ಹಿಂದೂ ಸಂಘಟನೆಗಳ ವಿರೋಧದ ಪರಿಣಾಮ
ಚೆನ್ನೈ (ತಮಿಳುನಾಡು) – ತಮಿಳುನಾಡಿನ ತಿರುಪರಂಕುಂದ್ರಂ ಜಿಲ್ಲೆಯ ಪವಿತ್ರ ಮಧುರೈ ಬೆಟ್ಟದಲ್ಲಿ ಮುಸ್ಲಿಮರು ಪ್ರಾಣಿ ಬಲಿ ನೀಡಲು ಯತ್ನಿಸಿದ್ದನ್ನು ಪೊಲೀಸರು ವಿಫಲಗೊಳಿಸಿದ್ದಾರೆ. ಹಿಂದೂ ಸಂಘಟನೆಗಳ ದೂರಿನ ಮೇರೆಗೆ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ. ನಿಷೇಧಿತ ಜಿಹಾದಿ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಜಕೀಯ ವಿಭಾಗವಾದ ಸೋಶಿಯಲ್ ಡೆಮಾಕ್ರಟಿಕ್ ಫ್ರಂಟ್ ಆಫ್ ಇಂಡಿಯಾದ ಕಾರ್ಯಕರ್ತರು ಮಧುರೈ ಬೆಟ್ಟದ ಮೇಲೆ ಪ್ರಾಣಿ ಬಲಿ ನೀಡುವವರಿದ್ದರು. (ಈಗ ಈ ರಾಜಕೀಯ ಪಕ್ಷವನ್ನು ಕೂಡ ನಿಷೇಧಿಸುವುದು ಅಗತ್ಯವಾಗಿದೆ ಎಂದು ಈ ಘಟನೆಯಿಂದ ಗಮನಕ್ಕೆ ಬರುತ್ತದೆ ! – ಸಂಪಾದಕರು) ಈ ಬೆಟ್ಟದ ಮೇಲೆ ಹಿಂದೂ ಮುರುಗನ್ ದೇವಸ್ಥಾನವಿದೆ ಮತ್ತು ಅದೇ ಪ್ರದೇಶದಲ್ಲಿ ಸಿಕಂದರ ಬಾದಶಹಾ (ರಾಜ) ದರ್ಗಾ ಕೂಡ ಇದೆ. ಅಲ್ಲಿಯೂ ಬಲಿ ನೀಡುವವರಿದ್ದರು.
1. ಹಿಂದೂ ಮಕ್ಕಲ ಕಚ್ಚಿ ಸಂಘಟನೆಯ ಮಧುರೈ ಜಿಲ್ಲಾಧ್ಯಕ್ಷ ಸೋಲಾಯಿಕಣ್ಣನ್ ಅವರು ಈ ಬಗ್ಗೆ ಪೊಲೀಸ್ ಆಯುಕ್ತ ಲೋಗನಾಥನ್ ಅವರಿಗೆ ಮಾಹಿತಿ ನೀಡಿದ್ದರು ಮತ್ತು ಬಲಿ ನೀಡುವುದನ್ನು ನಿಲ್ಲಿಸುವಂತೆ ಲಿಖಿತ ಬೇಡಿಕೆಯನ್ನು ಮಾಡಿದ್ದರು. ಇದಾದ ನಂತರ, ಪೊಲೀಸರು ತಕ್ಷಣ ಕ್ರಮ ಕೈಗೊಂಡು ಮುಸ್ಲಿಮರು ಮೇಕೆ ಮತ್ತು ಕೋಳಿಗಳನ್ನು ಬಲಿ ನೀಡುವುದನ್ನು ತಡೆದರು. ಪೊಲೀಸರು, ಈ ದರ್ಗಾದಲ್ಲಿ ನಮಾಜ ಅಥವಾ ಪ್ರಾರ್ಥನೆ ಮಾತ್ರ ಸಲ್ಲಿಸಬಹುದು ಯಾವುದೇ ಬಲಿ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
2. ಕಳೆದ ವಾರ, ಇಸ್ಲಾಮಿ ಸಂಘಟನೆಗಳೊಂದಿಗೆ ಸಂಬಂಧ ಹೊಂದಿರುವವರು ಕಂದಾಯ ಅಧಿಕಾರಿಗಳು ಮತ್ತು ಜಿಲ್ಲಾಡಳಿತವನ್ನು ಭೇಟಿಯಾದರು. ಅವರು ಸಿಕಂದರ ಬಾದಶಷಾ ದರ್ಗಾದಲ್ಲಿ ಬಲಿ (ಕುರ್ಬಾನಿ)ಗಾಗಿ ಅನುಮತಿ ಕೋರಿದರು; ಆದರೆ ಮಧುರೈ ಜಿಲ್ಲಾಡಳಿತ ದರ್ಗಾದಲ್ಲಿ ನಮಾಜಗೆ ಮಾತ್ರ ಅವಕಾಶ ನೀಡಿತು.
3. ಹಿಂದೂಗಳ ಪ್ರಕಾರ, ಮಧುರೈ ಬೆಟ್ಟದ ಮೇಲಿನ ದೇವಸ್ಥಾನವು ಮುರುಗನ್ ದೇವರ ಆರು ಪವಿತ್ರ ನಿವಾಸಗಳಲ್ಲಿ ಒಂದಾಗಿದೆ. ಮುಸ್ಲಿಮರು ಈ ದೇವಸ್ಥಾನದ ವಿಡಂಬನೆ ಮಾಡಲು ಬಯಸುತ್ತಿದ್ದಾರೆ ಹಾಗೂ ಇಸ್ಲಾಮಿಕ್ ರೂಪವನ್ನು ನೀಡಲು ಬಯಸುತ್ತಿದ್ದಾರೆ ಎಂದು ಹೇಳಿದ್ದಾರೆ.
4. ಭಾಜಪ ಪ್ರದೇಶಾಧ್ಯಕ್ಷ ಕೆ. ಅಣ್ಣಾಮಲೈ ಅವರು ಇನ್‌ಸ್ಟಾಗ್ರಾಮ್‌ನಲ್ಲಿ, ಕೆಲವರು ತಿರುಪಾರಂಕುಂದ್ರಂ ಬೆಟ್ಟವನ್ನು ‘ಸಿಕಂದರ ಮಲೈ (ಬೆಟ್ಟ)’ ಎಂದು ಕರೆಯುತ್ತಿದ್ದಾರೆ’, ಎಂದು ಬರೆದಿದ್ದಾರೆ.
ಸಂಪಾದಕೀಯ ನಿಲುವುತಮಿಳುನಾಡಿನ ಪೊಲೀಸರು ಹಿಂದೂಗಳಿಗಾಗಿ ಇಷ್ಟೊಂದು ತತ್ಪರರಾಗಿದ್ದಾರೆ ಎಂಬುದು ಶ್ಲಾಘನೀಯವಾಗಿದೆ ಎಂದು ಹೇಳಬೇಕಾಗಬಹುದು ! |
|

ಚೆನ್ನೈ (ತಮಿಳುನಾಡು) – ಕಳೆದ ಕೆಲವು ತಿಂಗಳುಗಳಿಂದ, ಪವಿತ್ರ ತಿರುಪರಣಕುಂದ್ರಂ ಬೆಟ್ಟವನ್ನು ಇಸ್ಲಾಮಿಕ್ ‘ಸಿಕಂದರ್ ಬೆಟ್ಟ’ವಾಗಿ ಪರಿವರ್ತಿಸಲು ಬಹಿರಂಗವಾಗಿ ಮತ್ತು ರಹಸ್ಯವಾಗಿ ಪ್ರಯತ್ನಗಳು ನಡೆಯುತ್ತಿವೆ. ಮುಸ್ಲಿಮರು ಬೆಟ್ಟದ ಮೇಲೆ ಒಂದು ದರ್ಗಾವನ್ನು ನಿರ್ಮಿಸಿದ್ದಾರೆ. ದರ್ಗಾದ ವಾಸ್ತುಶಿಲ್ಪ ಮತ್ತು ಸ್ತಂಭಗಳು ಅದು ಹಿಂದೂ ದೇವಾಲಯವಾಗಿತ್ತು ಮತ್ತು ಈಗ ಅದನ್ನು ಅತಿಕ್ರಮಿಸಲಾಗಿದೆ ಎಂದು ಸ್ಪಷ್ಟವಾಗಿ ತೋರಿಸುತ್ತವೆ. ರಾಜ್ಯದ ರಾಮನಾಥಪುರಂ ಜಿಲ್ಲೆಯ ಸಂಸದ ನವಾಜ್ ಕಾನಿ ಇತ್ತೀಚೆಗೆ ಆ ಸ್ಥಳಕ್ಕೆ ಭೇಟಿ ನೀಡಿ ಬೆಟ್ಟದ ಮೇಲೆ ಇತರರೊಂದಿಗೆ ಮಾಂಸಾಹಾರಿ ಬಿರಿಯಾನಿ ತಿಂದರು.

ಬೆಟ್ಟವು ಹಿಂದೂಗಳಿಗೆ ಸೇರಿದ್ದು ಎಂಬ ನ್ಯಾಯಾಲಯದ ಆದೇಶದ ಉಲ್ಲಂಘನೆಗೆ ಸರಕಾರದಿಂದಲೂ ಬೆಂಬಲ

‘ಈ ಬೆಟ್ಟವು ಹಿಂದೂ ದೇವಾಲಯಕ್ಕೆ ಸೇರಿದೆ’ ಎಂದು ನ್ಯಾಯಾಲಯದ ಆದೇಶದ ಹೊರತಾಗಿಯೂ, ಅವರು ಈ ಪವಿತ್ರ ಸ್ಥಳವನ್ನು ಅತಿಕ್ರಮಿಸಿದ್ದಾರೆ ಮತ್ತು ಡಿಎಂಕೆ (ದ್ರಾವಿಡ ಮುನ್ನೇತ್ರ ಕಳಘಂ – ದ್ರಾವಿಡ ಪ್ರಗತಿ ಸಂಘ) ಸರಕಾರವೂ ಈ ಉಲ್ಲಂಘನೆಗೆ ಅವಕಾಶ ನೀಡಿದೆ. ತಮಿಳುನಾಡಿನ ಯಾವುದೇ ರಾಜಕಾರಣಿ ಈ ಬಗ್ಗೆ ಕಳವಳ ವ್ಯಕ್ತಪಡಿಸಿಲ್ಲ. ಫೆಬ್ರವರಿ 18 ರಂದು ಮುಸ್ಲಿಮರು ಈ ಸ್ಥಳದಲ್ಲಿ ದೊಡ್ಡ ಸಭೆಯನ್ನು ಆಯೋಜಿಸುತ್ತಿದ್ದಾರೆ.

ಹಿಂದೂ ಸಂಘಟನೆಗಳಿಂದ ವಿರೋಧ
ಭಾರತ್ ಹಿಂದೂ ಮುನ್ನಾನಿಯ ಸಂಸ್ಥಾಪಕ ಆರ್.ಡಿ. ಇವರು ಪ್ರಭು ಈ ಕೃತ್ಯವನ್ನು ಖಂಡಿಸಿದ್ದಾರೆ ಮತ್ತು ಈ ಘಟನೆಯನ್ನು ಎಲ್ಲಾ ಹಿಂದೂಗಳ ಗಮನಕ್ಕೆ ತರಲು ಪ್ರಯತ್ನಿಸುತ್ತಿದ್ದಾರೆ. ಹಿಂದೂ ಮುನ್ನಾನಿ, ರಾಷ್ಟ್ರೀಯ ಸ್ವಯಂಸೇವಕ ಸಂಘ ಮತ್ತು ಭಾಜಪ ಕೂಡ ಇದರ ವಿರುದ್ಧ ಧ್ವನಿ ಎತ್ತಿವೆ. ತಮಿಳುನಾಡಿನ ಭಾಜಪ ನಾಯಕ ಶ್ರೀ. ರಾಧಾಕೃಷ್ಣನ್ ಇವರು ತಮ್ಮ ಫೇಸ್‌ಬುಕ್ ಖಾತೆಯ ಮೂಲಕ ಖಂಡಿಸಿದ್ದಾರೆ.

ಸಂಪಾದಕೀಯ ನಿಲುವುಮುಸ್ಲಿಂ ಆಕ್ರಮಣಕಾರರು ಹಿಂದೂಗಳ ದೇವಾಲಯಗಳನ್ನು ಬಲವಂತವಾಗಿ ವಶಪಡಿಸಿಕೊಂಡು ಅಲ್ಲಿ ಮಸೀದಿಗಳನ್ನು ನಿರ್ಮಿಸಿದ ಇತಿಹಾಸ ಇರುವಾಗ ಅವರ ವಂಶಸ್ಥರು ವರ್ತಮಾನದಲ್ಲಿಯೂ ಸಹ ಭಿನ್ನವಾಗಿ ಏನನ್ನೂ ಮಾಡುತ್ತಿಲ್ಲ ಎಂಬ ಅಂಶ ಗಮನಕ್ಕೆ ಬರುತ್ತದೆ, ಕೇಂದ್ರ ಸರಕಾರವು ಕಾನೂನನ್ನು ಜಾರಿಗೆ ತರುವುದು ಅಗತ್ಯವಾಗಿದೆ ! |