
ಮಂಗಳೂರು – ಉಳ್ಳಾಲ ಕೋಟೆಪುರದಲ್ಲಿ ಎಪ್ರಿಲ್ 12, 2016 ರಂದು ನಡೆದ ಧಾರ್ಮಿಕ ದ್ವೇಷದ ಹಿನ್ನೆಲೆಯಲ್ಲಿ ರಾಜೇಶ್ ಕೋಟ್ಯಾನ್ ಅಲಿಯಾಸ್ ರಾಜ (44 ವರ್ಷ) ಎಂಬಾತನನ್ನು ಹತ್ಯೆಗೈದ ಪ್ರಕರಣದ ನಾಲ್ವರು ಆರೋಪಿಗಳಿಗೆ ಮಂಗಳೂರು ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಆರೋಪಿಗಳಲ್ಲಿ ಮುಹಮ್ಮದ್ ಆಸಿಫ್ (31 ವರ್ಷ), ಮುಹಮ್ಮದ್ ಸುಹೇಲ್ (28 ವರ್ಷ), ಅಬ್ದುಲ್ ಮುತಾಲಿಪ್ ಅಲಿಯಾಸ್ ಮತ್ತು (28 ವರ್ಷ) ಮತ್ತು ಅಬ್ದುಲ್ ಅಸ್ವೀರ್ ಅಲಿಯಾಸ್ ಅಚ್ಚು (27 ವರ್ಷ) ಸೇರಿದ್ದಾರೆ. ಈ ಪ್ರಕರಣದಲ್ಲಿ ಇಬ್ಬರು ಅಪ್ರಾಪ್ತರ ವಿಚಾರಣೆಯು ಬಾಲಾಪರಾಧ ನ್ಯಾಯಾಲಯದಲ್ಲಿ ನಡೆಯುತ್ತಿದೆ. ಶಿಕ್ಷೆಗೊಳಗಾದ ಆರೋಪಿಗಳಿಗೆ ತಲಾ 25 ಸಾವಿರ ದಂಡ ವಿಧಿಸಲಾಗಿದ್ದು, ರಾಜೇಶ ಕೋಟ್ಯಾನ್ ಅವರ ಪತ್ನಿಗೆ ಆ ಮೊತ್ತವನ್ನು ಪಾವತಿಸುವಂತೆಯೂ ನ್ಯಾಯಾಲಯ ಆದೇಶಿಸಿದೆ.
FIR Against Kunal Kamra : ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಹಾಸ್ಯ ಕಲಾವಿದ ಕುಣಾಲ ಕಮ್ರಾ ವಿರುದ್ಧ ದೂರು ದಾಖಲು!
Fake Currency Racket : ಜಾಲದಿಂದ ನಕಲಿ ಭಾರತೀಯ ಕರೆನ್ಸಿ ನೋಟುಗಳ ಮುದ್ರಣ ಪತ್ತೆ!
Kerala HC on Waqf : ಕೇರಳ ಹೈಕೋರ್ಟ್ನಿಂದ ರಾಜ್ಯ ವಕ್ಫ್ ಮಂಡಳಿಗೆ ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳದಂತೆ ತಡೆ
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
ಪ್ರಭು ಶ್ರೀರಾಮಚಂದ್ರರು ಒಂದು ಮದುವೆ ಮಾಡಿಕೊಂಡರೆ, ರಹೀಮನಿಂದಲೂ ಅದೇ ನಿರೀಕ್ಷೆ ಇರುತ್ತದೆ! : CM Dr. Mohan Yadav
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed