ಪಂಢರಪುರದ ಶ್ರೀ ವಿಠ್ಠಲ-ರುಕ್ಮಿಣಿ ದೇವಸ್ಥಾನದ ಕಲ್ಲಿನ ಗೋಡೆಗಳಲ್ಲಿ ದೊಡ್ಡ ಬಿರುಕು !

ಪಂಢರಪುರ – ರಾಜ್ಯದ ಲಕ್ಷಾಂತರ ಭಕ್ತರ ಶ್ರದ್ಧಾಸ್ಥಾನವಾಗಿರುವ ಶ್ರೀ ವಿಠ್ಠಲ-ರುಕ್ಮಿಣಿ ದೇವಸ್ಥಾನದ ಅಭಿವೃದ್ಧಿ ಮತ್ತು ಸಂರಕ್ಷಣಾ ಕಾರ್ಯವು ಪುರಾತತ್ವ ಇಲಾಖೆಯಿಂದ ನಡೆಯುತ್ತಿದೆ. ಈ ಕಾರ್ಯ ನಡೆಯುತ್ತಿರುವಾಗಲೇ ದೇವಸ್ಥಾನದಲ್ಲಿ ಆಘಾತಕಾರಿ ಸಂಗತಿಗಳು ಬೆಳಕಿಗೆ ಬಂದಿವೆ. ದೇವಾಲಯದ ಮೇಲ್ಛಾವಣಿ, ಗೋಡೆಗಳು ಮತ್ತು ಕಲ್ಲಿನ ಕಂಬಗಳು ದೊಡ್ಡ ಬಿರುಕುಗಳನ್ನು ಬಿಡುತ್ತಿವೆ. ಕೆಲವೆಡೆ ಕಂಬಗಳು ಮತ್ತು ಗೋಡೆಗಳಿಗೆ ಮೊಳೆ ಹೊಡೆದಿರುವುದು ಕಂಡು ಬಂದಿದೆ.

ಈ ಸಂದರ್ಭದಲ್ಲಿ ಶ್ರೀ ವಿಠ್ಠಲ ರುಕ್ಮಿಣಿ ಮಂದಿರ ಸಮಿತಿ ಸಹ ಅಧ್ಯಕ್ಷ ಹ.ಭ.ಪ. ಗಹಿನಿನಾಥ ಮಹಾರಾಜ ಔಸೇಕರ್ ಮಾತನಾಡಿ, ‘ಪ್ರಸ್ತುತ ಅಭಿವೃದ್ಧಿ ಹಾಗೂ ಸಂರಕ್ಷಣಾ ಕಾರ್ಯ ನಡೆಯುತ್ತಿರುವಾಗಲೇ ದೇಗುಲದ ಹಲವೆಡೆ ಕಲ್ಲುಗಳು ಒಡೆದು ಹೋಗಿರುವುದು, ಕಲ್ಲಿನ ಗೋಡೆಗಳಿಗೆ ಭಾರಿ ಮೊಳೆ ಹೊಡೆದಿರುವುದು ಕಂಡು ಬಂದಿದೆ. ಗೋಡೆಗಳ ಮೇಲೆ ಬೆಳ್ಳಿ ಹಾಕುವಾಗ ಗೋಡೆಗಳಿಗೆ ಮೊಳೆ ಹೊಡೆಯಲಾಗುತ್ತದೆ. ಕೆಲವೆಡೆ ಸುಣ್ಣ, ಇನ್ನು ಕೆಲವೆಡೆ ಸಿಮೆಂಟ್ ತುಂಬಲಾಗಿದೆ. ಹೀಗಿದ್ದರೂ ಸರಕಾರದಿಂದ ಸಾಕಷ್ಟು ಅನುದಾನ ಬಂದಿರುವುದರಿಂದ ಪ್ರಸ್ತುತ ದೇವಾಲಯದ ಅಭಿವೃದ್ಧಿ ಮತ್ತು ಸಂರಕ್ಷಣಾ ಕಾರ್ಯಗಳು ನಡೆಯುತ್ತಿದ್ದು, ದೇವಾಲಯದ ಸಮಿತಿಯು ಅದನ್ನು ಸ್ವಚ್ಛಗೊಳಿಸಲು ಮತ್ತು ಹಿಂದಿನ ವೈಭವವನ್ನು ಮರುಸ್ಥಾಪಿಸಲು ತನ್ನ ಪ್ರಯತ್ನಿಸುತ್ತಿದೆ.

ಈ ಕುರಿತು ಪುರಾತತ್ವ ಇಲಾಖೆ ಸಹಾಯಕ ನಿರ್ದೇಶಕ ವಿಲಾಸ ವಾಹಣೆ ಮಾತನಾಡಿ, “ದೇವಾಲಯದ ಅಭಿವೃದ್ಧಿಗೆ ಜಿಲ್ಲಾಧಿಕಾರಿ ಪರವಾಗಿ ಪುರಾತತ್ವ ಇಲಾಖೆ ಕಾರ್ಯಪ್ರವೃತ್ತರಾಗುವಂತೆ ಕೋರಿದಾಗ ಮಾಡುತ್ತೇವೆ ಎಂದು ಹೇಳಿದ್ದರು. ನಮ್ಮ ಪ್ರಾಥಮಿಕ ಅಂದಾಜಿನ ಪ್ರಕಾರ 50 ರಿಂದ 70 ವರ್ಷಗಳಿಂದ ಗೋಡೆಗಳಿಗೆ ಸಿಮೆಂಟ್ ತುಂಬುವುದು ಅಥವಾ ಮೊಳೆಗಳನ್ನು ಹೊಡೆಯುವುದು ಮಾಡಲಾಗಿತ್ತು. ಈಗ ಈ ಕಾಮಗಾರಿಯನ್ನು ನಮ್ಮ ಇಲಾಖೆಯ ವತಿಯಿಂದ ದುರಸ್ತಿಗೊಳಿಸಲಾಗುವುದು” ಎಂದು ಹೇಳಿದರು.