ಬಾಲಸೋರ್‌ನಲ್ಲಿ (ಒಡಿಶಾ) ಹನುಮ ಜಯಂತಿಯಂದು ನಡೆದ ಮೆರವಣಿಗೆಯ ಮೇಲೆ ಮತಾಂಧ ಮುಸ್ಲಿಮರಿಂದ ಕಲ್ಲು ತೂರಾಟ !

  • 4 ಜನರಿಗೆ ಗಾಯ

  • ಪೊಲೀಸ್ ವಾಹನಗಳ ಧ್ವಂಸ

  • ಕಳೆದ ವರ್ಷವೂ ದಾಳಿ ನಡೆದಿತ್ತು

ಬಾಲಸೋರ್ (ಒಡಿಶಾ) – ಏಪ್ರಿಲ್ 14 ರಂದು, ಹನುಮ ಜಯಂತಿಯ ಪೂರ್ವಭಾವಿಯಾಗಿ ತೆಗೆದ ಮೆರವಣಿಗೆಯ ಮೇಲೆ ಮತಾಂಧ ಮುಸ್ಲಿಮರು ಕಲ್ಲು ತೂರಾಟ ಮಾಡಿದ್ದರು. ಕಲ್ಲು ತೂರಾಟದ ನಂತರ ಎರಡೂ ಕಡೆಯವರ ನಡುವೆ ಚಕಮಕಿ ನಡೆದಿದೆ ಎನ್ನಲಾಗಿದೆ. ಆ ಸಮಯದಲ್ಲಿ 4 ಮಂದಿ ಗಾಯಗೊಂಡಿದ್ದಾರೆ. ಪೊಲೀಸ್ ವಾಹನಗಳಿಗೂ ಹಾನಿಯಾಗಿದೆ. ಸದ್ಯ, ಪರಿಸ್ಥಿತಿ ಹತೋಟಿಗೆ ತರಲು ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ. ರೆಮುನಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಕಳೆದ ವರ್ಷವೂ ಇಲ್ಲಿ ಮೆರವಣಿಗೆ ಮೇಲೆ ಇದೇ ರೀತಿಯ ದಾಳಿ ನಡೆದಿತ್ತು.

ಗಣಿಪುರ ಗ್ರಾಮದಿಂದ ಕನಕದುರ್ಗ ದೇವಸ್ಥಾನದ ಕಡೆಗೆ ಮೆರವಣಿಗೆ ಆರಂಭವಾಗಿತ್ತು. ರೆಮುನಾದಲ್ಲಿ ಮೆರವಣಿಗೆಯ ಮೇಲೆ ಇದ್ದಕ್ಕಿದ್ದಂತೆ ಕಲ್ಲು ತೂರಾಟ ಪ್ರಾರಂಭವಾಯಿತು. ಹೀಗಾಗಿ ಇಲ್ಲಿ ಕಾಲ್ತುಳಿತದಂತಹ ಪರಿಸ್ಥಿತಿ ನಿರ್ಮಾಣವಾಯಿತು. ಇದಾದ ನಂತರ ಎರಡೂ ಕಡೆಯವರು ಘರ್ಷಣೆ ನಡೆಸಿದ್ದು, ಸ್ಥಳದಲ್ಲಿದ್ದ ಆಸ್ತಿಪಾಸ್ತಿಗೆ ಹಾನಿಯಾಗಿದೆ. ಪರಿಸ್ಥಿತಿಯನ್ನು ಹತೋಟಿಗೆ ತರಲು ಪೊಲೀಸರು ಆಗಮಿಸಿದಾಗ ಮತಾಂಧರು ಅವರ ಮೇಲೂ ಕಲ್ಲು ತೂರಾಟ ನಡೆಸಿದರು. ಈ ವೇಳೆ ಪೊಲೀಸ್ ವರಿಷ್ಠಾಧಿಕಾರಿ ಸಾಗರಿಕಾ ನಾಥ್ ಅವರ ಕಾರಿನ ಗಾಜುಗಳು ಒಡೆದಿವೆ. ಇದಲ್ಲದೇ ಪೊಲೀಸರೊಬ್ಬರ ಮೊಬೈಲ್ ಸೆಟ್ ಒಡೆದು ಹಾಕಲಾಗಿದೆ.

ಒಡಿಶಾದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ಸಂಜಯ್ ಕುಮಾರ್ ಪ್ರಕಾರ, ಮೆರವಣಿಗೆಯ ಸಮಯದಲ್ಲಿ ಸಂಗೀತದ ಧ್ವನಿಯನ್ನು ಕಡಿಮೆ ಮಾಡುವ ಬಗ್ಗೆ ವಿವಾದವು ಪ್ರಾರಂಭವಾಯಿತು ಎಂದು ಹೇಳಿದ್ದಾರೆ.

ಸಂಪಾದಕೀಯ ನಿಲುವು

ಒಡಿಶಾದಲ್ಲಿ ಹಿಂದೂ ಬಹುಸಂಖ್ಯಾತವಾಗಿರುವಾಗ, ಅಲ್ಪಸಂಖ್ಯಾತ ಮತಾಂಧ ಮುಸ್ಲಿಮರು ಪ್ರತಿವರ್ಷ ಇಂತಹ ದಾಳಿಗಳನ್ನು ನಡೆಸಲು ಧೈರ್ಯ ಮಾಡುತ್ತಾರೆ, ಅಂದರೆ ಹಿಂದೂಗಳು ಮತ್ತು ಪೊಲೀಸರು ನಿಷ್ಕ್ರಿಯರಾಗಿದ್ದಾರೆ ಮತ್ತು ನಿದ್ರಾಹೀನರಾಗಿದ್ದಾರೆ ಎಂಬುದು ಗಮನಕ್ಕೆ ಬರುತ್ತದೆ !