ಮಹಾರಾಷ್ಟ್ರದ 150 ಪೈಕಿ 40 ಟ್ರಾಮಾ ಕೇರ್ ಸೆಂಟರ ಮುಚ್ಚಲಾಗಿದೆಯೆಂದು ‘ಸುರಾಜ್ಯ ಅಭಿಯಾನ’ ಮಾಹಿತಿ ಹಕ್ಕುಗಳಿಂದ ಬಹಿರಂಗ !

ರಸ್ತೆ ಅಪಘಾತಗಳಲ್ಲಿ ಸಾವಿನ ಸಂಖ್ಯೆಯನ್ನು ಕಡಿಮೆ ಮಾಡಲು ‘ಟ್ರಾಮಾ ಕೇರ್ ಸೆಂಟರ್’ ನ ನಿರ್ಲಕ್ಷ್ಯ !

ಮುಂಬಯಿ – ರಸ್ತೆ ಅಪಘಾತಗಳಲ್ಲಿ ರೋಗಿಗಳಿಗೆ ತಕ್ಷಣ ಚಿಕಿತ್ಸೆ ಸಿಗಬೇಕು ಎಂದು ಅಫಘಾತದಲ್ಲಿ ಸಾವಿನ ದರ ಕಡಿಮೆಯಾಗಬೇಕು, ಅದಕ್ಕಾಗಿ ರಾಜ್ಯದ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿ 150 ಟ್ರಾಮಾ ಕೇರ್ ಸೆಂಟರ್‌ಗಳನ್ನು ಸ್ಥಾಪಿಸಲಾಗಿದೆ, ಸದ್ಯದ ಸ್ಥಿತಿಯಲ್ಲಿ 40 ಟ್ರಾಮಾ ಕೇರ್ ಸೆಂಟರ್‌ಗಳನ್ನು ಮುಚ್ಚಲಾಗಿದೆ. ಹಿಂದೂ ಜನಜಾಗೃತಿ ಸಮಿತಿಯ ಸುರಾಜ್ಯ ಅಭಿಯಾನದ ಸಂಯೋಜಕರಾದ ಶ್ರೀ. ಅಭಿಷೇಕ್ ಮುರುಕಟೆ ಅವರಿಗೆ ಮಾಹಿತಿ ಹಕ್ಕು ಕಾಯ್ದೆಯಡಿ ಸಿಕ್ಕ ಮಾಹಿತಿಯಿಂದ ರಾಜ್ಯದ ಟ್ರಾಮಾ ಕೇರ್ ಸೆಂಟರ್ ನ ದುಃಸ್ಥಿತಿ ಬಯಲಾಗಿದೆ.

ಕೊಲ್ಲಾಪುರ, ರತ್ನಾಗಿರಿ, ಸಿಂಧುದುರ್ಗ, ಲಾತೂರ್, ರಾಯಗಡ, ನಂದೂರಬಾರ್, ಬೀಡ್, ಹಿಂಗೋಲಿ, ಛತ್ರಪತಿ ಸಂಭಾಜಿನಗರ ಜಿಲ್ಲೆಗಳಲ್ಲಿ ತಲಾ ಒಂದು ಟ್ರಾಮಾ ಕೇರ್ ಸೆಂಟರ್ ಮುಚ್ಚಲಾಗಿದೆ. ಅಮರಾವತಿ, ಬುಲ್ಢಾಣಾ, ಗಡಚಿರೋಲಿ, ಧಾರಾಶಿವ, ಅಹಲ್ಯಾನಗರ, ಧುಳೆ ಈ ಜಿಲ್ಲೆಗಳಲ್ಲಿ ತಲಾ ಎರಡು ಟ್ರಾಮಾ ಕೇರ್ ಸೆಂಟರ್‌ಗಳನ್ನು ಮುಚ್ಚಲಾಗಿದೆ. ಇದಲ್ಲದೇ ಪಾಲಘರ, ಪುಣೆ, ಸೊಲ್ಲಾಪುರ, ಸಾಂಗ್ಲಿ ಜಿಲ್ಲೆಗಳಲ್ಲಿ ತಲಾ 3 ಮತ್ತು ನಾಸಿಕ್‌ನಲ್ಲಿ 5 ಟ್ರಾಮಾ ಕೇರ್ ಕೇಂದ್ರಗಳನ್ನು ಮುಚ್ಚಲಾಗಿದೆ.

ಟ್ರಾಮಾ ಕೇರ್ ಸೆಂಟರ್ ಆವಶ್ಯಕತೆ!

2022ರಲ್ಲಿ ಮಹಾರಾಷ್ಟ್ರದಲ್ಲಿ ಒಟ್ಟು 24 ಸಾವಿರದ 576 ಅಪಘಾತಗಳು ಸಂಭವಿಸಿದೆ. ಅವರಲ್ಲಿ 11 ಸಾವಿರದ 372 ಜನರು ಸಾವನ್ನಪ್ಪಿದ್ದಾರೆ. 2023ರಲ್ಲಿ ಒಟ್ಟು 25 ಸಾವಿರದ 139 ಅಪಘಾತಗಳು ಸಂಭವಿಸಿದೆ. ಇದರಲ್ಲಿ 11 ಸಾವಿರದ 145 ಮಂದಿ ಸಾವನ್ನಪ್ಪಿದ್ದಾರೆ. 2021ರಲ್ಲಿ ರಾಜ್ಯದಲ್ಲಿ 21 ಸಾವಿರದ 233 ಅಪಘಾತಗಳು ಸಂಭವಿಸಿದೆ. ಇದರಲ್ಲಿ 9 ಸಾವಿರದ 877 ಜನರು ಸಾವನ್ನಪ್ಪಿದ್ದಾರೆ. ಅಂಕಿಅಂಶಗಳನ್ನು ಪರಿಶೀಲಿಸಿದರೆ ಕಳೆದ ಎರಡು ವರ್ಷಗಳಲ್ಲಿ ರಾಜ್ಯದಲ್ಲಿ ಅಪಘಾತ ಮತ್ತು ಸಾವಿನ ಪ್ರಮಾಣವೂ ಹೆಚ್ಚುತ್ತಿದೆ. ಈ ಅಂಕಿ-ಅಂಶವನ್ನು ನೋಡಿದರೆ ಮಹಾರಾಷ್ಟ್ರದಲ್ಲಿ ಟ್ರಾಮಾ ಕೇರ್ ಸೆಂಟರ್‌ನ ಆವಶ್ಯಕತೆಯಿದೆ.

ಟ್ರಾಮಾ ಕೇರ್ ಸೆಂಟರ್ ಎಂದರೇನು?

ರಸ್ತೆ ಅಪಘಾತಗಳಲ್ಲಿ ರೋಗಿಗಳು ಗಂಭೀರವಾಗಿ ಗಾಯಗೊಳ್ಳುತ್ತಾರೆ. ಅನೇಕ ಬಾರಿ ಅಪಘಾತಗಳಲ್ಲಿ ಮೂಳೆಗಳು ಮುರಿಯುತ್ತವೆ. ಮಿದುಳಿಗೆ ಪೆಟ್ಟು ಬಿದ್ದು ಭಾರೀ ರಕ್ತಸ್ರಾವ ಆಗುತ್ತದೆ. ಅಪಘಾತಗ್ರಸ್ತ ವ್ಯಕ್ತಿಗೆ ಸಕಾಲಿಕ ಚಿಕಿತ್ಸೆ ಸಿಗುವುದು ಅತ್ಯಂತ ಮಹತ್ವದ್ದಾಗಿರುತ್ತದೆ; ಆದರೆ ಆಸ್ಪತ್ರೆಗಳು ದೂರವಿರುವುದರಿಂದ ಇದು ಸಾಧ್ಯವಾಗುವುದಿಲ್ಲ. ಇದೆಲ್ಲದರ ಪರಿಣಾಮ ವ್ಯಕ್ತಿಗೆ ಮೋಸವಾಗುತ್ತದೆ, ರೋಗಿಗಳಿಗೆ ತ್ವರಿತ ಮತ್ತು ಆಧುನಿಕ ಚಿಕಿತ್ಸೆಗಳು ಅಪಘಾತ ಸ್ಥಳದಲ್ಲೇ ಸಿಗಬೇಕು ಅದಕ್ಕಾಗಿ ಟ್ರಾಮಾ ಕೇರ್ ಸೆಂಟರ್ ನಿರ್ಮಿಸಲಾಗಿದೆ. ಇದರಲ್ಲಿ ಅಪಘಾತಕ್ಕೀಡಾದ ವ್ಯಕ್ತಿಗಳಿಗೆ ತ್ವರಿತ ಚಿಕಿತ್ಸೆ ಸಿಗಬೇಕು ಎಂದು ಅತ್ಯಾಧುನಿಕ, ಉಪಕರಣಗಳು ಮತ್ತು ತಜ್ಞ ವೈದ್ಯರ ಸೌಲಭ್ಯವಿರುತ್ತದೆ. ಇದರಿಂದಾಗಿ ಅನೇಕ ರೋಗಿಗಳ ಪ್ರಾಣ ರಕ್ಷಣೆಯಾಗಿದೆ; ಆದರೆ ಅಪಘಾತಕ್ಕೀಡಾದವರಿಗೆ ಜೀವ ನೀಡುವ ಟ್ರಾಮಾ ಕೇರ್ ಸೆಂಟರ್ ಗಳ ಆಡಳಿತ ವ್ಯವಸ್ಥೆ ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿದೆ.