Hindu phobia Resolution : ಹಿಂದೂ ದೇವಸ್ಥಾನಗಳ ಮೇಲಿನ ದಾಳಿಯನ್ನು ನಿಷೇಧಿಸಿ ಅಮೇರಿಕಾ ಸಂಸತ್ತಿನಲ್ಲಿ ಠರಾವು !

ವಾಷಿಂಗ್ಟನ್ – ಅಮೇರಿಕದಲ್ಲಿ ಹಿಂದೂ ದೇವಸ್ಥಾನಗಳ ಮೇಲಿನ ದಾಳಿ ಮತ್ತು ಹಿಂದೂ ದ್ವೇಷದ ಘಟನೆಗಳನ್ನು ತೀವ್ರವಾಗಿ ಖಂಡಿಸುವ ನಿರ್ಣಯವನ್ನು ಅಮೇರಿಕದ ಸಂಸತ್ತಿನಲ್ಲಿ ಮಂಡಿಸಲಾಗಿದೆ. ಭಾರತೀಯ ಮೂಲದ ಸಂಸದ ಸದಸ್ಯರಾದ ಶ್ರೀ. ಠಾಣೇದಾರ ಅವರು ಈ ಪ್ರಸ್ತಾವನೆಯನ್ನು ಮಂಡಿಸಿದರು. ಈ ಹಿಂದೆ ಭಾರತೀಯ ಮೂಲದ ಸಂಸದರಾದ ರಾಜಾ ಕೃಷ್ಣಮೂರ್ತಿ, ರೋ ಖನ್ನಾ, ಆಮಿ ಬೇರಾ ಮತ್ತು ಪ್ರಮೀಳಾ ಜಯಪಾಲ ಅವರು ನ್ಯಾಯಾಂಗ ಇಲಾಖೆಗೆ ಪತ್ರ ಬರೆದು ಹಿಂದೂ ದೇವಸ್ಥಾನಗಳ ಮೇಲಿನ ದಾಳಿಯ ತನಿಖೆಯ ಬಗ್ಗೆ ಮಾಹಿತಿ ಕೋರಿದ್ದರು.

ಪ್ರಸ್ತಾವನೆ ಏನೆಂದರೆ,

1. ಅಮೇರಿಕೆಯ ಪ್ರಗತಿಯಲ್ಲಿ ಹಿಂದೂ ಅಮೇರಿಕನ್ ಸಮುದಾಯವು ಗಮನಾರ್ಹ ಕೊಡುಗೆಗಳನ್ನು ನೀಡಿದೆ; ಹೀಗಿರುವಾಗಲೂ ಹಿಂದೂಗಳಿಗೆ ಮಾತ್ರ ಇಂತಹ ಪೂರ್ವಾಗ್ರಹಗಳನ್ನು ಎದುರಿಸಬೇಕಾಗುತ್ತಿದೆ.

2. ‘ಫೆಡರಲ್ ಬ್ಯೂರೊ ಆಫ್ ಇನ್ವೆಸ್ಟಿಗೇಷನ್’ (ಎಫ್‌ಬಿಐ) ವರದಿಯ ಪ್ರಕಾರ, ಅಮೇರಿಕೆಯಲ್ಲಿ ಹಿಂದೂಗಳ ವಿರುದ್ಧ ದ್ವೇಷದ ಅಪರಾಧಗಳು ಮತ್ತು ದೇವಾಲಯಗಳ ಮೇಲೆ ದಾಳಿಯ ಘಟನೆಗಳು ಹೆಚ್ಚಿವೆ.

3. ಅಮೇರಿಕೆಯಲ್ಲಿ 40 ಲಕ್ಷ ಹಿಂದೂಗಳಿದ್ದಾರೆ. ಈ ಸಮುದಾಯವು ಅಮೇರಿಕೆಯ ಆರ್ಥಿಕತೆ ಮತ್ತು ಪ್ರತಿಯೊಂದು ಕೈಗಾರಿಕಾ ವಲಯದ ಅಭಿವೃದ್ಧಿಗೆ ಗಮನಾರ್ಹ ಕೊಡುಗೆಗಳನ್ನು ನೀಡಿದೆ.

4. ನ್ಯೂಯಾರ್ಕ್‌ನಿಂದ ಕ್ಯಾಲಿಫೋರ್ನಿಯಾದವರೆಗೆ ದೇವಸ್ಥಾನಗಳ ಮೇಲೆ ದಾಳಿಯ ಘಟನೆಗಳು ನಡೆದಿವೆ. ಹಾಗಾಗಿ ಅಮೇರಿಕೆದಲ್ಲಿ ನೆಲೆಸಿರುವ ಹಿಂದೂ ಸಮಾಜದಲ್ಲಿ ಭಯದ ವಾತಾವರಣವಿದೆ.