ದೇಶ ಆರ್ಥಿಕ ಪ್ರಗತಿ ಸಾಧಿಸುತ್ತಿದ್ದರೂ ಬಡತನವೇ ದೊಡ್ಡ ಸವಾಲು !

ಭಾರತೀಯ ರಿಸರ್ವ್ ಬ್ಯಾಂಕ್ ನ ಮಾಜಿ ಗವರ್ನರ್ ಡಿ.ಸುಬ್ಬರಾವ್ ಅವರ ದಾವೆ(ಹೇಳಿಕೆ) !

ಡಿ.ಸುಬ್ಬರಾವ್

ಮುಂಬೈ – ಭಾರತವು ಪ್ರಸ್ತುತ ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಿದೆ; ಆದರೆ ತಲಾ ಆದಾಯ 2 ಸಾವಿರದ 600 ಡಾಲರ್ (2 ಲಕ್ಷ 17 ಸಾವಿರ ರೂಪಾಯಿ) ಮಾತ್ರವಾಗಿದೆ. ಇದರಲ್ಲಿ ಅರ್ಥ ಮಾಡಿಕೊಳ್ಳಬೇಕಾದ ವಿಷಯವೆಂದರೆ ಆರ್ಥಿಕತೆಯ ಗಾತ್ರ ಮತ್ತು ಬೆಳವಣಿಗೆ ಎರಡು ವಿಭಿನ್ನ ವಿಷಯಗಳಾಗಿವೆ, ಹಾಗಾಗಿ ಸಂಪೂರ್ಣ ಚಿತ್ರಣ ಬದಲಾಗುತ್ತದೆ. ತಲಾ ಆದಾಯವನ್ನು ಗಮನಿಸಿದರೆ ನಾವು ವಿಶ್ವದಲ್ಲಿ 139ನೇ ಸ್ಥಾನದಲ್ಲಿದ್ದೇವೆ. ಅಲ್ಲದೆ, ನಮ್ಮ ತಲಾ ಆದಾಯವು ‘ಬ್ರಿಕ್ಸ್’ (ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ) ಮತ್ತು -ಜಿ_20( 20 ದೇಶಗಳ ಸಂಘಟನೆ)ದೇಶಗಳಿಗೆ ಹೋಲಿಸಿದರೆ ಅತ್ಯಂತ ಕಡಿಮೆ ಇದೆ. ಈ ಅಂಕಿಅಂಶಗಳಿಂದ ದೇಶವು ಆರ್ಥಿಕ ಪ್ರಗತಿಯನ್ನು ಸಾಧಿಸುತ್ತಿದೆ ಎಂದು ನಾವು ತಿಳಿದುಕೊಳ್ಳಬಹುದು; ಆದರೆ ಭಾರತದಲ್ಲಿ ಬಡತನವು ಒಂದು ದೊಡ್ಡ ಸವಾಲಾಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್‌ನ ಮಾಜಿ ಗವರ್ನರ್ ಡಿ. ಸುಬ್ಬರಾವ್ ಹೇಳಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಅವರು ಮಾತನಾಡುತ್ತಿದ್ದರು.

ಸುಬ್ಬರಾವ್ ಮಾತನಾಡಿ, ಒಂದು ದೇಶ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲು 4 ಅಂಶಗಳ ಅವಶ್ಯಕತೆ ಇರುತ್ತದೆ. ಕಾನೂನು ಸುವ್ಯವಸ್ಥೆ, ಬಲವಾದ (ಸಶಕ್ತ)ರಾಜ್ಯ, ಹೊಣೆಗಾರಿಕೆ ಮತ್ತು ಸ್ವತಂತ್ರ ಸಂಸ್ಥೆಗಳು ಮಹತ್ವದ್ದಾಗಿವೆ. ಅಭಿವೃದ್ಧಿ ಹೊಂದಿದ ದೇಶವಾಗುವ ಪಯಣ ಸುಲಭವಲ್ಲ, ಅದಕ್ಕಾಗಿ ಆರ್ಥಿಕ ಪ್ರಗತಿಯೊಂದಿಗೆ ಸಾಮಾಜಿಕ ಅಭಿವೃದ್ಧಿಗೆ ಕೂಡ ಸಂಪೂರ್ಣ ಗಮನ ನೀಡಬೇಕಿದೆ. ಶ್ರೀಮಂತ ದೇಶ ಎಂದರೆ ಅಭಿವೃದ್ಧಿ ಹೊಂದಿದ ರಾಷ್ಟ್ರ ಎಂದು ಅರ್ಥವಲ್ಲ. ಉದಾಹರಣೆಗೆ ಸೌದಿ ಅರೇಬಿಯಾ ಎಂದು ಅವರು ಹೇಳಿದರು.