RBI News Rules : ರಿಸರ್ವ್ ಬ್ಯಾಂಕಿನ ಹೊಸ ನಿಯಮಗಳ ಪ್ರಕಾರ 3 ರೀತಿಯ ಖಾತೆಗಳನ್ನು ಮುಚ್ಚಲಾಗುವುದು !

ಮುಂಬಯಿ – ದೇಶದಲ್ಲಿ ಹೆಚ್ಚುತ್ತಿರುವ ಬ್ಯಾಂಕ್ ವಂಚನೆಗಳ ಹಿನ್ನೆಲೆಯಲ್ಲಿ, ಬ್ಯಾಂಕಿಂಗ್ ವಹಿವಾಟುಗಳನ್ನು ಸುರಕ್ಷಿತಗೊಳಿಸಲು ಭಾರತೀಯ ರಿಸರ್ವ್ ಬ್ಯಾಂಕ್ ಜನವರಿ 1 ರಿಂದ ಕೆಲವು ರೀತಿಯ ಖಾತೆಗಳನ್ನು ಮುಚ್ಚಲು ನಿರ್ಧರಿಸಿದೆ. ಬ್ಯಾಂಕಿಂಗ್ ವ್ಯವಸ್ಥೆಯನ್ನು ಸುರಕ್ಷಿತ ಮತ್ತು ಉತ್ತಮಗೊಳಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಇದರಲ್ಲಿ 3 ರೀತಿಯ ಬ್ಯಾಂಕ್ ಖಾತೆಗಳನ್ನು ಮುಚ್ಚಲಾಗುತ್ತಿದೆ. ಇದರಲ್ಲಿ ನಿಷ್ಕ್ರಿಯ ಖಾತೆಗಳು, ಸಕ್ರೀಯ ಇಲ್ಲದಿರುವ ಮತ್ತು ಶೂನ್ಯ ಬ್ಯಾಲೆನ್ಸ್ ಖಾತೆಗಳು ಸೇರಿವೆ. ಗ್ರಾಹಕರನ್ನು ರಕ್ಷಿಸಲು ಮತ್ತು ಬ್ಯಾಂಕಿಂಗ್ ಕ್ಷೇತ್ರದ ಭದ್ರತೆಯನ್ನು ಕಾಪಾಡಿಕೊಳ್ಳಲು ಆರ್‌ಬಿಐ ಇಂತಹ ಖಾತೆಗಳನ್ನು ಮುಚ್ಚುವ ನಿರ್ಧಾರವನ್ನು ತೆಗೆದುಕೊಂಡಿದೆ.

ಯಾವ ಖಾತೆಗಳನ್ನು ಮುಚ್ಚಲಾಗುತ್ತಿದೆ?

1. ಎರಡು ವರ್ಷ ಅಥವಾ ಅದಕ್ಕಿಂತ ಹೆಚ್ಚು ಕಾಲ ಯಾವುದೇ ವಹಿವಾಟು ನಡೆಸದ ಖಾತೆಗಳನ್ನು ನಿಷ್ಕ್ರಿಯ ಖಾತೆಗಳೆಂದು ಪರಿಗಣಿಸಲಾಗುತ್ತದೆ. ಈ ಖಾತೆಗಳು ಹ್ಯಾಕರ್‌ಗಳು ಮತ್ತು ವಂಚಕರಿಗೆ ಗುರಿಯಾಗುವ ಅಪಾಯ ಹೆಚ್ಚು ಇರುತ್ತದೆ.

2. ದೀರ್ಘಕಾಲದವರೆಗೆ ಶೂನ್ಯ ಬ್ಯಾಲೆನ್ಸ್ ಕಾಯ್ದುಕೊಳ್ಳುವ ಖಾತೆಗಳನ್ನು ‘ಶೂನ್ಯ ಬ್ಯಾಲೆನ್ಸ್ ಖಾತೆಗಳು’ ಎಂದು ಕರೆಯಲಾಗುತ್ತದೆ. ಅಂತಹ ಖಾತೆಗಳನ್ನು ಮುಚ್ಚಲು ರಿಸರ್ವ್ ಬ್ಯಾಂಕ್ ನಿರ್ದೇಶನ ನೀಡಿದೆ.

3. ಕಳೆದ 12 ತಿಂಗಳು ಅಥವಾ ಅದಕ್ಕಿಂತ ಹೆಚ್ಚು ಕಾಲ ಯಾವುದೇ ವಹಿವಾಟು ನಡೆಸದ ಖಾತೆಗಳನ್ನು ನಿಷ್ಕ್ರಿಯಗೊಳಿಸಲಾಗುತ್ತದೆ. ಈ ಅವಧಿಯಲ್ಲಿ ಖಾತೆದಾರರು ಯಾವುದೇ ವಹಿವಾಟು ನಡೆಸದಿದ್ದರೆ, ಅವರು ಬ್ಯಾಂಕ್ ಶಾಖೆಯನ್ನು ಸಂಪರ್ಕಿಸಿ ತಮ್ಮ ಖಾತೆಯನ್ನು ಪುನಃ ಸಕ್ರಿಯಗೊಳಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ, ಇಲ್ಲದಿದ್ದರೆ ಬ್ಯಾಂಕ್ ಅವರ ಖಾತೆಯನ್ನು ಮುಚ್ಚುತ್ತದೆ.

ಖಾತೆ ಬಂದ್ ಆಗದಂತೆ ಹೀಗೆ ಪ್ರಯತ್ನಿಸಿ.

ಬ್ಯಾಂಕ್ ಖಾತೆಯನ್ನು ಮುಚ್ಚಬಾರದು; ಆದ್ದರಿಂದ, ಖಾತೆದಾರರು ಖಾತೆಯನ್ನು ಪುನಃ ಸಕ್ರಿಯಗೊಳಿಸಲು ಬ್ಯಾಂಕ್ ಶಾಖೆಗೆ ಭೇಟಿ ನೀಡಬೇಕು. ಅಲ್ಲದೆ, ಶೂನ್ಯ ಬ್ಯಾಲೆನ್ಸ್ ಇದ್ದರೆ, ಖಾತೆಯು ಹಾಗೆಯೇ ಉಳಿಯುವುದಿಲ್ಲ ಎಂಬ ಅಂಶದತ್ತ ಗಮನ ಹರಿಸಬೇಕು.