ಸಂಪೂರ್ಣ ಸ್ವದೇಶಿ ನಿರ್ಮಿತ ‘ನಿರ್ಭಯ್’ ಕ್ರೂಸ್ ಕ್ಷಿಪಣಿ ಯಶಸ್ವಿ ಉಡಾವಣೆ

ಭುವನೇಶ್ವರ (ಒಡಿಶಾ) – ಸ್ವದೇಶಿ ತಂತ್ರಜ್ಞಾನದ ‘ನಿರ್ಭಯ್’ ಕ್ರೂಸ್ ಕ್ಷಿಪಣಿ ಒಡಿಶಾದ ಚಾಂದೀಪೂರದಲ್ಲಿ ಏಪ್ರಿಲ್ 18 ರಂದು ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು. ಸಂರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಘಟನೆ (ಡಿ.ಆರ್‌.ಡಿ.ಒ.) ಈ ಕ್ಷಿಪಣಿ ನಿರ್ಮಾಣ ಮಾಡಿದೆ. ನಿರ್ಭಯ್ ಕ್ಷಿಪಣಿ ಸೇನೆಗೆ ಸೇರ್ಪಡೆಯಾದ ಬಳಿಕ ಚೀನಾ ಮತ್ತು ಪಾಕಿಸ್ತಾನ ಗಡಿ ಭಾಗದಲ್ಲಿ ನಿಯೋಜಿಸಬಹುದು. ಈ ಕ್ಷಿಪಣಿಯು ಸಮುದ್ರ ಮತ್ತು ಭೂ ಭಾಗದಿಂದ ಉಡಾಯಿಸಬಹುದು. ಈ ಕ್ಷಿಪಣಿ(ಕ್ಷಿಪಣಾಸ್ತ್ರ) 6 ಮೀಟರ್ ಉದ್ದ ಮತ್ತು 0.52 ಮೀಟರ್ ಅಗಲವಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಈ ಯಶಸ್ಸಿಗೆ ಡಿ.ಆರ್‌.ಡಿ.ಒ.ಗೆ ಅಭಿನಂದನೆ ಸಲ್ಲಿಸಿದ್ದಾರೆ.