರಸಿಂಹಾನಂದ ಸರಸ್ವತಿ ಮಹಾರಾಜ್ ಇವರು ಮಾತನಾಡಿ, “ಭಾರತವನ್ನು ಇಸ್ಲಾಮೀಕರಣಗೊಳಿಸಲು ಮತಾಂಧರು ಪ್ರಯತ್ನಿಸುತ್ತಿದ್ದಾರೆ”. ಬಾಂಗ್ಲಾದೇಶದಲ್ಲಿ ಅಧಿಕಾರ ಬದಲಾವಣೆಯ ನಂತರ, ಅಲ್ಲಿ ಹಿಂದೂಗಳ ಮೇಲೆ ನಿರಂತರವಾಗಿ ದೌರ್ಜನ್ಯಗಳು ನಡೆಯುತ್ತಿವೆ. ಇಲ್ಲಿಯವರೆಗೆ ಅಲ್ಲಿ 16 ಲಕ್ಷ ಹಿಂದೂಗಳನ್ನು ಕೊಲ್ಲಲಾಗಿದೆ. ಭಾರತದಲ್ಲಿ ಹಿಂದೂಗಳ ಪರಿಸ್ಥಿತಿ ಬಾಂಗ್ಲಾದೇಶದಂತಾಗದಂತೆ ಹಿಂದೂಗಳು ಎಚ್ಚರಗೊಂಡು ತಮ್ಮನ್ನು ತಾವು ಸಂಘಟಿತರಾಗುವುದು ಅಗತ್ಯವಾಗಿದೆ. ಹಿಂದೂಗಳು ರಾಜಕೀಯ ನಾಯಕರನ್ನು ಅವಲಂಬಿಸದೆ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಸಿದ್ಧರಾಗಿರಬೇಕು. ಜಾತ್ಯತೀತರು ಮತ್ತು ಮತಾಂಧರು ಸನಾತನ ಧರ್ಮವನ್ನು ನಾಶಮಾಡಲು ಪ್ರಯತ್ನಿಸುತ್ತಿದ್ದಾರೆ. ದೇಶದಲ್ಲಿ ಮುಸ್ಲಿಮರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ, ಆದರೆ ಹಿಂದೂಗಳು ಅಲ್ಪಸಂಖ್ಯಾತರಾಗುತ್ತಿದ್ದಾರೆ. ಆದ್ದರಿಂದ, ಮುಂದಿನ 10 ವರ್ಷಗಳಲ್ಲಿ ಹಿಂದೂಗಳು ಜಾಗೃತರಾಗಿ ಸನಾತನ ಧರ್ಮಕ್ಕಾಗಿ ಹೋರಾಡಲು ಸಿದ್ಧರಾಗದೇ ಇದ್ದಲ್ಲಿ ಭಾರತವು ಇಸ್ಲಾಮೀಕರಣಗೊಳ್ಳಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ,” ಎಂದು ಹೇಳಿದರು.
ಸಾಧುಗಳು ಹಿಂದೂಗಳಲ್ಲಿ ‘ನಮ್ಮೊಂದಿಗೆ ಯಾರಾದರೂ ಇದ್ದಾರೆ’ ಎಂಬ ನಂಬಿಕೆಯನ್ನು ಮೂಡಿಸಬೇಕು ! – ಆಚಾರ್ಯ ರಮಾಕಾಂತ ಗೋಸ್ವಾಮಿ
ಆಚಾರ್ಯ ರಮಾಕಾಂತ ಗೋಸ್ವಾಮಿ ಇವರು ಮಾತನಾಡಿ, “ಯೋಗಿ ಆದಿತ್ಯನಾಥ ಸನಾತನ ಧರ್ಮ ಮತ್ತು ತೀರ್ಥಕ್ಷೇತ್ರಗಳನ್ನು ರಕ್ಷಿಸುತ್ತಿದ್ದಾರೆ.” ಅದೇ ರೀತಿ, ಎಲ್ಲಾ ಅಖಾಡಗಳಲ್ಲಿರುವ ಸಂತರು ಸಹ ಅದೇ ರೀತಿ ಮಾಡಬೇಕು. ಹಿಂದೂ ರಾಷ್ಟ್ರ ಸ್ಥಾಪನೆಯಲ್ಲಿ ಯಾವ ಅಖಾಡಗಳು ಎಷ್ಟು ಕೊಡುಗೆ ನೀಡಿವೆ ? ಈ ಅಖಾಡಗಳಲ್ಲಿ ಸಾಧುಗಳು ಹಿಂದೂ ರಾಷ್ಟ್ರದ ಸ್ಥಾಪನೆಗಗಾಇ ಯಾವ ಕಾರ್ಯ ಮಾಡುತ್ತಿದ್ದಾರೆಂದು ನೋಡಬೇಕು ಮತ್ತು ಇಷ್ಟೊಂದು ನಾಗಾ ಸಾಧುಗಳಿದ್ದರೆ, ನಮ್ಮೊಂದಿಗೆ ಯಾರಾದರೂ ಇದ್ದಾರೆ ಎಂಬ ನಂಬಿಕೆಯನ್ನು ಹಿಂದೂಗಳಲ್ಲಿ ಮೂಡಿಸಬೇಕು. ಇದಕ್ಕಾಗಿ, ಈ ವಿಷಯವನ್ನು ಪ್ರಚಾರ ಮಾಡಬೇಕು.” ಎಂದು ಹೇಳಿದರು.
ಇತರ ಸಂತ-ಮಹಂತರಿಂದ ಮಾರ್ಗದರ್ಶನ…
ಪ.ಪೂ. ಬಾಲಕೃಷ್ಣ ಮಹಾರಾಜ್ ಇವರು ಮಾತನಾಡುತ್ತಾ, “ಶ್ರೀ ಕೃಷ್ಣನ ಜನ್ಮಭೂಮಿ ಹಿಂದೂಗಳಿಗೆ ಸೇರಿದ್ದು, ಅದನ್ನು ಹಿಂದೂಗಳಾಗಿ ಉಳಿಸಿಕೊಳ್ಳಲು ಹಿಂದೂಗಳು ಹೋರಾಟ ಮಾಡುವುದು ಆವಶ್ಯಕವಾಗಿದೆ.” ಇದರಲ್ಲಿ ಹಿಂದುತ್ವನಿಷ್ಠರು ಮತ್ತು ಸನಾತನಿ ಹಿಂದೂಗಳು ಇದರಲ್ಲಿ ಭಾಗವಹಿಸಬೇಕು’, ಎಂದು ಹೇಳಿದರು. ಪ.ಪೂ. ಬಾಬಾಜಿ ಕರ್ಮಯೋಗಿ ಇವರು ಮಾತನಾಡುತ್ತಾ, “ಹಿಂದೂಗಳು ತನು, ಮನ ಮತ್ತು ಧನವನ್ನು ತ್ಯಾಗ ಮಾಡುವ ಮೂಲಕ ಶ್ರೀ ಕೃಷ್ಣನ ಜನ್ಮಭೂಮಿಯ ಮುಕ್ತಿಗಾಗಿ ಶ್ರಮಿಸಬೇಕು.” ಎಂದು ಹೇಳಿದರು. ಯೋಗಿ ಸ್ವಾಮಿ ಗಗನಗಿರಿ ಮಹಾರಾಜ್ ಇವರು ಮಾತನಾಡುತ್ತಾ, “ಹಿಂದೂಗಳ ಗ್ರಾಮಗಳು ಸುರಕ್ಷಿತವಾಗಿ ಉಳಿದಿಲ್ಲ. ಗೋ ರಕ್ಷಣೆ ಮಾಡಬೇಕು.” ಎಂದು ಹೇಳಿದರು.
ಹಿಂದೂಗಳು ಸಂಘಟಿತರಾಗಿ ಸನಾತನ ಧರ್ಮವನ್ನು ರಕ್ಷಿಸಲು ಬದ್ಧರಾಗಿರಬೇಕು !
ಮಹಾಮಂಡಲೇಶ್ವರ ಯತಿ ನರಸಿಂಹಾನಂದ ಸರಸ್ವತಿ ಮಹಾರಾಜ್ ಇವರು, “ಧರ್ಮ ಸಂಸತ್ತಿನ” ವ್ಯಾಸಪೀಠದಿಂದ ರಾಜಕೀಯ ಚರ್ಚೆ ಮಾಡಿ ಅದನ್ನು ರಾಜಕೀಯ ಆಖಾಡಾ ಮಾಡಬಾರದು’, ಎಂದು ಹೇಳಿದರು. ಕಳೆದ ಹಲವಾರು ವರ್ಷಗಳಿಂದ, ಅನೇಕ ಸಂತರು, ಮಹಂತರು ಮತ್ತು ಭಕ್ತರು ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಹೆಸರುಗಳನ್ನು ಬಳಸುತ್ತಿದ್ದಾರೆ. ಅವರಿಂದಾಗಿಯೇ ಇದು ಸಂಭವಿಸಿವೆ ಎಂದು ಹೇಳಲಾಗುತ್ತದೆ; ಆದರೆ ಇವರಿಬ್ಬರೂ ಇಲ್ಲದಿರುವಾಗ ಹಿಂದೂಗಳ ಸ್ಥಿತಿ ಏನಾಗುತ್ತದೆ ? ಹಿಂದೂಗಳನ್ನು ರಕ್ಷಿಸುವ ಮತ್ತು ಆಶ್ರಯ ನೀಡುವ ಬೇರೆ ಯಾವುದೇ ದೇಶವಿಲ್ಲದ ಕಾರಣ, ಅವರು ಹಿಂದೂ ಮಹಾಸಾಗರಕ್ಕೆ ಹೋಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಬೇಕಾಗಬಹುದು. ಇದಕ್ಕಾಗಿ, ಹಿಂದೂಗಳು, ಹಿಂದುತ್ವನಿಷ್ಠ ಸಂಘಟನೆಗಳು ಮತ್ತು ಎಲ್ಲಾ ಅಖಾಡಾಗಳ ಸಂತರು, ಮಹಂತರು, ಸಾಧಕರು ಮತ್ತು ಭಕ್ತರು ಒಟ್ಟಾಗಿ ಸನಾತನ ಹಿಂದೂ ಧರ್ಮವನ್ನು ರಕ್ಷಿಸಲು ಬದ್ಧರಾಗಬೇಕು.” ಎಂದು ಹೇಳಿದರು.
ಧರ್ಮ ಸಂಸತ್ತಿನಲ್ಲಿನ ಠರಾವು…
1. ಶ್ರೀ ಕೃಷ್ಣ ಜನ್ಮಭೂಮಿಯ ಮುಕ್ತಿಗಾಗಿ ಜನಜಾಗೃತಿ ಅಭಿಯಾನವನ್ನು ನಡೆಸುವ ಮೂಲಕ ಹಿಂದೂಗಳಲ್ಲಿ ಚೇತನಾವನ್ನು ಜಾಗೃತಗೊಳಿಸುವುದು.
2. ‘ವ್ಯಾಸಪೀಠ ಅಣೇಕ ಹಿಂದೂ ಏಕ’ ಎಂಬ ತತ್ವದ ಆಧಾರದ ಮೇಲೆ ನ್ಯಾಯಾಲಯದಲ್ಲಿ ವಿದ್ವಾಂಸರ ಸಂಖ್ಯೆಯನ್ನು ನಿರ್ಧರಿಸಬೇಕು.
3. ಸರಕಾರ ರಸ್ತೆಯುದ್ದಕ್ಕೂ ಇರುವ ಮಸೀದಿಗಳು ಮತ್ತು ಕಬ್ರಗಳ ಅತಿಕ್ರಮಣಗಳನ್ನು ತೆರವುಗೊಳಿಸಬೇಕು.
4. ಸನಾತನದ ಧ್ವನಿ ಎತ್ತಲು, ಎಲ್ಲಾ ಹಿಂದೂಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಬೇಕು.
5. ಭಾರತದಾದ್ಯಂತ ಗೋಹತ್ಯೆ ಕಾನೂನುಗಳನ್ನು ಜಾರಿಗೆ ತರಬೇಕು ಮತ್ತು ಗೋವಿಗೆ ‘ರಾಷ್ಟ್ರಮಾತೆ’ ಸ್ಥಾನಮಾನ ನೀಡಬೇಕು.
6. ಇಸ್ಲಾಮಿಕ್ ವಕ್ಫ್ ಬೋರ್ಡ್‌ಅನ್ನು ಸಂಪೂರ್ಣವಾಗಿ ರದ್ದುಗೊಳಿಸಬೇಕು.