Surat Municipal Corporation : ಸೂರತ್ ಮುನ್ಸಿಪಲ್ ಕಾರ್ಪೋರೇಶನ್‌ನ ಪ್ರಧಾನ ಕಛೇರಿಯು ವಕ್ಫ್ ಆಸ್ತಿಯಲ್ಲ !

ವಕ್ಫ್ ಮಂಡಳಿಯ ಆದೇಶವನ್ನು ರದ್ದು ಪಡಿಸಿದ ನ್ಯಾಯಮಂಡಳಿ

ಸೂರತ್ (ಗುಜರಾತ್) – ಸೂರತ್ ಮುನ್ಸಿಪಲ್ ಕಾರ್ಪೊರೇಷನ್ ಮುಖ್ಯ ಕಚೇರಿಯನ್ನು ‘ವಕ್ಫ್ ಆಸ್ತಿ’ ಎಂದು ಘೋಷಿಸುವ ವಕ್ಫ್ ಬೋರ್ಡ್ ನ ನಿರ್ಧಾರವನ್ನು ಅಂತಿಮವಾಗಿ ರದ್ದುಗೊಳಿಸಲಾಗಿದೆ. ನವೆಂಬರ್ 2021 ರಲ್ಲಿ, ವಕ್ಫ್ ಬೋರ್ಡ್ ಅರ್ಜಿಯನ್ನು ಭಾಗಶಃ ಅನುಮೋದಿಸಿ ಮುನ್ಸಿಪಲ್ ಪ್ರಧಾನ ಕಛೇರಿಯನ್ನು ‘ವಕ್ಫ್ ಆಸ್ತಿ’ ಎಂದು ಘೋಷಿಸಿತ್ತು. ಇದಾದ ಬಳಿಕ ಪಾಲಿಕೆಯು ವಕ್ಫ್ ನ್ಯಾಯಮಂಡಳಿಯಲ್ಲಿ ಇದನ್ನು ಪ್ರಶ್ನಿಸಿತ್ತು. ವಕ್ಫ್ ಬೋರ್ಡ್ ನ ದಾವೆಯನ್ನು ನ್ಯಾಯಪೀಠ ತಿರಸ್ಕರಿಸಿತು. ಪ್ರಧಾನ ಕಚೇರಿಯನ್ನು ವಕ್ಫ್ ಆಸ್ತಿ ಎಂದು ಘೋಷಿಸಿರುವ ವಕ್ಫ್ ಬೋರ್ಡ್ ನ ಆದೇಶವು ನ್ಯಾಯಾಂಗ ತತ್ವಕ್ಕೆ ವಿರುದ್ಧವಾಗಿದೆ, ತಪ್ಪಾಗಿದೆ ಹಾಗೂ ಮನಸೋಚ್ಛೆಯಾಗಿದೆ ಎಂದು ನ್ಯಾಯಪೀಠ ಹೇಳಿದೆ.

1. ಅಬ್ದುಲ್ಲಾ ಜರುಲ್ಲಾ ಎಂಬ ವ್ಯಕ್ತಿ 2016 ರಲ್ಲಿ ಸೂರತ್‌ನಲ್ಲಿರುವ ಮುನ್ಸಿಪಲ್ ಕಾರ್ಪೊರೇಷನ್‌ನ ಮುಖ್ಯ ಕಟ್ಟಡಕ್ಕೆ ‘ಹುಮಾಯೂನ್ ಸರೈ’ ಎಂದು ಹೆಸರಿಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು.

2. ವಕ್ಫ್ ಕಾಯ್ದೆಯ ಕಲಂ 36 ಅನ್ನು ಉಲ್ಲೇಖಿಸಿ, ಕೇಂದ್ರ ಕಚೇರಿ ಕಟ್ಟಡವನ್ನು ವಕ್ಫ್ ಬೋರ್ಡ್ ನ ಆಸ್ತಿಯಾಗಿ ನೋಂದಾಯಿಸಬೇಕು ಎಂದು ಒತ್ತಾಯಿಸಿದ್ದರು. ಈ ಕಟ್ಟಡವನ್ನು ಮೊಘಲ್ ಬಾದಶಾಹ ಷಹಜಹಾನ್ ಆಳ್ವಿಕೆಯಲ್ಲಿ ನಿರ್ಮಿಸಲಾಗಿದೆ ಎಂದು ಅರ್ಜಿಯಲ್ಲಿ ಹೇಳಲಾಗಿತ್ತು. ಇದಾದ ನಂತರ ಅದನ್ನು ಷಹಜಹಾನನ ಮಗಳು ಜಹಾಂಆರಾ ಬೇಗಂಗೆ ಜಾಗೀರ್ ಎಂದು ನೀಡಲಾಗಿತ್ತು.

3. ಷಹಜಹಾನ್‌ನ ವಿಶ್ವಾಸಿ ಇಸಹಾಕ್ ಬೇಗ್ ಯಾಜ್ದಿ ಅಲಿಯಾಸ್ ಹಕಿಕತ್ ಖಾನ್ ಈ ಕಟ್ಟಡವನ್ನು 1644 ರಲ್ಲಿ ನಿರ್ಮಿಸಿದ್ದ. ಆ ಸಮಯದಲ್ಲಿ ಇದನ್ನು ‘ಹುಮಾಯೂನ್ ಸರೈ’ ಎಂದು ಕರೆಯಲಾಗುತ್ತಿತ್ತು. ಹಕಿಕತ್ ಖಾನ್ ಈ ಕಟ್ಟಡವನ್ನು ಹಜ್ ಯಾತ್ರಾರ್ಥಿಗಳಿಗಾಗಿ ದಾನ ಮಾಡಿದ್ದನು. ಸುಪ್ರೀಂ ಕೋರ್ಟ್ ತೀರ್ಪಿನ ಆಧಾರದ ಮೇಲೆ, ಧಾರ್ಮಿಕ ಉದ್ದೇಶಗಳಿಗಾಗಿ ದಾನ ಮಾಡಿದ ಆಸ್ತಿಯ ಮೇಲೆ ವಕ್ಫ್ ಬೋರ್ಡ್ ನ ಅಧಿಕಾರ ವ್ಯಾಪ್ತಿ ಹೊಂದಿರಬೇಕು ಎಂದು ಒತ್ತಾಯಿಸಲಾಗಿತ್ತು. ಒಮ್ಮೆ ಆಸ್ತಿ ವಕ್ಫ್‌ಗೆ ಹೋದರೆ ಅದು ವಕ್ಫ್‌ ಜೊತೆಯೇ ಇರುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿತ್ತು.

ಸಂಪಾದಕೀಯ ನಿಲುವು

ಮೂಲತಃ ವಕ್ಫ್ ಕಾಯ್ದೆಯನ್ನೇ ರದ್ದುಪಡಿಸುವ ಅವಶ್ಯಕತೆಯಿದೆ. ಕೇಂದ್ರ ಸರಕಾರ ಈ ನಿಟ್ಟಿನಲ್ಲಿ ಪ್ರಯತ್ನ ನಡೆಸಬೇಕು. ವಕ್ಫ್ ಬೋರ್ಡ್ ದೇಶದ ಮೂರನೇ ಅತಿ ದೊಡ್ಡ ಭೂ ಹಿಡುವಳಿದಾರವಾಗಿದೆ. ವಕ್ಫ್ ಕಾಯಿದೆಯ ನಿಬಂಧನೆಗಳನ್ನು ಪರಿಗಣಿಸಿದರೆ, ಮುಂದಿನ ದಿನಗಳಲ್ಲಿ ವಕ್ಫ್ ಬೋರ್ಡ್ ಮೊದಲ ಸ್ಥಾನಕ್ಕೇರಿದರೆ ಆಶ್ಚರ್ಯಪಡಬೇಡಿ !