ಸೌದಿ ಅರೇಬಿಯಾದಲ್ಲಿ ರಹೀಂನ ಗಲ್ಲು ಶಿಕ್ಷೆ ರದ್ದುಗೊಳಿಸಲು ಕೇರಳ ನಿವಾಸಿಗಳಿಂದ 34 ಕೋಟಿ ಮೊತ್ತ ಸಂಗ್ರಹ!

ತಿರುವನಂತಪುರಂ (ಕೇರಳ) – ರಾಜ್ಯದ ಕೋಝಿಕೋಡ ನಿವಾಸಿ ಅಬ್ದುಲ ರಹೀಮ ಹೆಸರಿನ ವ್ಯಕ್ತಿಗೆ ಸೌದಿ ಅರೇಬಿಯಾದ ಸರ್ವೋಚ್ಚ ನ್ಯಾಯಾಲಯವು ಒಂದು ಪ್ರಕರಣದಲ್ಲಿ ಗಲ್ಲು ಶಿಕ್ಷೆ ವಿಧಿಸಿತ್ತು. ಅದನ್ನು ರದ್ದುಗೊಳಿಸಲು ಕೇರಳ ಮತ್ತು ಪ್ರಪಂಚದಾದ್ಯಂತದ ಕೇರಳಿಗರು ಒಟ್ಟು 34 ಕೋಟಿ ರೂಪಾಯಿಗಳನ್ನು ಚಂದಾ ಜಮಾ ಮಾಡಿದ್ದಾರೆ.

1. ರಹೀಮ್ 18 ವರ್ಷಗಳಿಂದ ಸೌದಿ ಅರೇಬಿಯಾದಲ್ಲಿ ಜೈಲಿನಲ್ಲಿದ್ದಾನೆ. 2006 ರಲ್ಲಿ, ರಹೀಂನ ವಾಹನದಲ್ಲಿ 15 ವರ್ಷದ ಹುಡುಗನ ಶವ ಪತ್ತೆಯಾಗಿತ್ತು, ಅತನ ಸಾವಿಗೆ ಇವನನ್ನೇ ಹೊಣೆಗಾರರನ್ನಾಗಿ ಮಾಡಲಾಗಿತ್ತು. ಬಳಿಕ 2018ರಲ್ಲಿ, ಸೌದಿ ಅರೇಬಿಯಾದ ನ್ಯಾಯಾಲಯವು ಅವನಿಗೆ ಗಲ್ಲು ಶಿಕ್ಷೆ ವಿಧಿಸಿತ್ತು ಹಾಗೂ ಅಲ್ಲಿಯ ಸರ್ವೋಚ್ಚ ನ್ಯಾಯಾಲಯವೂ ಈ ಶಿಕ್ಷೆಯನ್ನು ಎತ್ತಿಹಿಡಿಯಿತು.

2. ಕಳೆದ ವರ್ಷ, ಅವನ ಕುಟುಂಬ ಸದಸ್ಯರು ಬಿಡುಗಡೆಯ ಬದಲಿಗೆ 34 ಕೋಟಿ ರೂಪಾಯಿಗಳನ್ನು ‘ಬ್ಲಡ್ ಮನಿ’ (ಆರೋಪಿಯ ಶಿಕ್ಷೆಯನ್ನು ರದ್ದುಗೊಳಿಸಲು ಸಂತ್ರಸ್ತನ ಕುಟುಂಬ ಸದಸ್ಯರಿಗೆ ನೀಡಲಾಗಿರುವ) ಮೊತ್ತವನ್ನು ನೀಡುವ ಸಿದ್ಧತೆಯನ್ನು ತೋರಿಸಿದರು. ಈ ಮೊತ್ತವನ್ನು ನೀಡಲು ಮಧ್ಯಸ್ಥರು ಎಪ್ರಿಲ್ 16 ರ ಗಡುವನ್ನು ನೀಡಿದ್ದರು.

3. ಸೌದಿ ಅರೇಬಿಯಾದಲ್ಲಿ, ಗಲ್ಲುಶಿಕ್ಷೆಯಿಂದ ಪಾರಾಗಬೇಕಾದರೆ, ಆರೋಪಿಯು ‘ಬ್ಲಡ್ ಮನಿ’ ಎಂಬ ಪರ್ಯಾಯವು ಆರೋಪಿಯ ಎದುರಿಗೆ ಇರುತ್ತದೆ. ಮೃತ ವ್ಯಕ್ತಿಯ ಕುಟುಂಬದವರು ‘ಬ್ಲಡ ಮನಿ’ ಮೊತ್ತವನ್ನು ಸ್ವೀಕರಿಸಿದರೆ, ಆರೋಪಿಯನ್ನು ಖುಲಾಸೆಗೊಳಿಸಲಾಗುತ್ತದೆ. ಆರೋಪಿಯನ್ನು ಕ್ಷಮಿಸುವ ಬದಲಿನಲ್ಲಿ ಈ ಮೊತ್ತವನ್ನು ನೀಡಲಾಗುತ್ತದೆ.

4. ಕಳೆದ ವಾರದವರೆಗೆ ಬರೋಬ್ಬರಿ 5 ಕೋಟಿ ಮಾತ್ರ ಜಮಾ ಮಾಡಲಾಗಿತ್ತು. ಇದಾದ ಬಳಿಕ ಎಲ್ಲೆಡೆ ಜಾಗೃತಿ ಮೂಡಿಸಿ 34 ಕೋಟಿ ರೂಪಾಯಿಗಳನ್ನು ಸಂಗ್ರಹಿಸಲಾಗಿದೆ. ಇದರಲ್ಲಿ ವಿವಿಧ ರಾಜಕಾರಣಿಗಳು, ಗಣ್ಯರು ಮತ್ತು ವಿದೇಶದಲ್ಲಿ ನೆಲೆಸಿರುವ ಕೇರಳದ ಜನರು ಸಹಭಾಗಿತ್ವವಿದೆ.

‘ಯಾವುದೇ ಧಾರ್ಮಿಕ ಸಿದ್ಧಾಂತವನ್ನು ನಮ್ಮ ಸಹೋದರತ್ವದಲ್ಲಿ ಬಿರುಕು ಮೂಡಿಸಲು ಸಾಧ್ಯವಿಲ್ಲವಂತೆ !’ – ಕೇರಳ ಮುಖ್ಯಮಂತ್ರಿ ವಿಜಯನ

ರಹೀಮನ ಬದಲು ಹಿಂದೂಗಳ ಸಂದರ್ಭದಲ್ಲಿ ಅಂತಹ ಘಟನೆ ಸಂಭವಿಸಿದ್ದರೆ, ಅಂತಹ ಸಹೋದರತ್ವವನ್ನು ತೋರಿಸುತ್ತಿದ್ದರೇ ? ಎನ್ನುವುದು ಮೊದಲ ಪ್ರಶ್ನೆ ! ‘ಹಿಂದೂ ದ್ವೇಷ ಮತ್ತು ಮುಸ್ಲಿಂ ಪ್ರೇಮ’ ಎಂಬುದು ಭಾರತೀಯ ಕಮ್ಯುನಿಸಂನ ವ್ಯಾಖ್ಯಾನ ಇರುವುದರಿಂದ ವಿಜಯನ್ ಇವರು ಸಂತ್ರಸ್ತ ಹಿಂದೂಗಳ ರಕ್ಷಣೆಗಾಗಿ ಮುಸ್ಲಿಮರಲ್ಲಿ ಕರೆ ನೀಡುತ್ತಿದ್ದರೆ? ಎಂಬುದು ಇನ್ನೊಂದು ಪ್ರಶ್ನೆ !

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ ಇವರು ಫೇಸ್‌ಬುಕ್ ಮೂಲಕ ಸಹಾಯಕ್ಕಾಗಿ ಮನವಿ ಮಾಡಿದ್ದಾರೆ ಮತ್ತು ಅಬ್ದುಲ್ ರಹೀಮನ ಬಿಡುಗಡೆಗಾಗಿ ಜಗತ್ತಿನಾದ್ಯಂತವಿರುವ ಕೇರಳ ನಾಗರಿಕರು ಒಂದುಗೂಡಿದರು. ಕೇರಳದ ಜನರು ತೆಗೆದುಕೊಂಡ ಕ್ರಮ ಪ್ರೀತಿಯ ಪರಿಪೂರ್ಣ ಉದಾಹರಣೆಯಾಗಿದೆ. ಕೇರಳದಲ್ಲಿ ಸಹೋದರತ್ವ ಬಲವಾಗಿ ಬೇರೂರಿದೆ ಎಂಬುದನ್ನು ಇದು ತೋರಿಸುತ್ತದೆ. ಯಾವುದೇ ಧಾರ್ಮಿಕ ಸಿದ್ಧಾಂತವು ನಮ್ಮ ಸಹೋದರತ್ವವನ್ನು ಛಿದ್ರಗೊಳಿಸಲು ಸಾಧ್ಯವಿಲ್ಲ ಎಂದು ಹೇಳಿದರು!