ತ್ರಿವೇಣಿ ಸಂಗಮದಲ್ಲಿ ಇಲ್ಲಿಯವರೆಗೆ 10 ಕೋಟಿಗೂ ಹೆಚ್ಚು ಭಕ್ತರಿಂದ ಸ್ನಾನ !

ಪ್ರಯಾಗರಾಜ ಕುಂಭಮೇಳ 2025

ಪ್ರಯಾಗರಾಜ್ – ಇಲ್ಲಿಯ ಗಂಗಾ, ಯಮುನಾ ಮತ್ತು ಸರಸ್ವತಿಯ ಈ ಪವಿತ್ರ ತ್ರಿವೇಣಿ ಸಂಗಮದಲ್ಲಿ ಇದುವರೆಗೆ, ಅಂದರೆ ಜನವರಿ 12 ರಿಂದ 24 ರವರೆಗೆ 10 ಕೋಟಿ 21 ಲಕ್ಷಕ್ಕೂ ಹೆಚ್ಚು ಭಕ್ತರು ಸ್ನಾನ ಮಾಡಿದ್ದಾರೆ ಎಂದು ಆಡಳಿತವು ತಿಳಿಸಿದೆ. ತ್ರಿವೇಣಿ ಸಂಗಮದಲ್ಲಿ ಪ್ರತಿದಿನ ಕನಿಷ್ಠ 60 ಲಕ್ಷ ಜನರು ಸ್ನಾನ ಮಾಡುತ್ತಿದ್ದಾರೆ ಎಂಬ ಮಾಹಿತಿಯನ್ನು ಆಡಳಿತವು ನೀಡಿದೆ.