The Kerala Story On Doordarshan : ಕೇರಳದ ಹಿಂದೂ ದ್ವೇಷಿ ಮುಖ್ಯಮಂತ್ರಿಗಳ ವಿರೋಧವನ್ನು ಲೆಕ್ಕಿಸದೇ ದೂರದರ್ಶನದಲ್ಲಿ ‘ದಿ ಕೇರಳ ಸ್ಟೋರಿ’ ಚಲನಚಿತ್ರ ಪ್ರಸಾರ !

ತಿರುವನಂತಪುರಂ (ಕೇರಳ) – ‘ದಿ ಕೇರಳ ಸ್ಟೋರಿ’ ಚಲನಚಿತ್ರವನ್ನು ಏಪ್ರಿಲ್ 5 ರಂದು ರಾತ್ರಿ 8 ಗಂಟೆಗೆ ದೂರದರ್ಶನ ಪ್ರಸಾರ ಮಾಡಿದೆ. ಈ ಪ್ರಸಾರದ ನಿರ್ಣಯದ ಬಗ್ಗೆ ಈ ಹಿಂದೆ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಟೀಕಿಸಿದ್ದರು. ವಿಜಯನ್ ಅವರು `ಎಕ್ಸ’ ಮಾಧ್ಯಮದಲ್ಲಿ ಪೋಸ್ಟ್ ಮಾಡಿ, `ದೂರದರ್ಶನವು ಭಾಜಪ ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಸಾರಯಂತ್ರವಾಗಬಾರದು’, ಎಂದು ಟೀಕಿಸಿದ್ದಾರೆ. ಈ ಚಿತ್ರದ ಪ್ರಸಾರ ಮಾಡದಂತೆ ವಿಜಯನ್ ಕೋರಿದ್ದರು. ಮೇ 5, 2023 ರಂದು ಬಿಡುಗಡೆಗೊಂಡ ಈ ಚಿತ್ರವನ್ನು ಕೇರಳದ ಸಾಮ್ಯವಾದಿ ಪಕ್ಷವು(ಕಮ್ಯುನಿಸ್ಟ್ ಪಕ್ಷ) ನಿಷೇಧಿಸಿತ್ತು.

1. ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಪಕ್ಷವು ಈ ಕುರಿತು ಟೀಕಿಸುತ್ತಾ, ಸಾರ್ವತ್ರಿಕ ಚುನಾವಣೆಯ ಕಾರಣ ಭಾಜಪ ಈ ವಿವಾದಾತ್ಮಕ ಚಿತ್ರವನ್ನು ಪ್ರದರ್ಶಿಸಲು ನಿರ್ಧರಿಸಿದೆ. ಕೇರಳದಲ್ಲಿ ಕೇಸರಿ ಪಕ್ಷವು ಪ್ರವೇಶಿಸಲು ಸಾಧ್ಯವಾಗದ ಕಾರಣ, ಭಾಜಪ ತನ್ನ ರಾಜಕೀಯ ನೀತಿಯನ್ನು ಮುಂದೆ ತರಲು ಪ್ರಯತ್ನಿಸುತ್ತಿದೆ. ಇದು ಕೇರಳಕ್ಕೆ ಒಂದು ಸವಾಲಿನಂತಿದೆ.

2. ಈ ಚಿತ್ರ ಪ್ರದರ್ಶನಗೊಂಡಾಗ ಕೇರಳದಲ್ಲಿ ಭಾರೀ ಪ್ರತಿಭಟನೆಗಳು ನಡೆದಿದ್ದವು. ಸೆನ್ಸಾರ್ ಬೋರ್ಡ್ ಈ ಚಲನಚಿತ್ರದಲ್ಲಿರುವ 10 ದೃಶ್ಯಗಳನ್ನು ತೆಗೆದು ಹಾಕಿತ್ತು. ಕೇರಳ ಉಚ್ಚ ನ್ಯಾಯಾಲಯವು ಕಳೆದ ವರ್ಷ ಚಲನಚಿತ್ರದ ಟ್ರೈಲರ್ ನಲ್ಲಿ ಯಾವುದೇ ನಿರ್ದಿಷ್ಟ ಸಮುದಾಯದ ವಿರುದ್ಧ ಆಕ್ಷೇಪಾರ್ಹವೆನಿಸುವ ಯಾವುದೇ ವಿಷಯವಿಲ್ಲ ಎಂದು ಹೇಳುತ್ತಾ ಚಲನಚಿತ್ರ ಪ್ರದರ್ಶನವನ್ನು ಸ್ಥಗಿತಗೊಳಿಸಲು ನಿರಾಕರಿಸಿತ್ತು.

‘ದಿ ಕೇರಳ ಸ್ಟೋರಿ’ಯಲ್ಲಿ ಏನಿದೆ?

‘ದಿ ಕೇರಳ ಸ್ಟೋರಿ’ ಚಿತ್ರವು ವಿವಿಧ ಸಮುದಾಯಗಳ ಹುಡುಗಿಯರು ಇಸ್ಲಾಂಗೆ ಮತಾಂತರಗೊಳ್ಳುವುದು ಮತ್ತು ಅವರು ಇಸ್ಲಾಮಿಕ್ ಸ್ಟೇಟ್‌ಗೆ ಸೇರಿಕೊಳ್ಳುವುದನ್ನು ತೋರಿಸಿದೆ. ಈ ಚಿತ್ರವು 4 ಹುಡುಗಿಯರ ಜೀವನವನ್ನು ಆಧರಿಸಿದೆ. 4 ಕಾಲೇಜು ಹುಡುಗಿಯರು ಒಂದು ಭಯೋತ್ಪಾದಕ ಸಂಘಟನೆಯನ್ನು ಹೇಗೆ ಸೇರುತ್ತಾರೆ ಎಂಬುದನ್ನು ತೋರಿಸಲಾಗಿದೆ.