ಕನ್ಹಯ್ಯಾಲಾಲ ಹತ್ಯೆ ಪ್ರಕರಣದ ಉಲ್ಲೇಖವಿಲ್ಲದ ಕಾರಣ, ಅರ್ಜಿ ಸಲ್ಲಿಸಿದ ಮುಸ್ಲಿಂ ನ್ಯಾಯವಾದಿಗಳಿಗೆ ನ್ಯಾಯಾಲಯದಿಂದ ಛೀಮಾರಿ !
ನವದೆಹಲಿ – ಗುಂಪಿನಿಂದ ನಡೆಯುವ ಅಲ್ಪಸಂಖ್ಯಾತ ಸಮುದಾಯ ವ್ಯಕ್ತಿಗಳ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯದಲ್ಲಿ ಸಲ್ಲಿಸಲಾದ ಒಂದು ಅರ್ಜಿಯ ವಿಚಾರಣೆ ವೇಳೆಗೆ ನ್ಯಾಯವಾದಿ ಸಲೀಂ ಪಾಷಾ ಅವರಿಗೆ ಛೀಮಾರಿ ಹಾಕಿದೆ. ಈ ಅರ್ಜಿಯಲ್ಲಿ ಉದಯಪುರದ ದರ್ಜಿ ಕನ್ಹಯ್ಯಾಲಾಲ್ ಹತ್ಯೆಯನ್ನು ಉಲ್ಲೇಖಿಸಿರಲಿಲ್ಲ. ಅದರಿಂದ ನ್ಯಾಯಾಲಯವು ಸಲೀಂ ಪಾಷಾ ಅವರಿಗೆ ಛೀಮಾರಿ ಹಾಕುವಾಗ ‘ಇಂತಹ ಪ್ರಕರಣಗಳಲ್ಲಿ ಪಕ್ಷಪಾತ ಮಾಡಬೇಡಿ; ಏಕೆಂದರೆ ಈ ಪ್ರಕರಣ ಎಲ್ಲ ರಾಜ್ಯಗಳಿಗೂ ಸಂಬಂಧಿಸಿದೆ. ಇಂತಹ ಘಟನೆಗಳನ್ನು ಧರ್ಮದ ಆಧಾರದಲ್ಲಿ ನೋಡಬೇಡಿ ಎಂದು ಹೇಳಿದೆ.
ಕಳೆದ ವರ್ಷ ‘ನ್ಯಾಷನಲ್ ಫೆಡರೇಶನ್ ಆಫ್ ಇಂಡಿಯನ್ ವುಮೆನ್’ ಸಂಸ್ಥೆಯು ಈ ಅರ್ಜಿಯನ್ನು ಸಲ್ಲಿಸಿತ್ತು. ಗುಂಪಿನಿಂದ ಹತ್ಯೆಗೊಂಡವರ ಕುಟುಂಬಗಳಿಗೆ ಪರಿಹಾರ ನೀಡಬೇಕೆಂದು ಒತ್ತಾಯಿಸಲಾಗಿದೆ. ಗುಂಪಿನ ಹತ್ಯೆ ಪ್ರಕರಣಗಳ ಬಗ್ಗೆ ಕೈಕೊಂಡ ಕ್ರಮಗಳ ಕುರಿತು ಆರು ವಾರಗಳಲ್ಲಿ ಅನೇಕ ರಾಜ್ಯಗಳಿಂದ ಉತ್ತರವನ್ನು ಕೋರಿದೆ. ನ್ಯಾಯಾಲಯದ ಬೇಸಿಗೆ ರಜೆಯ ನಂತರ ಈ ಬಗ್ಗೆ ಮುಂದಿನ ವಿಚಾರಣೆ ನಡೆಯಲಿದೆ.