Canada Indian Student Murder : ಕೆನಡಾದಲ್ಲಿ ಭಾರತೀಯ ವಿದ್ಯಾರ್ಥಿಯ ಮೇಲೆ ಗುಂಡು ಹಾರಿಸಿ ಕೊಲೆ

ಚಿರಾಗ ಆಂಟಿಲ

ವ್ಯಾಂಕೋವರ್ (ಕೆನಡಾ) – ಇಲ್ಲಿ ಏಪ್ರಿಲ್ 12 ರಂದು ಚಿರಾಗ ಆಂಟಿಲ ಹೆಸರಿನ ವಿದ್ಯಾರ್ಥಿಯನ್ನು ಗುಂಡಿಕ್ಕಿ ಕೊಲ್ಲಲಾಯಿತು. ಆತನ ಶವ ಕಾರಿನಲ್ಲಿ ಕಂಡು ಬಂದಿತು. ಈ ಪ್ರಕರಣದಲ್ಲಿ ಇದುವರೆಗೂ ಯಾರನ್ನೂ ಬಂಧಿಸಲಾಗಿಲ್ಲ. ಚಿರಾಗನ ಕೊಲೆಯಾಗಿದೆಯೋ ಅಥವಾ ಆತ್ಮಹತ್ಯೆ ಯಾಗಿದೆಯೋ? ಎನ್ನುವ ವಿಷಯದಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಚಿರಾಗ್ ಕುಟುಂಬವು ಶವವನ್ನು ಮರಳಿ ತರುವಂತೆ ಭಾರತ ಸರಕಾರಕ್ಕೆ ಮನವಿ ಮಾಡಿದೆ. ಚಿರಾಗ ಅಂಟಿಲ್ ಹರಿಯಾಣದ ಸೋನಿಪತ್ ನಿವಾಸಿಯಾಗಿದ್ದಾನೆ.

ಸಂಪಾದಕೀಯ ನಿಲುವು

ಕೆನಡಾದಲ್ಲಿ ಭಾರತೀಯ ನಾಗರಿಕರು ಈಗ ಅಸುರಕ್ಷಿತರಾಗಿದ್ದಾರೆ. ಈ ಬಗ್ಗೆ ಭಾರತದ್ವೇಷಿ ಮತ್ತು ಖಲಿಸ್ತಾನ ಪ್ರೇಮಿ ಟ್ರುಡೊ ಸರಕಾರವು ಏನಾದರೂ ಕ್ರಮ ಕೈಕೊಳ್ಳಬಹುದುಎನ್ನುವ ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಆದ್ದರಿಂದ ಭಾರತೀಯರು ಕೆನಡಾಕ್ಕೆ ಹೋಗುವುದನ್ನು ತಪ್ಪಿಸುವುದೇ ಸೂಕ್ತವಾಗಿರಲಿದೆ !