Israel Criticizes America’s Comments : ಗಾಝಾದ ನರಸಂಹಾರದಲ್ಲಿ ಇಸ್ರೇಲಿ ಸೈನ್ಯದ ವಿರುದ್ಧ ಯಾವುದೇ ಪುರಾವೆಗಳಿಲ್ಲ ! – ಅಮೇರಿಕಾ

ವಾಶಿಂಗ್ಟನ (ಅಮೇರಿಕಾ) – ಇಸ್ರೇಲ್ ಮತ್ತು ಹಮಾಸ್ ನಡುವೆ ಯುದ್ಧ ಆರಂಭವಾಗಿ ಅರ್ಧ ವರ್ಷವಾಗಿದೆ. ಇಂತಹದುರಲ್ಲಿಯೇ ಅಮೇರಿಕಾವು ಇಸ್ರೇಲ ಮೇಲೆ ಅಂತರಾಷ್ಟ್ರೀಯ ಸಮುದಾಯದಿಂದ ಮಾಡಲಾಗುತ್ತಿದ್ದ ಟೀಕೆಯನ್ನು ವಿರೋಧಿಸಿದೆ. ಇಸ್ರೇಲ್‌ನಿಂದ ಗಾಝಾದಲ್ಲಿ ನಡೆಯುತ್ತಿರುವ ಕಥಿತ ನರಮೇಧದ ಯಾವುದೇ ಪುರಾವೆಗಳಿಲ್ಲ ಎಂದು ಅಮೇರಿಕಾದ ರಕ್ಷಣಾ ಸಚಿವ ಆಸ್ಟಿನ ಇವರು ಸ್ಪಷ್ಟ ಹೇಳಿಕೆಯನ್ನು ನೀಡಿದ್ದಾರೆ. ಮತ್ತೊಂದೆಡೆ, ಅಮೇರಿಕಾದ ವಿದೇಶಾಂಗ ಸಚಿವ ಆಂಟನಿ ಬ್ಲಿಂಕನ ಇವರು ಅಂತರರಾಷ್ಟ್ರೀಯ ಸಮುದಾಯ ಇಸ್ರೇಲ ಮೇಲೆ ಮಾಡಿರುವ ದಾಳಿಗಾಗಿ ಹಮಾಸ ಅನ್ನು ಹೊಣೆಗಾರರನ್ನಾಗಿ ಮಾಡುವಲ್ಲಿ ಸೋತಿದ್ದಾರೆಂದು ಟೀಕಿಸಿದರು.

(ಸೌಜನ್ಯ – Breaking Points)

ಡೆಮೊಕ್ರೆಟಿಕ ಪಕ್ಷದ ಸಂಸದೆ ಎಲಿಜಬೆತ್ ವಾರೆನ್ ಅವರು ಒಂದು ವಿಡಿಯೋ ಪ್ರಸಾರ ಮಾಡಿ, ಗಾಝಾ ಯುದ್ಧಕ್ಕಾಗಿ ಅಂತರರಾಷ್ಟ್ರೀಯ ನ್ಯಾಯಾಲಯವು ಇಸ್ರೇಲನ್ನು ನರಮೇಧಕ್ಕಾಗಿ ದೋಷಿ ಎಂದು ನಿರ್ಧರಿಸಬೇಕು; ಕಾರಣ ಅದರ ವಿರುದ್ಧ `ಸಾಕಷ್ಟು ಪುರಾವೆ’ ಗಳಿವೆ. ಈ ಹಿನ್ನೆಲೆಯಲ್ಲಿ ಅಮೇರಿಕಾದ ರಕ್ಷಣಾ ಸಚಿವ ಮತ್ತು ವಿದೇಶಾಂಗ ಸಚಿವ ಇವರು ಇಸ್ರೇಲ ಪರವಾಗಿ ನೀಡಿರುವ ಹೇಳಿಕೆಯ ಮಹತ್ವ ಪಡೆದುಕೊಂಡಿದೆ.