30 ಹಿಂದುತ್ವನಿಷ್ಠರಿಂದ ‘ಶಸ್ತ್ರ ಸಜ್ಜಿತ ಸನ್ಯಾಸ’ ದೀಕ್ಷೆ !

ಪ್ರಯಾಗರಾಜ (ಉತ್ತರ ಪ್ರದೇಶ), ಜನವರಿ 24 (ಸುದ್ದಿ) – ಉತ್ತರ ಪ್ರದೇಶದ ಕಾನ್ಪುರದಲ್ಲಿರುವ ‘ಶಿವಶಕ್ತಿ ಅಖಾಡ’ದ 30 ಹಿಂದುತ್ವನಿಷ್ಠರು ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಶಸ್ತ್ರಸಜ್ಜಿತ ಸನ್ಯಾಸವನ್ನು ಸ್ವೀಕರಿಸಿದ್ದಾರೆ. ಇದರೊಂದಿಗೆ, ಅಖಾಡದ 2 ಸಾವಿರ 200 ಯುವಕರು ಶಸ್ತ್ರಾಸ್ತ್ರ ಪ್ರಶಿಕ್ಷಣವನ್ನು ಪಡೆದಿರುವವರು ಧರ್ಮ ಯೋಧರೆಂದು ಸಿದ್ಧರಾಗಿದ್ದಾರೆ. ಶಿವಶಕ್ತಿ ಆಖಾಡದ ಮುಖ್ಯಸ್ಥ ಮಧುರಾಮ ಶರಣ ಶಿವಾಜಿ ಮಹಾರಾಜರು ‘ಸನಾತನ ಪ್ರಭಾತ’ ದಿನಪತ್ರಿಕೆಗೆ ಈ ಬಗ್ಗೆ ಮಾಹಿತಿ ನೀಡಿದರು. ಎಲ್ಲಾ ಶಸ್ತ್ರಸಜ್ಜಿತ ಸನ್ಯಾಸಿಗಳು ಮಹಾಕುಂಭಮೇಳದಲ್ಲಿ ಬಂದಿದ್ದಾರೆ.
ಈ ಬಗ್ಗೆ ಮಾಹಿತಿ ನೀಡುವಾಗ ಮಧುರಾಮ ಶರಣ ಶಿವಾಜಿ ಮಹಾರಾಜರು, “ಸನಾತನ ಹಿಂದೂ ಧರ್ಮವನ್ನು ರಕ್ಷಿಸಲು ಈಗ ಹಿಂದೂಗಳು ಸಶಸ್ತ್ರಧಾರಿಗಳಾಗಲಿದ್ದಾರೆ ಮತ್ತು ಆ ಮೂಲಕ ಹಿಂದೂ ರಾಷ್ಟ್ರವನ್ನು ಸ್ಥಾಪಿಸಲಿದ್ದಾರೆ” ಎಂದು ಹೇಳಿದರು. ‘ಶಸ್ತ್ರಮೇವ ಜಯತೇ’ ಇದು ನಮ್ಮ ಧ್ಯೇಯವಾಕ್ಯವಾಗಿದೆ. ‘ಶಸ್ತ್ರಮೇವ ಸತ್ಯಂ, ಸತ್ಯಂ ಶಸ್ತ್ರಮೇವ’ ಈ ಉದ್ದೇಶದಿಂದ ನಾವು ಸಮಾಜದಲ್ಲಿ ಸಂಚರಿಸುತ್ತೇವೆ. ಸಭೆಗಳನ್ನು ನಡೆಸುತ್ತೇವೆ. ಯಾತ್ರೆ ಮಾಡುತ್ತೇವೆ. ನಾವು ಸಮಾಜದೊಳಗೆ ಹೋಗಿ ಎಷ್ಟು ಸನಾತನಿ ಹಿಂದೂಗಳಿದ್ದಾರೆಯೋ ಅವರು ಸಶಸ್ತ್ರಧಾರಿಗಳಾಗಬೇಕೆಂದು ಪ್ರೇರೇಪಿಸುತ್ತಿದ್ದೇವೆ. ಸಧ್ಯದ ಸ್ಥಿತಿಯಲ್ಲಿ ದೇಶದಲ್ಲಿ ಸಂವಿಧಾನ, ಧರ್ಮ, ಪರಿಸರ ಇತ್ಯಾದಿಗಳ ಕುರಿತು ಚರ್ಚೆಗಳು ನಡೆಯುತ್ತಿವೆ; ಆದರೆ ಇದಕ್ಕಾಗಿ ಈ ನೆಲದಲ್ಲಿ ಹಿಂದೂಗಳು ಇರುವುದು ಆವಶ್ಯಕವಾಗಿದೆ. ಅದಕ್ಕಾಗಿಯೇ ನಾವು ಹಿಂದೂ ರಾಷ್ಟ್ರವನ್ನು ಒತ್ತಾಯಿಸುತ್ತಿದ್ದೇವೆ” ಎಂದು ಹೇಳಿದರು.
…ಆದರೆ ನಮ್ಮ ಸೈನ್ಯ ಸಿದ್ಧವಾಗಿರುತ್ತದೆ !
ಇಲ್ಲಿಯವರೆಗೆ, ನಾವು 40 ನಗರಗಳಿಗೆ ಪ್ರಯಾಣಿಸಿದ್ದೇವೆ. ಮನೆ, ಕುಟುಂಬ ಮತ್ತು ಉನ್ನತ ಹುದ್ದೆಗಳನ್ನು ತ್ಯಜಿಸಿ ಈ ಯುವಕರು ಸಶಸ್ತ್ರ ಸನ್ಯಾಸಿಗಳಾಗಿದ್ದಾರೆ. ಹಿಂದೂ ಯುವಕರನ್ನು ಸಶಸ್ತ್ರ ಸನ್ಯಾಸಿಗಳನ್ನಾಗಿ ಮಾಡಲು ನಾವು ಸಂಕಲ್ಪ ಮಾಡಿದ್ದೇವೆ. ಕುಂಭಮೇಳದಲ್ಲಿಯೂ ಈ ಕಾರ್ಯ ಮುಂದುವರಿಯುತ್ತದೆ. ಹಿಂದೂ ಧರ್ಮದ ರಕ್ಷಣೆಗಾಗಿ ಶಿವಶಕ್ತಿ ಅಖಾಡವು ಯುವಕರ ಸೈನ್ಯವನ್ನು ಸಿದ್ಧಪಡಿಸುತ್ತದೆ. ಭವಿಷ್ಯದಲ್ಲಿ ಯಾರಾದರೂ ಹಿಂದೂ ಧರ್ಮದ ಮೇಲೆ ಸಾಮೂಹಿಕ ದಾಳಿ ನಡೆಸಿದರೆ, ಅದರ ಪ್ರತೀಕಾರ ಮಾಡಲು ನಮ್ಮ ಸೇನೆಯು ಸಿದ್ಧವಾಗಿರುತ್ತದೆ’, ಎಂದು ಮಧುರಾಮ ಶರಣ ಶಿವಾಜಿ ಮಹಾರಾಜ ಹೇಳಿದರು.
ಪ್ರತಿ ಹಳ್ಳಿಯಿಂದ 10 ಧರ್ಮ ಯೋಧರು !
“ಧರ್ಮದ ರಕ್ಷಣೆಗಾಗಿ ಶಸ್ತ್ರಾಸ್ತ್ರಗಳನ್ನು ತೆಗೆದುಕೊಂಡು ಬನ್ನಿರಿ” ಎಂದು ನಾವು ಹಿಂದೂಗಳಿಗೆ ಮನವಿ ಮಾಡುತ್ತೇವೆ. ರಾತ್ರಿಯಲ್ಲಿ ನಾವು ವಿವಿಧ ಜಾತಿಗಳ ಜನರನ್ನು ಆಹ್ವಾನಿಸುತ್ತೇವೆ. ಅವರ ಮನೆಯಲ್ಲಿ ಊಟ ಮಾಡುತ್ತೇವೆ. ಅದಾದ ನಂತರ, ಆಖಾಡಾದ ಸನ್ಯಾಸಿಗಳು ಹಳ್ಳಿಗಳಿಗೆ ಹೋಗಿ ಜಾತಿ ತಾರತಮ್ಯವನ್ನು ತೊಡೆದುಹಾಕುವ ಮೂಲಕ ಹಿಂದತ್ವದ ತತ್ವಗಳ ಮೇಲೆ ಕೆಲಸ ಮಾಡುತ್ತಾರೆ. ಅವರು ಧರ್ಮಕ್ಕಾಗಿ ಏನು ಬೇಕಾದರೂ ಮಾಡಲು ಸಿದ್ಧರಿರುತ್ತಾರೆ. ಪ್ರತಿ ಹಳ್ಳಿಯಿಂದ ಹತ್ತು ಮಂದಿ ಧರ್ಮ ಯೋಧರನ್ನು ಆಯ್ಕೆ ಮಾಡಲಾಗುತ್ತದೆ. ಅವರನ್ನು ಈ ಆಖಾಡಾಗಳಲ್ಲಿ ನೇಮಿಸಿಕೊಳ್ಳಲಾಗುತ್ತದೆ. ಪ್ರತಿಯೊಂದು ಸ್ಥಳದಲ್ಲೂ 200 ಯುವಕರನ್ನು ಅಖಾಡಕ್ಕೆ ನೇಮಿಸಿಕೊಳ್ಳುವುದು ನಮ್ಮ ಗುರಿಯಾಗಿದೆ. ತ್ರಿಶೂಲ, ತಲವಾರು, ಈಟಿ, ಗದೆ ಮುಂತಾದ ಆಯುಧಗಳ ಬಳಕೆಯಲ್ಲಿ ನಾವು ತರಬೇತಿ ನೀಡುತ್ತಿದ್ದೇವೆ’, ಎಂದು ಮಧುರಾಮ ಶರಣ ಶಿವಾಜಿ ಮಹಾರಾಜ ಮಾಹಿತಿ ನೀಡಿದರು.
ಹಿಂದೂಗಳು ಕುಂಭಮೇಳಕ್ಕೆ ಬಂದು ಧರ್ಮವನ್ನು ತಿಳಿದುಕೊಳ್ಳಬೇಕು !
ಹಿಂದೂಗಳು ಹಿಂದೂ ಧರ್ಮವನ್ನು ನಂಬುತ್ತಾರೆ; ಆದರೆ ಅವರಿಗೆ ಧರ್ಮ ಶಿಕ್ಷಣ ಸಿಕ್ಕಿಲ್ಲ. ಹಿಂದೂಗಳು ಕುಂಭಮೇಳಕ್ಕೆ ಬಂದು ಹಿಂದೂ ಧರ್ಮವನ್ನು ತಿಳಿದು ಕೊಳ್ಳಬೇಕು. ಅವರು ಹಿಂದೂ ಧರ್ಮವನ್ನು ಅರ್ಥಮಾಡಿಕೊಂಡರೆ ಮಾತ್ರ ಅವರು ಧರ್ಮ ಯೋಧರಾಗಲು ಸಾಧ್ಯ. ಧರ್ಮವನ್ನು ರಕ್ಷಿಸಬೇಕಾಗಿದ್ದರೆ, ಹಿಂದೂಗಳು ಶಸ್ತ್ರಾಸ್ತ್ರಗಳನ್ನು ಹಿಡಿಯಬೇಕಾಗುತ್ತದೆ. “ಶಸ್ತ್ರಮೇವ ಜಯತೇ” ಎಂದರೆ ಯಾರ ಕೈಯಲ್ಲಿ ಆಯುಧವಿದೆಯೋ ಅವರು ವೇದಗಳು, ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಗೌರವಿಸುತ್ತಾರೆ ಎಂದು ಮಧುರಾಮ ಶರಣ ಶಿವಾಜಿ ಮಹಾರಾಜರು ಹೇಳಿದರು.
‘ಸನಾತನ ಪ್ರಭಾತ’ವು ಮಧುರಾಮ ಶರಣ ಶಿವಾಜಿ ಮಹಾರಾಜ ಅವರೊಂದಿಗೆ ನಡೆಸಿದ ಸಂದರ್ಶನವನ್ನು ವೀಕ್ಷಿಸಲು, ಕ್ಲಿಕ್ ಮಾಡಿ :