ಈ ಸಂಘಟನೆಗೆ ಮ್ಯಾನ್ಮಾರ್ ಸೇನೆಯು ಬೆಂಬಲ
ಯಾಂಗೂನ್ (ಮ್ಯಾನ್ಮಾರ್) – 2017 ರಲ್ಲಿ ಮ್ಯಾನ್ಮಾರ್‌ನ ರಾಖೀನ್ ರಾಜ್ಯದಲ್ಲಿ ರೋಹಿಂಗ್ಯಾ ಮುಸಲ್ಮಾನರು ಅನೇಕ ಹಿಂದೂ ಮತ್ತು ಬೌದ್ಧರನ್ನು ಹತ್ಯೆಗೈದಿದ್ದರು. ಈಗ ಅರಕಾನ ಪ್ರಾಂತ್ಯದ ಬುತಿದುಆಂಗ್ ನಲ್ಲಿ ರೊಹಿಂಗ್ಯಾ ಮುಸ್ಲಿಮರ ಸಶಸ್ತ್ರ ಸಂಘಟನೆಯೊಂದು 1,600ಕ್ಕೂ ಹೆಚ್ಚು ಹಿಂದೂಗಳು ಮತ್ತು 120 ಬೌದ್ಧರನ್ನು ಒತ್ತೆಯಾಳಾಗಿ ಇರಿಸಿಕೊಂಡಿದೆ ಎಂಬ ಸುದ್ದಿಯನ್ನು ‘ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಮಾಡಿದೆ. ವಿಶೇಷ ಅಂದರೆ, ಈ ಕೆಲಸವನ್ನು ಮಾಡಿದವರಿಗೆ ಮ್ಯಾನ್ಮಾರ ನ ಸೈನ್ಯವು ಬೆಂಬಲಿಸಿದೆ ಎಂದು ಹೇಳಲಾಗಿದೆ.
ಮ್ಯಾನ್ಮಾರ್‌ನ ಸೇನೆಯು ಸ್ಥಳೀಯ ಸಮುದಾಯಗಳನ್ನು ಭಯಭೀತಗೊಳಿಸುವ ಕೆಲಸವನ್ನು ಮತಾಂಧ ಮುಸಲ್ಮಾನರಿಗೆ ವಹಿಸಿದೆ. ನವೆಂಬರ್ 2023 ರಿಂದ ಮ್ಯಾನ್ಮಾರ್ ಸೇನೆಯು ‘ಅರಾಕನ್ ಆರ್ಮಿ’ ವಿರುದ್ಧ ಹೋರಾಡುತ್ತಿದೆ. ಮ್ಯಾನ್ಮಾರ್ ಸೇನೆಯು ‘ಅರಕಾನ್ ರೋಹಿಂಗ್ಯಾ ಸಾಲ್ವೇಶನ್ ಆರ್ಮಿ’ ಮತ್ತು ‘ಅರಾಕನ್ ರೋಹಿಂಗ್ಯಾ ಆರ್ಮಿ’ಗೆ ‘ಅರಾಕನ್ ಆರ್ಮಿ’ ವಿರುದ್ಧ ಹೋರಾಡಲು ಶಸ್ತ್ರಾಸ್ತ್ರ ಮತ್ತು ಮಿಲಿಟರಿ ತರಬೇತಿಯನ್ನು ನೀಡಿದೆ. ರೋಹಿಂಗ್ಯಾ ಭಯೋತ್ಪಾದಕರು ಮನೆಗಳನ್ನು ಲೂಟಿ ಮಾಡುವುದಲ್ಲದೆ, ಜನರನ್ನು ಅಪಹರಿಸಿ ಅವರ ಮನೆಗಳನ್ನು ಸುಡುತ್ತಿದ್ದಾರೆ.
ಸಂಪಾದಕೀಯ ನಿಲುವುಈ ಹಿಂದೂಗಳ ರಕ್ಷಣೆಗಾಗಿ ಭಾರತ ಸರ್ಕಾರವು ಮ್ಯಾನ್ಮಾರ್ ಸರ್ಕಾರದ ಜೊತೆ ಮಾತುಕತೆ ನಡೆಸಬೇಕೆಂದು ಧರ್ಮಾಭಿಮಾನಿ ಹಿಂದೂಗಳಿಗೆ ಅನಿಸುತ್ತಿದೆ ! |