Green Islam : ಇಮಾಮ್ ನಸ್ರುದ್ದೀನ ಉಮರ್ ಇವರ ನೇತೃತ್ವದಲ್ಲಿ, ಇಂಡೋನೇಷ್ಯಾದಲ್ಲಿ ‘ಗ್ರೀನ್ ಇಸ್ಲಾಂ’ ಚಳವಳಿ ತೀವ್ರವಾಗುತ್ತಿದೆ.!

ಮುಸಲ್ಮಾನರು ಕಾನೂನನ್ನು ಲೆಕ್ಕಿಸುವುದಿಲ್ಲ ಆದರೆ ಅವರು ಧಾರ್ಮಿಕ ಮುಖಂಡರು ಹೇಳುವುದನ್ನು ಕೇಳುತ್ತಾರೆ! – ಇಂಡೋನೇಷಿಯನ್ ಉಲೇಮಾ ಕೌನ್ಸಿಲ್

(ಗ್ರೀನ್ ಇಸ್ಲಾಂ ಎಂದರೆ ಪರಿಸರ ಬಗ್ಗೆ ಜಾಗರೂಕರಾಗಿರುವ ಇಸ್ಲಾಂ)
(ಇಮಾಮ್ ಎಂದರೆ ಮಸೀದಿಯಲ್ಲಿ ಪ್ರಾರ್ಥನೆ ಮಾಡಿಸುವವರು)

ಜಕಾರ್ತ (ಇಂಡೋನೇಷ್ಯಾ) – ಅತಿ ಹೆಚ್ಚು ಮುಸ್ಲಿಂ ಜನಸಂಖ್ಯೆಯನ್ನು ಹೊಂದಿರುವ ಇಂಡೋನೇಷ್ಯಾದಲ್ಲಿ ಸಧ್ಯಕ್ಕೆ ‘ಗ್ರೀನ್ ಇಸ್ಲಾಂ’ ಚಳುವಳಿ ಪ್ರಾರಂಭವಾಗಿದೆ. ಹಸಿರು ಇಸ್ಲಾಂ ಎಂದರೆ ‘ಪರಿಸರದ ವಿಷಯದಲ್ಲಿ ಜಾಗರೂಕವಾಗಿರುವ ಇಸ್ಲಾಂ’ ಆಗಿದೆ. ನಸರುದ್ದೀನ ಒಮರ ಇವರು ರಾಜಧಾನಿ ಜಕಾರ್ತಾದ ಇಸ್ತಿಕಲಾಲ ಮಸೀದಿಯ ಮುಖ್ಯ ಇಮಾಮ್ ಆಗಿದ್ದಾರೆ. ಅವರ ನೇತೃತ್ವದಲ್ಲಿ ಈ ಚಳವಳಿ ಪ್ರಾರಂಭವಾಯಿತು. ಅವರ ಭಾಷಣಗಳಲ್ಲಿ ಪರಿಸರವೇ ಮುಖ್ಯ ವಿಷಯವಾಗಿರುತ್ತದೆ. ಈ ಸಂದರ್ಭದಲ್ಲಿ, `ಇಂಡೋನೇಶಿಯನ್ ಉಲೇಮಾ ಕೌನ್ಸಿಲ್‌’ನ ಪರಿಸರ ಸಂರಕ್ಷಣೆಯ ಮುಖ್ಯಸ್ಥ ಹಾಯು ಪ್ರಬೋವೊ ಅವರು ಮಾತನಾಡಿ (ಮುಸ್ಲಿಮರು) ಸಾರ್ವಜನಿಕ ನಿಯಮಗಳನ್ನು ಪಾಲಿಸುವುದಿಲ್ಲ ಎಂದು ಹೇಳಿದರು. ಅವರಿಗೆ ಅದರ ಬಗ್ಗೆ ಕಾಳಜಿಯಿಲ್ಲ ; ಆದರೆ ಧಾರ್ಮಿಕ ಮುಖಂಡರು ಹೇಳುವುದನ್ನು ಕೇಳುತ್ತಾರೆ; ಏಕೆಂದರೆ ಅವರ ಧಾರ್ಮಿಕ ಮುಖಂಡರು ನೀವು ಕಾನೂನಿನಿಂದ ರಕ್ಷಿಸಿಕೊಳ್ಳಬಹುದು. ಆದರೆ ಅಲ್ಲಾ ಮಾಡಿರುವ ಕಾನೂನಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳುತ್ತಾರೆ. ನಸ್ರುದ್ದೀನ್ ಒಮರ್ ಅವರ ಪ್ರಯತ್ನವನ್ನು ಅಂತರರಾಷ್ಟ್ರೀಯ ಸಮುದಾಯವೂ ಗಮನಿಸಿದೆ.

ಉಮರ್ ಅನೇಕ ಬಾರಿ ಎಚ್ಚರಿಕೆ ನೀಡುತ್ತಾ, ಮಾನವರಾಗಿ ನಮ್ಮ ಅತ್ಯಂತ ಅಪಾಯಕಾರಿ ದೋಷವೆಂದರೆ ನಾವು ಭೂಮಿಯನ್ನು ಕೇವಲ ಒಂದು ವಸ್ತುವಾಗಿ ಪರಿಗಣಿಸುತ್ತೇವೆ. ನಾವು ಎಷ್ಟು ದುರಾಸೆ ಹೊಂದಿರುತ್ತೇವೆಯೋ, ಅಷ್ಟು ಬೇಗನೆ ಜಗತ್ತು ಅಂತ್ಯಗೊಳ್ಳುತ್ತದೆ. ಯಾವ ರೀತಿ ಮುಸಲ್ಮಾನರು ರಂಜಾ಼ನ್ ಉಪವಾಸ ಮಾಡುತ್ತಾರೆಯೋ, ಅದೇ ರೀತಿ ಅವರು ಭೂಮಿಯ ರಕ್ಷಣೆಯನ್ನು ತಮ್ಮ ಕರ್ತವ್ಯವೆಂದು ಪರಿಗಣಿಸಬೇಕು. ನಿತ್ಯದ ನಮಾಜ಼ನಂತೆಯೇ ಗಿಡಗಳನ್ನು ಬೆಳೆಸುವ ರೂಢಿ ಮಾಡಿಕೊಳ್ಳಬೇಕು. ‘ಮುಸ್ಲಿಮರು ನಿಸರ್ಗದ ಕಾಳಜಿಯನ್ನು ತೆಗೆದುಕೊಳ್ಳಬೇಕು’ ಎನ್ನುವ ಪೈಗಂಬರ್ ಮಹಮ್ಮದ್ ರ ಸೂಚನೆಯನ್ನು ಪಾಲಿಸಬೇಕು ಎಂದು ಹೇಳಿದರು.