ಮಹಾಕುಂಭ ಕ್ಷೇತ್ರದಲ್ಲಿ ಹಿಂದೂ ರಾಷ್ಟ್ರ ಘೋಷಣೆ |
ಅಖಿಲ ವಿಶ್ವದಲ್ಲಿ ಸ್ಥಾಪನೆಯಾಗಲಿರುವ ಕಲ್ಯಾಣಕಾರಿ ಹಿಂದು ರಾಷ್ಟ್ರ ||
ಬನ್ನಿ, ಮಹಾಕುಂಭಕ್ಷೇತ್ರದಲ್ಲಿ ಹಿಂದೂ ರಾಷ್ಟ್ರದ ದೈವಿಕ ಪಾದಯಾತ್ರೆಯನ್ನು ಅನುಭವಿಸಿ !

1. ಪಾದಯಾತ್ರೆಯಲ್ಲಿ, ಹಿಂದೂ ರಾಷ್ಟ್ರದ ಸ್ಫೂರ್ತಿಸ್ಥಾನ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ ಘೋಷಣೆಯೊಂದಿಗೆ ಹಾಗೂ ಅವರ ಬಗ್ಗೆ ಕೃತಜ್ಞತೆ ಸಲ್ಲಿಸಲಾಯಿತು.
2. ಶ್ರೀ ಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀ ಚಿತ್‌ಶಕ್ತಿ (ಸೌ.) ಅಂಜಲಿ ಗಾಡಗಿಳ ಅವರು ಹೂವುಗಳಿಂದ ಅಲಂಕರಿಸಲ್ಪಟ್ಟ ರಥದಲ್ಲಿ ವಿರಾಜಮಾನರಾಗಿದ್ದರು. ರಥದ ಮುಂದೆ 4 ಕುದುರೆಗಳ ಚಿತ್ರವಿತ್ತು. ರಥದ ಮೇಲ್ಭಾಗದಲ್ಲಿ ಸಾತ್ತ್ವಿಕ ಹೂವುಗಳಿಂದ ಅಲಂಕರಿಸಲ್ಪಟ್ಟ ಒಂದು ಛತ್ರಿ ಇತ್ತು. ಅದರ ಮೇಲೆ ಹನುಮಂತನ ಚಿತ್ರವನ್ನು ಹಾಕಲಾಗಿತ್ತು.
3. ರಸ್ತೆಯ ಎರಡೂ ಬದಿಗಳಲ್ಲಿ ಅನೇಕ ಸಂತರು ಮತ್ತು ಭಕ್ತರು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ಭಾವಚಿತ್ರ ಹಾಗೂ ಶ್ರೀ ಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀ ಚಿತ್‌ಶಕ್ತಿ (ಸೌ.) ಅಂಜಲಿ ಗಾಡಗಿಳ ಇವರಿಗೆ ಕೈಮುಗಿದು ಭಾಪೂರ್ಣ ನಮಸ್ಕಾರ ಮಾಡುತ್ತಿದ್ದರು. ರಥದಲ್ಲಿ ವಿರಾಜಮಾನರಾಗಿದ್ದ ಇಬ್ಬರೂ ಸಂತರು ಎಲ್ಲರಿಗೂ ಭಾವಪೂರ್ಣ ನಮಸ್ಕಾರ ಮಾಡುತ್ತಿದ್ದರು.
4. ರಥದ ಮೇಲಿರುವ ಶ್ರೀ ಹನುಮಂತನ ಭಾವಚಿತ್ರ ಮತ್ತು ಅದರ ಮೇಲಿನ ಧ್ವಜ ಪಾದಯಾತ್ರೆಯ ಪ್ರಮುಖ ಆಕರ್ಷಣೆಯಾಗಿತ್ತು. ರಥದ ಮೇಲಿನ ಧ್ವಜವು ಬಾಗಿತ್ತು ಅದನ್ನು ನೋಡಿ ಶ್ರೀ ಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀ ಚಿತ್‌ಶಕ್ತಿ (ಸೌ.) ಅಂಜಲಿ ಗಾಡಗಿಳ ಅವರನ್ನು ಆಶೀರ್ವದಿಸುತ್ತಿರುವಂತೆ ಕಾಣುತ್ತಿತ್ತು !
5. ಪಾದಯಾತ್ರೆಯ ಮಾರ್ಗದುದ್ದಕ್ಕೂ ವಿವಿಧ ಅಖಾಡಗಳನ್ನು ಸಮೀಪಿಸುತ್ತಿದ್ದಂತೆ, ಅಲ್ಲಿನ ಸಂತರನ್ನು ಘೋಷಿಸಿ ನಮಸ್ಕಾರ ಸಲ್ಲಿಸಲಾಗುತ್ತಿತ್ತು.
6. ದಾರಿಯುದ್ದಕ್ಕೂ, ಅನೇಕ ಸಾಧು-ಸಂತರು, ನಾಗಾ ಸಾಧುಗಳು ಪಾದಯಾತ್ರೆಯಲ್ಲಿ ಭಾಗವಹಿಸುವವರಿಗೆ ಕೈ ಎತ್ತಿ ಆಶೀರ್ವದಿಸಿದರು.
7. ಹಿಂದೂಗಳ ರಕ್ಷಣೆಗಾಗಿ ಹೋರಾಡುವ ಧರ್ಮೇಶ್ ಫೌಂಡೆಶನ್‌ನ ಅಧಿಕಾರಿಗಳು ಸ್ವಯಂಪ್ರೇರಿತವಾಗಿ ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು.
8. ದಾರಿಯುದ್ದಕ್ಕೂ ಕೆಲವು ಸಂತರು ಮತ್ತು ಧರ್ಮಪ್ರೇಮಿಗಳು ಸ್ವಲ್ಪ ಸಮಯದವರೆಗೆ ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು.
9. ಸಂಚಾರಕ್ಕೆ ಯಾವುದೇ ಅಡಚಣೆಯಾಗದಂತೆ ಪಾದಯಾತ್ರೆಯನ್ನು ಆರಂಭದಿಂದ ಕೊನೆಯವರೆಗೆ ಹಗ್ಗಗಳ ಮೂಲಕ ನಿಯಂತ್ರಿಸಲಾಯಿತು.
10. ಮಾರ್ಗದುದ್ದಕ್ಕೂ ನೂರಾರು ನಾಗರಿಕರು ಪಾದಯಾತ್ರೆಯ ಛಾಯಾಚಿತ್ರಗಳನ್ನು ಹಾಗೂ ವಿಡಿಯೋಗಳನ್ನು ತೆಗೆದರು. ಕೆಲವರು ಸೆಲ್ಫಿ ತೆಗೆದುಕೊಂಡರು (ವಿಶೇಷ ಕಾರ್ಯಕ್ರಮದೊಂದಿಗೆ ತಮ್ಮ ಚಿತ್ರವನ್ನು ತೆಗೆಸಿಕೊಂಡರು).
11. ಪಾದಯಾತ್ರೆಯ ಕೊನೆಯಲ್ಲಿ, ಕುಂಭಮೇಳದಲ್ಲಿ ದೇವರುಗಳು ಮತ್ತು ಋಷಿಗಳ ಪಾದಗಳಿಗೆ ನಮಸ್ಕರಿಸಿ ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಸಾಮೂಹಿಕ ಪ್ರಾರ್ಥನೆ ಮಾಡಲಾಯಿತು.
12. ಈ ಸಮಯದಲ್ಲಿ, ಶ್ರೀ ಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀ ಚಿತ್‌ಶಕ್ತಿ (ಸೌ.) ಅಂಜಲಿ ಗಾಡಗಿಳ ಅವರ ರಥದ ಮುಂದೆ, ಸಾಧಕಿಯರು ರಾಮಧುನ್ ನ ಭಾವಪೂರ್ಣ ತಾಳ ನುಡಿಸುತ್ತಿದ್ದರು.
13. ರಥದ ಮಾಲೀಕರು ಈ ರಥಕ್ಕೆ ‘ಪಾಂಡವರು’ ಎಂದು ಹೆಸರಿಸಿದ್ದರು, ಮತ್ತು ರಥದಲ್ಲಿ ಗದೆಗಳು ಇತ್ಯಾದಿಗಳ ಚಿತ್ರಗಳಿಂದ ಅಲಂಕರಿಸಿದ್ದರು.
ಹಿಂದೂ ರಾಷ್ಟ್ರದ ಸ್ಥಾಪನೆಯ ಸಂಕಲ್ಪ ಶೀಘ್ರದಲ್ಲೇ ಫಲ ನೀಡಲಿದೆ ! – ಸದ್ಗುರು ಡಾ. ಚಾರುದತ್ತ ಪಿಂಗಳೆ

ಈ ಸಂದರ್ಭದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕ ಸದ್ಗುರು ಡಾ. ಚಾರುದತ್ತ ಪಿಂಗಳೆ ಅವರು ಮಾತನಾಡಿ, ಹಿಂದೂ ಧರ್ಮವು ‘ವಸುಧೈವ ಕುಟುಂಬಕಂ’ ಎಂದು ಬೋಧಿಸುತ್ತದೆ. ಅಂತಹ ಧರ್ಮವು ಸಂವಿಧಾನದ ಮೂಲಕ ಅಧಿಕೃತ ರಕ್ಷಣೆ ಪಡೆಯಬೇಕಾದರೆ, ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಿಸಬೇಕು. ಪ್ರಪಂಚದ ಕಲ್ಯಾಣಕ್ಕಾಗಿ ಕಾರ್ಯ ಮಾಡುವ ಹಿಂದೂ ಸಂಸ್ಕೃತಿಯನ್ನು ಜೀವಂತವಾಗಿಡುವುದು ಈ ಬೇಡಿಕೆಯಾಗಿದೆ. ಇಡೀ ಜಗತ್ತು ಮಹಾಕುಂಭ ಮೇಳದ ಮೇಲೆ ಗಮನ ಹರಿಸಿದೆ. ಆದ್ದರಿಂದ, ಈ ಪಾದಯಾತ್ರೆಯ ಮೂಲಕ, ಹಿಂದೂ ಸಂತರು, ಮಹಂತರು ಮತ್ತು ಹಿಂದೂ ಸಮುದಾಯಗಳ ದೇಶ ಮತ್ತು ವಿದೇಶಗಳ ಮನದಲ್ಲಿರುವ ಹಿಂದೂ ರಾಷ್ಟ್ರದ ಬೇಡಿಕೆಯನ್ನು ಸರಕಾರಕ್ಕೆ ತಿಳಿಸಲು ನಾವು ಪ್ರಯತ್ನಿಸುತ್ತಿದ್ದೇವೆ. ಪ್ರಯಾಗರಾಜ್‌ನಂತಹ ಧಾರ್ಮಿಕ ನಗರದಲ್ಲಿ ಕುಂಭಮೇಳದಂತಹ ಮಹತ್ವದ ಮೇಳದಲ್ಲಿ ಸಂತರ ಸಮ್ಮುಖದಲ್ಲಿ ನಡೆಯುವ ಹಿಂದೂ ರಾಷ್ಟ್ರ ಸ್ಥಾಪನೆಯ ಕಾರ್ಯವು ಶೀಘ್ರದಲ್ಲೇ ನನಸಾಗುತ್ತದೆ ಎಂದು ನಾವು ನಂಬುತ್ತೇವೆ.” ಎಂದು ಹೇಳಿದರು.





ಗೌರವಾನ್ವಿತ ಅತಿಥಿಗಳು !
1. ಶ್ರೀ ಶ್ರೀ ೧೦೦೮ ಮಹಾಮಂಡಲೇಶ್ವರ ರಾಹುಲದಾಸಜಿ ಮಹಾರಾಜ, ಭಾಗ್ಯನಗರ, ತೆಲಂಗಾಣ
2. ಶ್ರೀ ಶ್ರೀ ೧೦೦೮ ಮಹಂತ ನಾರಾಯಣದಾಸಜಿ ಮಹಾರಾಜ, ಪುಣೆ
3. ಶ್ರೀ ಶ್ರೀ ೧೦೦೮ ಮಹಾಮಂಡಲೇಶ್ವರ ರಾಮದಾಸಜಿ ಕಾಠಿಯಾ ಮಹಾರಾಜ, ಇಂದೋರ
4. ಸ್ವಾಮಿ ಭರತಾನಂದ ಸರಸ್ವತಿ ಮಹಾರಾಜ, ಪ್ರಧಾನ ಕಾರ್ಯದರ್ಶಿ, ಅಖಿಲ ಭಾರತ ಸಂತರ ಸಮಿತಿ, ಮಹಾರಾಷ್ಟ್ರ ರಾಜ್ಯ
5. ಜಾಗ್ರತ ಆಚಾರ್ಯ, ಶಿವಪುರಿ, ಮಧ್ಯಪ್ರದೇಶ
6. ಶ್ರೀ. ಬಲವೀರ ಮಿಲ್ಖಾ, ಪಂಜಾಬ
7. ಶ್ರೀ. ಬ್ರಿಜಭೂಷಣ ಸೈನಿ, ರಾಷ್ಟ್ರೀಯ ಅಧ್ಯಕ್ಷರು, ದೇವಸೇನಾ
ಗಮನ ಸೆಳೆಗ ಘೋಷಣಾ ಫಲಕಗಳು !
ಈ ಪಾದಯಾತ್ರೆಯಲ್ಲಿ ‘ಸನಾತನ ಧರ್ಮ ಕಿ ಜಯ ಹೊ, ಭಾರತ ಹಿಂದೂ ರಾಷ್ಟ್ರ ಹೊ’; ಸುರಕ್ಷಿತ ಹಿಂದೂ ಬಲಶಾಲಿ ದೇಶ, ಯಹೀ ಹಿಂದೂ ರಾಷ್ಟ್ರ ಕಾ ಉದ್ದೇಶ; 100 ಕರೊಡ ಹಿಂದೂವೊಂ ಕೀ ಪುಕಾರ, ಹಿಂದೂ ರಾಷ್ಟ್ರ ಹಮಾರಾ ಅಧಿಕಾರ; ಕರನೆ ಮಾ-ಬಹನೊ ಕಾ ಸಂರಕ್ಷಣ, ಕರೊ ಹಿಂದೂ ರಾಷ್ಟ್ರ ಕಾ ಸಮರ್ಥನ; ಮಂದಿರೋ ಕಾ ಕರನೆ ಉತ್ಥಾನ, ಕರೆ ಹಿಂದೂ ರಾಷ್ಟ್ರ ಕಾ ನಿರ್ಮಾಣ; ಹರ ಘರ ಭಗವೆ ಕಾ ಜಯಗಾನ, ಹಿಂದೂ ರಾಷ್ಟ್ರ ಬನೆ ಹಿಂದೂಸ್ಥಾನ; ಗೋವು, ಗಂಗೆ ಔರ ಗೀತಾ ಕಾ ಹೊ ಸಮ್ಮಾನ, ಹಿಂದೂ ರಾಷ್ಟ್ರ ಕಾ ಕರೆ ನಿರ್ಮಾಣ; ಸೆಕ್ಯುಲರಿಸಂ ಕಾ ಷಡಯಂತ್ರ; ಅಂತ ಕರೆಗಾ ಹಿಂದೂ ರಾಷ್ಟ್ರ ಕಾ ಮಂತ್ರ; ಧರ್ಮ ನಿರಪೇಕ್ಷತಾ ಕಾ ಢೋಂಗ್ ಛೊಡೊ, ಹಿಂದೂ ರಾಷ್ಟ್ರ ಹೆತು ಹಿಂದೂ ಜೊಡೊ; ಹೀಗೆ ಹಾಕಲಾಗಿದ್ದ ವಿವಿಧ ಫಲಕಗಳು ಗಮನ ಸೆಳೆಯುತ್ತಿದ್ದವು.