ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಂದ ಮಾರ್ಕಿಸ್ಟ ಕಮ್ಯುನಿಸ್ಟ ಪಕ್ಷದ ಮೇಲೆ ಟೀಕೆ !
ಬಾಡಮೇರ (ರಾಜಸ್ಥಾನ) – ದೇಶದಲ್ಲಿ ಪರಮಾಣು ಶಸ್ತ್ರಾಸ್ತ್ರಗಳನ್ನು ನಾಶಪಡಿಸುವ ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಪಕ್ಷದ ಪ್ರಣಾಳಿಕೆಯನ್ನು ಇಲ್ಲಿ ಪ್ರಚಾರ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಟೀಕಿಸಿದರು. ಭಾರತದ 2 ನೆರೆಯ ರಾಷ್ಟ್ರಗಳು (ಪಾಕ್ ಮತ್ತು ಚೀನಾ) ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿದ್ದು, ಪ್ರತಿಪಕ್ಷಗಳು ಭಾರತವನ್ನು ಶಕ್ತಿಹೀನಗೊಳಿಸಲು ಬಯಸುತ್ತಿವೆ ಎಂದು ಪ್ರಧಾನಿ ಮೋದಿ ಹೇಳಿದರು. ಅದರಲ್ಲೂ ಕಮ್ಯುನಿಸ್ಟ್ ಪಕ್ಷ. ತನ್ನ ಪ್ರಣಾಳಿಕೆಯಲ್ಲಿ, ‘ಪರಮಾಣು ಮತ್ತು ಇತರ ಶಸ್ತ್ರಾಸ್ತ್ರಗಳನ್ನು ಒಳಗೊಂಡಂತೆ ರಾಸಾಯನಿಕ ಮತ್ತು ಜೈವಿಕ ಶಸ್ತ್ರಾಸ್ತ್ರಗಳನ್ನು ಸಂಪೂರ್ಣವಾಗಿ ನಾಶಗೊಳಿಸಲಾಗುವುದು’ ಎಂದು ಈ ಪಕ್ಷವು ಪ್ರತಿಜ್ಞೆ ಮಾಡಿದೆ. ನಾನು ಕಾಂಗ್ರೆಸ್ ಅನ್ನು ಕೇಳಲು ಬಯಸುತ್ತೇನೆ, ಅದರ ಮಿತ್ರಪಕ್ಷಗಳು ಯಾರ ಆದೇಶದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿವೆ ? ಇದು ಯಾವ ರೀತಿಯ ಮೈತ್ರಿ ? ಭಾರತ ಶಕ್ತಿಹೀನವೇ ? ಒಂದೆಡೆ ನಮ್ಮ ಸರಕಾರ ಭಾರತವನ್ನು ಬಲಿಷ್ಠ ರಾಷ್ಟ್ರವನ್ನಾಗಿ ಮಾಡಲು ಕೆಲಸ ಮಾಡುತ್ತಿದ್ದರೆ, ಇನ್ನೊಂದೆಡೆ ‘ಇಂಡಿ’ ಮೈತ್ರಿಕೂಟ ಭಾರತವನ್ನು ದುರ್ಬಲ ರಾಷ್ಟ್ರವನ್ನಾಗಿ ಮಾಡುವ ಯೋಜನೆಗಳನ್ನು ಪ್ರಕಟಿಸಿದೆ.
एक तरफ मोदी भारत को शक्तिशाली राष्ट्र बनाने में जुटा है, वहीं इंडी गठबंधन देश को शक्तिहीन करने पर आमादा है। pic.twitter.com/VnAXV8f4OO
— Narendra Modi (@narendramodi) April 12, 2024
ಮಾರ್ಕ್ಸ್‌ವಾದಿ ಕಮ್ಯುನಿಸ್ಟ ಪಕ್ಷದ ಪ್ರಣಾಳಿಕೆಯಲ್ಲಿ ಭಾರತ ವಿರೋಧಿ ಆಶ್ವಾಸನೆ !
1. ಭಾರತ, ಅಮೇರಿಕಾ, ಜಪಾನ ಮತ್ತು ಆಸ್ಟ್ರೇಲಿಯಾ ನಡುವಿನ ‘ಕ್ವಾಡ್’ ಗುಂಪಿನಿಂದ ಭಾರತವನ್ನು ಹೊರಗಿಡಲಿದೆ.
2. ಭಾರತೀಯ ಉಪಖಂಡದಲ್ಲಿರುವ ಎಲ್ಲಾ ಸೇನಾ ಕೇಂದ್ರಗಳನ್ನು ಸ್ಥಗಿತಗೊಳಿಸಲಾಗುವುದು. ವಿಶೇಷವಾಗಿ ಹಿಂದೂ ಮಹಾಸಾಗರದ ಡಿಯಾಗೋ ಕ್ಯಾರಕಾಸ್‌ನಲ್ಲಿರುವ ಅಮೇರಿಕನ್ ಮಿಲಿಟರಿ ನೆಲೆ.
3. ಭಾರತದಲ್ಲಿರುವ ಎಲ್ಲಾ ರೀತಿಯ ಪರಮಾಣು ಶಸ್ತ್ರಾಸ್ತ್ರಗಳನ್ನು ನಷ್ಟಗೊಳಿಸಲಾಗುವುದು. ಹಾಗೆಯೇ ಭಾರತದಿಂದ ಎಲ್ಲ ರೀತಿಯ ಸಾಮೂಹಿಕ ವಿನಾಶಕಾರಿ ಶಸ್ತ್ರಾಸ್ತ್ರಗಳು, ರಾಸಾಯನಿಕ ಶಸ್ತ್ರಾಸ್ತ್ರಗಳು ಮತ್ತು ಜೈವಿಕ ಶಸ್ತ್ರಾಸ್ತ್ರಗಳನ್ನು ನಷ್ಟಗೊಳಿಸಲಾಗುವುದು.
4. ಬಾಹ್ಯಾಕಾಶ ಕೇಂದ್ರಗಳು (ಸ್ಪೇಸ ಸ್ಟೇಶನ) ಮತ್ತು ಧ್ರುವ ಪ್ರದೇಶಗಳ ಮಿಲಿಟರೀಕರಣವನ್ನು ವಿರೋಧಿಸುತ್ತದೆ.
5. ದೇಶದ ಸಾರ್ವಭೌಮತ್ವವನ್ನು ಉಲ್ಲಂಘಿಸುವ ಮತ್ತು ಹಿತಸಂಬಂಧಗಳ ಮೇಲೆ ಪರಿಣಾಮ ಬೀಡುವ ಅಮೇರಿಕೆಯೊಂದಿಗಿನ ಎಲ್ಲ ರೀತಿಯ ಕಾರ್ಯತಂತ್ರದ ಸಂಬಂಧಗಳನ್ನು ಕೊನೆಗೊಳಿಸಲಾಗುವುದು.
6. ಇಸ್ರೇಲ್‌ನೊಂದಿಗೆ ಎಲ್ಲಾ ರೀತಿಯ ಯುದ್ಧ ಕಾರ್ಯತಂತ್ರ, ಭದ್ರತೆ ಮತ್ತು ಮಿಲಿಟರಿ ಸಂಬಂಧಗಳನ್ನು ಕೊನೆಗೊಳಿಸಲಾಗುವುದು.
7. ವಿಶ್ವಸಂಸ್ಥೆಯಲ್ಲಿ ಇಸ್ರೇಲ್ ಮೇಲೆ ನಿರ್ಬಂಧಗಳನ್ನು ಹೇರಲು ಒತ್ತಾಯಿಸಲಾಗುವುದು.
8. ಗಡಿ ವಿವಾದವನ್ನು ಬಗೆಹರಿಸಲು ಚೀನಾ ಮಾತುಕತೆ ನಡೆಸಲಿದೆ ಮತ್ತು ಎಲ್ಲಾ ರೀತಿಯ ಸಂಬಂಧಗಳನ್ನು ಮುಂದುವರಿಸುತ್ತದೆ.
9. ಪಾಕಿಸ್ತಾನದೊಂದಿಗೆ ವಿವಾದದಲ್ಲಿರುವ ಎಲ್ಲ ಅಂಶಗಳನ್ನು ಬಗೆಹರಿಸಲು ಚರ್ಚಿಸುತ್ತದೆ.
ಸಂಪಾದಕೀಯ ನಿಲುವುಈ ರೀತಿಯ ದೇಶದ್ರೋಹದ ಆಶ್ವಾಸನೆಯನ್ನು ನೀಡಿ, ಜನರಲ್ಲಿ ಮತ ಯಾಚಿಸುವ ಪಕ್ಷವನ್ನು ನಿರ್ಬಂಧಿಸಿ ಅವರ ನಾಯಕರನ್ನು ಜೈಲಿಗೆ ಹಾಕುವಂತೆ ಜನತೆಯು ಇಲ್ಲಿಯವರೆಗೆ ಒತ್ತಾಯಿಸುವುದು ಆವಶ್ಯಕವಾಗಿತ್ತು. ಇಂತಹ ಕೋರಿಕೆಯನ್ನು ಇದುವರೆಗೂ ಮಾಡದಿರುವುದು ಭಾರತೀಯರಿಗೆ ನಾಚಿಕೆಗೇಡು ಎನ್ನಬೇಕಾಗುವುದು. |