ಪ್ರಸಿದ್ಧ ‘ಮೈಕ್ರೋಸಾಫ್ಟ್’ ಸಂಸ್ಥೆಗೆ ಸಂದೇಹ
ನವ ದೆಹಲಿ : ಕೃತಕ ಬುದ್ಧಿಮತ್ತೆ (ಎಐ) ಬಳಸಿಕೊಂಡು ದೇಶದಲ್ಲಿ ಲೋಕಸಭೆಯ ಸಾರ್ವತ್ರಿಕ ಚುನಾವಣೆಯಲ್ಲಿ ಹಸ್ತಕ್ಷೇಪ ಮಾಡಲು ಚೀನಾ ಪ್ರಯತ್ನಿಸುತ್ತಿದೆ ಎಂದು ಪ್ರಸಿದ್ಧ ಮೈಕ್ರೋಸಾಫ್ಟ್ ತನ್ನ ಸಂದೇಹವನ್ನು ವ್ಯಕ್ತಪಡಿಸಿದೆ. ಮೈಕ್ರೋಸಾಫ್ಟ್‌ನ ‘ಸೇಮ್ ಟಾರ್ಗೆಟ್ಸ್, ನ್ಯೂ ಪ್ಲೇಬುಕ್ಸ್ : ಈಸ್ಟ್ ಏಷ್ಯಾ ಥ್ರೆಟ್ ಆಕ್ಟರ್ಸ್ ಎಂಪ್ಲಾಯ್ ಯುನಿಕ್ ಮೆಥಡ್ಸ್’ ಎಂಬ ವರದಿಯನ್ನು ‘ಮೈಕ್ರೋಸಾಫ್ಟ್ ಥ್ರೆಟ್ ಅನಾಲಿಸಿಸ್ ಸೆಂಟರ್’ ಬಿಡುಗಡೆ ಮಾಡಿದೆ. ಅದರಲ್ಲಿ ಈ ಸಂದೇಹ ವ್ಯಕ್ತಪಡಿಸಿದೆ.
ಈ ವರದಿಯಲ್ಲಿ, ಭಾರತದಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆ, ಅಮೆರಿಕದಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆ ಹಾಗೂ ದಕ್ಷಿಣ ಕೊರಿಯಾದ ರಾಷ್ಟ್ರೀಯ ಅಸೆಂಬ್ಲಿ ಚುನಾವಣೆಗಳಿಗೆ ‘ಎ.ಐ’ ಮೂಲಕ ಅಡ್ಡಿಪಡಿಸಲು ಚೀನಾ ಯತ್ನಿಸಲಿದೆ ಎಂದು ಹೇಳಿದೆ. ಚೀನಾ ತನ್ನ ಮತದಾರರ ಒಲವನ್ನು ರಾಜಕೀಯ ಪಕ್ಷಗಳತ್ತ ಬದಲಾಯಿಸಲು ಅಥವಾ ಕೃತಕ ಬುದ್ಧಿಮತ್ತೆಯ ಮೂಲಕ ಅವರನ್ನು ದಾರಿ ತಪ್ಪಿಸಲು ಪ್ರಯತ್ನಿಸುತ್ತದೆ. ಚುನಾವಣೆಯ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಹೊಂದಿರುವ ಸಾರ್ವಜನಿಕ ಅಭಿಪ್ರಾಯದ ಮೇಲೆ ಪ್ರಭಾವ ಬೀರುವ ಇಂತಹ ವಿಷಯವನ್ನು ಅವರು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡುತ್ತಾರೆ. ಇಂತಹ ವಿಷಯಗಳು ಚುನಾವಣೆಯ ಫಲಿತಾಂಶದ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳು ಕಡಿಮೆ ಇದ್ದರೂ ಕೂಡ ಅಂತಹ ಪ್ರಯೋಗ ಮಾಡಲಾಗುತ್ತದೆ ಎಂದು ಹೇಳಿದೆ.