ಅಯೋಧ್ಯೆ (ಉತ್ತರ ಪ್ರದೇಶ) – ಇಲ್ಲಿನ ಶ್ರೀರಾಮಮಂದಿರಕ್ಕೆ ಮಧ್ಯಪ್ರದೇಶದ ಮಾಜಿ ಲೆಕ್ಕ ಪರಿಶೋಧಕ ಅಧಿಕಾರಿ ಸುಬ್ರಹ್ಮಣ್ಯಂ ಲಕ್ಷ್ಮೀ ನಾರಾಯಣ ಅವರು ಬಂಗಾರದ ರಾಮಚರಿತಮಾನಸವನ್ನು ಉಡುಗೋರೆಯಾಗಿ ನೀಡಿದ್ದಾರೆ. ಯುಗಾದಿಯ ದಿನದಂದು ರಾಮಚರಿತ ಮಾನಸವನ್ನು ದೇವಸ್ಥಾನದ ಗರ್ಭಗುಡಿಯಲ್ಲಿ ಸ್ಥಾಪಿಸಲಾಯಿತು. ಭಕ್ತರು ಅದರ ದರ್ಶನವನ್ನು ಪಡೆಯಲಿದ್ದಾರೆ. ಈ ತಾಮ್ರದ ತಗಡಿನ ಮೇಲಿನ ರಾಮಚರಿತಮಾನಸದ ಅಕ್ಷರಗಳು ಬಂಗಾರದ್ದಾಗಿದೆ. ಈ ರಾಮಚರಿತಮಾನಸ 1 ಸಾವಿರ ಪುಟಗಳನ್ನು ಹೊಂದಿದ್ದು ಇದರ ಬೆಲೆ 5 ಕೋಟಿ ರೂಪಾಯಿಗಳಾಗಿವೆ. ಹಾಗೆಯೇ ಅದರ ತೂಕ 1.5 ಕ್ವಿಂಟಲ್ ಆಗಿದೆ. ಈ ರಾಮಚರಿತಮಾನಸಕ್ಕೆ ‘ಅಲ್ಟ್ರಾವಾಯೊಲೆಟ್ ಪ್ರಿಂಟಿಂಗ್’ ತಂತ್ರಜ್ಞಾನವನ್ನು ಉಪಯೋಗಿಸಲಾಗಿದೆ. ಚೆನ್ನೈನ ‘ಬುಮಮಂಡಿ ಬಂಗಾರು ಜ್ಯುವೆಲರ್ಸ್’ ಅವರು ಈ ರಾಮಚರಿತಮಾನಸವನ್ನು ತಯಾರಿಸಿದ್ದಾರೆ. ಇದಕ್ಕಾಗಿ 8 ತಿಂಗಳ ಕಾಲಾವಧಿ ತಗುಲಿದೆ.
An ex-IAS officer donated a Ramcharithmanas scripted in gold to the Shriram mandir in Ayodhya !
रामचरितमानस । जय श्री राम #AyodhyaRamMandir pic.twitter.com/H02m2Msj8p
— Sanatan Prabhat (@SanatanPrabhat) April 12, 2024
ಶ್ರೀರಾಮನವಮಿ ದಿನದಂದು 20 ಗಂಟೆಗಳ ಕಾಲ ದರ್ಶನ ಲಭ್ಯ !
ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಶ್ರೀರಾಮನವಮಿಗೆ ಭಕ್ತರಿಗೆ 20 ಗಂಟೆಗಳ ಕಾಲ ದರ್ಶನ ಸಿಗಲಿದೆ. ಏಪ್ರಿಲ್ 15 ರಿಂದ ಏಪ್ರಿಲ್ 17 ರ ಅವಧಿಯಲ್ಲಿ ಈ ವ್ಯವಸ್ಥೆ ಇರಲಿದೆ. ಅಯೋಧ್ಯೆಯಲ್ಲಿ 100 ಸ್ಥಳಗಳಲ್ಲಿ ಎಲ್.ಇ.ಡಿ. ಸ್ಕ್ರೀನ ಮೇಲೆ ಶ್ರೀರಾಮನವಮಿಯ ನೇರಪ್ರಸಾರವಾಗಲಿದೆ. ಶ್ರೀರಾಮನವಮಿಗೆ ದೊಡ್ಡ ಸಂಖ್ಯೆಯಲ್ಲಿ ಭಕ್ತರು ಇಲ್ಲಿಗೆ ಆಗಮಿಸುವ ಸಾಧ್ಯತೆ ಇದೆ.