‘ಕರ್ನಾಟಕ ಉಚ್ಚ ನ್ಯಾಯಾಲಯದ ಪರಿಸರದಲ್ಲಿ ಎಪ್ರಿಲ 3 ರಂದು ಶ್ರೀನಿವಾಸ ಹೆಸರಿನ ವ್ಯಕ್ತಿಯು ಚಾಕುವಿನಿಂದ ತನ್ನ ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಪ್ರಯತ್ನ.’

ಆತ್ಮಹತ್ಯೆಯ ಕಾರಣ ಇದುವರೆಗೂ ತಿಳಿದುಬಂದಿಲ್ಲ

ಬೆಂಗಳೂರು – ಎಪ್ರಿಲ್ 3 ರಂದು ಕರ್ನಾಟಕ ಉಚ್ಚನ್ಯಾಯಾಲಯದಲ್ಲಿ ಮುಖ್ಯ ನ್ಯಾಯಮೂರ್ತಿಗಳ ಮುಂದೆಯೇ ಶ್ರೀನಿವಾಸ ಹೆಸರಿನ ವ್ಯಕ್ತಿಯು ಚಾಕುವಿನಿಂದ ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದನು. ಅಲ್ಲಿದ್ದ ಭದ್ರತಾ ಸಿಬ್ಬಂದಿ ತಕ್ಷಣವೇ ಅವನನ್ನು ಆ ಕೃತ್ಯ ಮಾಡಿಕೊಳ್ಳುವಾಗ ದೂರಗೊಳಿಸಿದರು ಮತ್ತು ಹತ್ತಿರದ ಆಸ್ಪತ್ರೆಗೆ ಕರೆದೊಯ್ದರು. ಈ ಘಟನೆಯ ಬಳಿಕ ಮುಖ್ಯ ನ್ಯಾಯಾಧೀಶರು ಉಚ್ಚನ್ಯಾಯಾಲಯದ ಭದ್ರತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಈ ಘಟನೆಯ ಬಳಿಕ ಉಚ್ಚನ್ಯಾಯಾಲಯದ ಭದ್ರತೆಯನ್ನು ಹೆಚ್ಚಿಸಲಾಯಿತು. ಶ್ರೀನಿವಾಸ ಆತ್ಮಹತ್ಯೆಯ ಪ್ರಯತ್ನ ಏಕೆ ಮಾಡಿದನು, ಇದು ಇದುವರೆಗೂ ತಿಳಿದುಬಂದಿಲ್ಲ. ಡಾಕ್ಟರರ ಅನುಮತಿಯ ಬಳಿಕ ಪೊಲೀಸರು ಶ್ರೀನಿವಾಸನ ವಿಚಾರಣೆ ನಡೆಸಲಿದ್ದಾರೆ.

ಹರಿತವಾದ ವಸ್ತುವನ್ನು ನ್ಯಾಯಾಲಯಕ್ಕೆ ಹೇಗೆ ತರಲಾಯಿತು ? – ಮುಖ್ಯ ನ್ಯಾಯಾಧೀಶರ ಪ್ರಶ್ನೆ

ಮುಖ್ಯ ನ್ಯಾಯಮೂರ್ತಿ ಅಂಜಾರಿಯಾ ಇವರು ಉಚ್ಚನ್ಯಾಯಾಲಯದ ಪರಿಸರದಲ್ಲಿ ಭದ್ರತಾಲೋಪಗಳ ಬಗ್ಗೆ ಚಿಂತೆಯನ್ನು ವ್ಯಕ್ತಪಡಿಸಿದರು ಮತ್ತು ‘ಆ ವ್ಯಕ್ತಿ ನ್ಯಾಯಾಲಯದಲ್ಲಿ ಹರಿತವಾದ ವಸ್ತುವನ್ನು ತರುವಲ್ಲಿ ಹೇಗೆ ಯಶಸ್ವಿಯಾದನು ?’ ಎಂದು ವಿಚಾರಣೆ ನಡೆಸಿದರು. ಅವರು ಘಟನಾ ಸ್ಥಳದ ಪಂಚನಾಮೆ ನಡೆಸುವಂತೆ ಪೊಲೀಸರಿಗೆ ಆದೇಶಿಸಿದರು.

ಸಂಪಾದಕೀಯ ನಿಲುವು

‘ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ ! ಉಚ್ಚ ನ್ಯಾಯಾಲಯದಲ್ಲಿ ನೇರವಾಗಿ ಮುಖ್ಯ ನ್ಯಾಯಮೂರ್ತಿಗಳೆದುರು ಶಸ್ತ್ರವನ್ನು ಹಿಡಿದುಕೊಂಡು ಯುವಕನು ಬರುತ್ತಾನೆ, ಇದನ್ನು ನೋಡಿದರೆ ಇಲ್ಲಿ ಭದ್ರತೆಯ ಚಿಂದಿ ಉಡಾಯಿಸಿದಂತೆ ಆಗಿದೆ. ಇದಕ್ಕೆ ಜವಾಬ್ದಾರರಾಗಿರುವವರ ಮೇಲೆ ಕ್ರಮ ಕೈಕೊಳ್ಳಬೇಕು !