Blast plotted from Jail: ರಾಮೇಶ್ವರಂ ಕಫೆ ಸ್ಪೋಟ; ಜೈಲಿನಲ್ಲಿಯೇ ಸಂಚು ರೂಪಿಸಿದ್ದು ಬಹಿರಂಗ !

ಬೆಂಗಳೂರು – ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದಲ್ಲಿ ಮಾಝ ಮುನೀರ್‌ನ ಕೈವಾಡವಿರುವುದು ರಾಷ್ಟ್ರೀಯ ತನಿಖಾ ದಳ (ಎನ್‌ಐಎ)ಯ ತನಿಖೆಯಿಂದ ಸ್ಪಷ್ಟವಾಗಿದೆ. ರಾಜ್ಯದಲ್ಲಿನ ಪರಪ್ಪನ ಅಗ್ರಹಾರ (ಜೈಲ್)ದಲ್ಲಿರುವ ಮಾಝ ಮುನೀರ್ ನನ್ನು ಎನ್.ಐ.ಎ. ಅಧಿಕಾರಿಗಳು ವಿಚಾರಣೆಗಾಗಿ ವಶಕ್ಕೆ ಪಡೆದು 7 ದಿನಗಳ ಕಾಲ ವಿಚಾರಣೆ ನಡೆಸಿದ್ದರು. ಜೈಲಿನಲ್ಲಿ ದಾಳಿ ನಡೆಸಿದ ನಂತರ ಆತನ ಬಳಿ ಕೆಲವು ದಾಖಲೆಗಳು ಸಿಕ್ಕಿವೆ. ಪ್ರಕರಣಕ್ಕೆ ಸಂಬಂಧಿಸಿದ ಕೆಲವು ಎಳೆಗಳು ಅದರಲ್ಲಿ ಸಿಕ್ಕಿರುವುದರಿಂದ, ಈ ಸ್ಫೋಟದಲ್ಲಿ ಅವನನ್ನು ಮೊದಲ ಆರೋಪಿಯನ್ನಾಗಿ ಮಾಡಲಾಗಿದೆ. ಮಾಝ ಮುನೀರ್ ಜೈಲಿನಲ್ಲಿ ಇದ್ದುಕೊಂಡೇ ಸ್ಫೋಟದ ಯೋಜನೆ ರೂಪಿಸಿದ್ದ ಎಂದು ಹೇಳಲಾಗಿದೆ.

ಸಂಪಾದಕೀಯ ನಿಲುವು

ಅಪರಾಧಿಯನ್ನು ಜೈಲಿನಲ್ಲಿ ಇಡುತ್ತಾರೆ, ‘ಅವನಿಗೆ ಅವನ ಅಪರಾಧದ ಶಿಕ್ಷೆ ಸಿಗಬೇಕು, ಅವನಿಗೆ ಅದರ ಪಶ್ಚಾತ್ತಾಪ ಆಗಬೇಕು; ಎಂಬುದಕ್ಕಾಗಿ ಜೈಲಿನಲ್ಲಿಡುತ್ತಾರೆ, ಆದರೆ ಮತಾಂಧ ಮುಸಲ್ಮಾನ ಆರೋಪಿಗಳ ಸಂದರ್ಭದಲ್ಲಿ ಹೀಗೆ ಆಗುವುದಿಲ್ಲ. ಅದಕ್ಕೆ ತದ್ವಿರುದ್ಧವಾಗಿ ಜೈಲಲ್ಲಿದ್ದುಕೊಂಡೇ ಅಪರಾಧ ಕೃತ್ಯಗಳನ್ನು ಮಾಡಲು ಪ್ರಯತ್ನಿಸುತ್ತಾರೆ, ಎನ್ನುವುದನ್ನು ಈ ಘಟನೆ ತೋರಿಸುತ್ತದೆ ! ಪೊಲೀಸರು ಮತ್ತು ಸರಕಾರ ಈಗಲೇ ಇದರ ಯೋಚನೆ ಮಾಡಬೇಕು !