‘ಭಾಜಪ ರಾಜ್ಯದಲ್ಲಿ ಹಲವು ನಕಲಿ ಘರ್ಷಣೆಗಳು ನಡೆದಿವೆಯಂತೆ ! – ಕಾಂಗ್ರೆಸ್ ನ ಮಾಜಿ ಮುಖ್ಯಮಂತ್ರಿ ಭೂಪೇಶ ಬಘೆಲ

ನಕ್ಸಲೀಯರ ವಿರುದ್ಧದ ಘರ್ಷಣೆಯನ್ನು ಕಟ್ಟುಕಥೆಯೆಂದು ಬಿಂಬಿಸಲು ಯತ್ನಿಸಿದ ಕಾಂಗ್ರೆಸ್ಸಿನ ಮಾಜಿ ಮುಖ್ಯಮಂತ್ರಿ

ಕವರ್ಧಾ (ಛತ್ತೀಸಗಢ) – ದೇಶದಲ್ಲಿ ಅನೇಕ ನಕಲಿ ಕಾರ್ಯಾಚರಣೆಗಳು ನಡೆದಿವೆ, ಇವು ನಮ್ಮ ಆಡಳಿತವಿರುವಾಗ ನಡೆದಿಲ್ಲ. ಅವರ(ಭಾಜಪದ) ಆಡಳಿತದಲ್ಲಿ ಅನೇಕ ಜನರನ್ನು ಸುಳ್ಳು ಪ್ರಕರಣದಲ್ಲಿ ಬಂಧಿಸಲಾಗಿದೆ. ಅವರು (ಭಾಜಪ ರಾಜ್ಯ ಸರಕಾರ) ಆದಿವಾಸಿಗಳನ್ನು ಬೆದರಿಸಿ, ಬಂಧಿಸಿದ್ದರು. ಕಳೆದ 4 ತಿಂಗಳುಗಳಿಂದ ಅವರು ಇದೇ ಕೆಲಸವನ್ನು ಮಾಡುತ್ತಿದ್ದಾರೆ. ಕವರ್ಧಾ ಜಿಲ್ಲೆಯಲ್ಲಿಯೂ ಜನರಿಗೆ ಬೆದರಿಕೆ ಹಾಕಲಾಗಿದೆಯೆಂದು, ಕಾಂಗ್ರೆಸ್ಸಿನ ಮಾಜಿ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರು ಇಲ್ಲಿನ ಪತ್ರಿಕಾ ಗೋಷ್ಠಿಯಲ್ಲಿ ಮಿಥ್ಯಾರೋಪ ಮಾಡಿದ್ದಾರೆ. ಏಪ್ರಿಲ್ 17 ರಂದು ಕಾಂಕೇರನಲ್ಲಿ 29 ನಕ್ಸಲೀಯರು ಹತ್ಯೆಗೊಂಡ ಘಟನೆಯನ್ನು ಆಧರಿಸಿ ಬಘೇಲ್ ಈ ಆರೋಪ ಮಾಡಿದರು. ಬಘೇಲ್ ಅವರು ಈ ಎನ್ಕೌಂಟರ್ ಅನ್ನು ಕಟ್ಟುಕಥೆಯೆಂದು ಬಿಂಬಿಸಲು ಅಪ್ರತ್ಯಕ್ಷವಾಗಿ ಪ್ರಯತ್ನಿಸಿದ್ದಾರೆ.

ಕಾರ್ಯಾಚರಣೆ ಕಟ್ಟುಕಥೆಯೆಂದು ಕಾಂಗ್ರೆಸ್ ಸಾಬೀತುಪಡಿಸಲಿ ! – ಮುಖ್ಯಮಂತ್ರಿ ವಿಷ್ಣುದೇವ ಸಾಯ

ಕಾಂಗ್ರೆಸ್ ಆರೋಪಕ್ಕೆ ಮುಖ್ಯಮಂತ್ರಿ ವಿಷ್ಣುದೇವ್ ಸಾಯ ಮತ್ತು ಉಪಮುಖ್ಯಮಂತ್ರಿ ವಿಜಯ್ ಶರ್ಮಾ ಅವರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಮುಖ್ಯಮಂತ್ರಿ ಸಾಯ ಮಾತನಾಡಿ, ಪ್ರತಿಯೊಂದು ವಿಷಯವನ್ನು ರಾಜಕೀಯ ಮಾಡಬಾರದು. ಈ ಕಾರ್ಯಾಚರಣೆಯನ್ನು ಕಟ್ಟುಕಥೆಯೆಂದು ಹೇಳುವುದು ಭದ್ರತಾ ಸಿಬ್ಬಂದಿಗಳಿಗೆ ಮಾಡಿದ ಅವಮಾನವಾಗಿದೆ ಎಂದು ಹೇಳಿದರು.

ಉಪಮುಖ್ಯಮಂತ್ರಿ ವಿಜಯ ಶರ್ಮಾ ಮಾತನಾಡಿ. ನೀವು ಈ ಕಾರ್ಯಾಚರಣೆ ನಡೆದಿರುವುದು ಕಟ್ಟುಕಥೆಯಾಗಿದೆಯೆಂದು ಸಾಬೀತುಪಡಿಸಬೇಕು ಅಥವಾ ಭದ್ರತಾ ಸಿಬ್ಬಂದಿಗಳಿಗೆ ಕ್ಷಮೆಯಾಚಿಸಬೇಕು ಎಂದು ಹೇಳಿದರು.

ಸಂಪಾದಕೀಯ ನಿಲುವು

ಕಾಂಗ್ರೆಸ್ ಆಡಳಿತವಿರುವಾಗಲೇ ನಕ್ಸಲವಾದ ಉದಯಿಸಿತು ಮತ್ತು ಅದು ಎಲ್ಲೆಡೆ ವ್ಯಾಪಿಸಿತು ಎನ್ನುವ ಸತ್ಯವನ್ನು ಕಾಂಗ್ರೆಸ್ ಒಪ್ಪಿಕೊಳ್ಳುವುದೇ? ನಕ್ಸಲವಾದವನ್ನು ಬೆಳೆಸಿದ ಕಾಂಗ್ರೆಸ್ಸಿನವರು ಮೊದಲು ಕಠೋರ ಪ್ರಾಯಶ್ಚಿತ್ತ ತೆಗೆದುಕೊಳ್ಳಬೇಕು.

ದೆಹಲಿಯ ಬಾಟ್ಲಾ ಹೌಸ್‌ನಲ್ಲಿ ಜಿಹಾದಿ ಭಯೋತ್ಪಾದಕರ ವಿರುದ್ಧ ನಡೆದ ಕಾರ್ಯಾಚರಣೆಯನ್ನು ಕೂಡ ಕಾಂಗ್ರೆಸ್ ಕಟ್ಟುಕಥೆಯೆಂದು ಬಿಂಬಿಸಲು ಪ್ರಯತ್ತಿಸಿತ್ತು. ಆ ದಾಳಿಯಲ್ಲಿ ಕರ್ತವ್ಯನಿರತ ಓರ್ವ ಪೊಲೀಸ ಅಧಿಕಾರಿ ಹುತಾತ್ಮನಾಗಿದ್ದರೂ ಅಹ ಕಾಂಗ್ರೆಸ್ ಭಯೋತ್ಪಾದಕರನ್ನು ಬೆಂಬಲಿಸಿತ್ತು. ಇಂತಹ ರಾಷ್ಟ್ರದ್ರೋಹಿ ಕಾಂಗ್ರೆಸ್ಸಿನಿಂದ ಮತ್ತಿನೇನನ್ನು ನಿರೀಕ್ಷಿಸಬಹುದು?