Student Prevented To Write Exam: ಬಲಾತ್ಕಾರ ಸಂತ್ರಸ್ತ ವಿದ್ಯಾರ್ಥಿನಿಗೆ 12 ನೇ ತರಗತಿಯ ಪರೀಕ್ಷೆ ಬರೆಯದಂತೆ ತಡೆದರು !

ಅಜ್ಮೇರ್ (ರಾಜಸ್ಥಾನ) ಇಲ್ಲಿನ ಘಟನೆ!

ಅಜ್ಮೇರ್ (ರಾಜಸ್ಥಾನ) – ಇಲ್ಲಿನ ಬಲಾತ್ಕಾರ ಸಂತ್ರಸ್ತ ವಿದ್ಯಾರ್ಥಿನಿಗೆ 12ನೇ ತರಗತಿಯ ಪರೀಕ್ಷೆಗೆ ಹಾಜರಾಗದಂತೆ ತಡೆದಿರುವ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ. ಅಜ್ಮೇರನ ಒಂದು ಖಾಸಗಿ ಶಾಲೆಯ ವಿದ್ಯಾರ್ಥಿನಿಯ ಮೇಲೆ ಹಿಂದಿನ ವರ್ಷ ಸಾಮೂಹಿಕ ಬಲಾತ್ಕಾರ ನಡೆದಿತ್ತು. ಇದರಿಂದ ಆ ಹುಡುಗಿಗೆ ಈ ವರ್ಷ 12ನೇ ತರಗತಿಯ ಪರೀಕ್ಷೆಗೆ ಹಾಜರಾಗಲು ಬಿಡಲಿಲ್ಲವೆಂದು ಸಂತ್ರಸ್ತ ಹುಡುಗಿಯು ಆರೋಪಿಸಿದ್ದಾಳೆ. ಸಂತ್ರಸ್ತೆಯು ಶಾಲೆಯ ವಿರುದ್ಧ ದಾಖಲಿಸಿರುವ ದೂರಿನಲ್ಲಿ `ಶಾಲೆಯ ವಾತಾವರಣ ಕೆಡುತ್ತದೆ’ ಎಂದು ಕಾರಣ ಹೇಳಿ ಅವಳನ್ನು 12ನೇ ತರಗತಿಯ ಪರೀಕ್ಷೆಗೆ ಹಾಜರಾಗಲು ಬಿಡಲಿಲ್ಲ.

ಸಂತ್ರಸ್ತೆಯ ಆರೋಪದ ಬಳಿಕ ಕೋಲಾಹಲ ಉಂಟಾಯಿತು. ಮಕ್ಕಳ ಕಲ್ಯಾಣ ಆಯೋಗವು ಈ ಪ್ರಕರಣದಲ್ಲಿ ಈಗ ಗಮನಹರಿಸಿದೆ. ಸದರಿ ಸಂತ್ರಸ್ತೆಯು ಕಳೆದ 4 ತಿಂಗಳುಗಳಿಂದ ಶಾಲೆಗೆ ಹೋಗದೇ ಇದ್ದ ಕಾರಣ ಅವಳನ್ನು ಪರೀಕ್ಷೆಗೆ ಹಾಜರಾಗಲು ಅನುಮತಿ ನೀಡಿರಲಿಲ್ಲವೆಂದು ಶಾಲೆಯ ಪರವಾಗಿ ಹೇಳಲಾಗಿದೆ. ಮಕ್ಕಳ ಕಲ್ಯಾಣ ಆಯೋಗ ಈ ಪ್ರಕರಣದಲ್ಲಿ ಮಧ್ಯಪ್ರವೇಶಿಸಿ ಪ್ರಕರಣ ದಾಖಲಿಸಿದೆ.

ಮಕ್ಕಳ ಕಲ್ಯಾಣ ಆಯೋಗದ ಅಧ್ಯಕ್ಷೆ ಅಂಜಲಿ ಶರ್ಮಾ ಮಾತನಾಡಿ, ಸಂತ್ರಸ್ತ ವಿದ್ಯಾರ್ಥಿನಿ ಮಾರ್ಚ್‌ನಲ್ಲಿ ಪರೀಕ್ಷೆಗೆ ಗೈರು ಹಾಜರಾಗುವುದರಿಂದ ಮರುಪರೀಕ್ಷೆಗೆ ಹೇಗೆ ಹಾಜರಾಗಬಹುದು ಎಂದು ಚಿಂತಿಸುತ್ತಿದೆಯೆಂದು ಹೇಳಿದರು.

ಯಾವ ಪ್ರಕರಣ?

ಅಕ್ಟೋಬರ್ 2023 ರಲ್ಲಿ, ಸಂತ್ರಸ್ತ ವಿದ್ಯಾರ್ಥಿನಿಯ ಮೇಲೆ ಆಕೆಯ ಚಿಕ್ಕಪ್ಪ ಮತ್ತು ಇನ್ನಿಬ್ಬರು ಸಾಮೂಹಿಕವಾಗಿ ಬಲಾತ್ಕಾರ ಮಾಡಿದ್ದರು. ಈ ಪ್ರಕರಣದ ಬಳಿಕ ಶಾಲೆಯ ಆಡಳಿತ ಮಂಡಳಿಯು ಹುಡುಗಿಯನ್ನು ಶಾಲೆಗೆ ಬರಬಾರದೆಂದು ಸಲಹೆ ನೀಡಿತ್ತು. ಅವಳು ಮನೆಯಿಂದಲೇ ಅಭ್ಯಾಸ ಮಾಡಬೇಕು, ಒಟ್ಟಾರೆ ಶಾಲೆಯ ವಾತಾವರಣ ಕೆಡಬಾರದು ಎಂದು ಶಾಲೆ ಸೂಚಿಸಿತ್ತು ಎನ್ನುವ ಮಾಹಿತಿಯನ್ನು ಸಂತ್ರಸ್ತೆ ಅಂಜಲಿ ಶರ್ಮಾ ಇವರು ನೀಡಿದರು. ಶರ್ಮಾ ಮಾತನಾಡಿ ಸಂತ್ರಸ್ಥೆ ಕಲಿಯುವುದರಲ್ಲಿ ಬಹಳ ಜಾಣೆಯಾಗಿದ್ದಾಳೆ, 10ನೇ ಪರೀಕ್ಷೆಯಲ್ಲಿ ಅವರು 97% ಅಂಕಗಳನ್ನು ಪಡೆದಿದ್ದಳು. ಅವಳು 12ನೇ ಪರೀಕ್ಷೆಗೆ ಹಾಜರಾದರೆ ಖಂಡಿತವಾಗಿಯೂ ಒಳ್ಳೆಯ ಅಂಕಗಳನ್ನು ಪಡೆಯುತ್ತಾಳೆ ಮತ್ತು ಶಾಲೆಯ ನಿರ್ಲಕ್ಷ್ಯದಿಂದ ವರ್ಷವೇ ವ್ಯರ್ಥವಾಗುವ ಭಯವಿದೆ ಎಂದು ಹೇಳಿದರು.